ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ರಿಯಲ್ ಮ್ಯಾಡ್ರಿಡ್ ತ್ಯಜಿಸಲಿದ್ದಾರೆಯೇ ಕ್ರಿಸ್ಚಿಯಾನೋ ರೊನಾಲ್ಡೋ?

RONALDO HINTS AT SHOCK MADRID EXIT

ಮ್ಯಾಡ್ರಿಡ್, ಮೇ 28: ರಿಯಲ್ ಮ್ಯಾಡ್ರಿಡ್ ತಂಡದ ಸ್ಟಾರ್ ಆಟಗಾರ ಪೋರ್ಚುಗಲ್ ನ ಕ್ರಿಸ್ಚಿಯಾನೊ ರೊನಾಲ್ಡೋ ಅವರು ತಂಡವನ್ನು ತೊರೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಕಾರಣ ಸ್ವತಃ ರೊನಾಲ್ಡೋ ಅವರೇ ನೀಡಿರುವ ಹೇಳಿಕೆ ಅವರು ತಂಡವನ್ನು ತ್ಯಜಿಸುವ ಅನುಮಾನ ಮೂಡಿಸಿದೆ.

ಚಾಂಪಿಯನ್ಸ್ ಲೀಗ್ 2018 : ಹ್ಯಾಟ್ರಿಕ್ ಸಾಧಿಸಿದ ರಿಯಲ್ ಮ್ಯಾಡ್ರಿಡ್ಚಾಂಪಿಯನ್ಸ್ ಲೀಗ್ 2018 : ಹ್ಯಾಟ್ರಿಕ್ ಸಾಧಿಸಿದ ರಿಯಲ್ ಮ್ಯಾಡ್ರಿಡ್

ಕೀವ್ ನಲ್ಲಿ ಶನಿವಾರ ನಡೆದ ಚಾಂಪಿಯನ್ಸ್ ಲೀಗ್ ಫುಟ್ಬಾಲ್ ಫೈನಲ್ ನಲ್ಲಿ ರೊನಾಲ್ಡೋ ಅವರನ್ನೊಳಗೊಂಡ ರಿಯಲ್ ಮ್ಯಾಡ್ರಿಡ್ ತಂಡ ಲಿವರ್ ಪೂಲ್ ವಿರುದ್ಧ 3-1 ಅಂತರದ ಗೆಲುವು ದಾಖಲಿಸಿತ್ತು. ಸತತ ಮೂರನೇ ಬಾರಿಗೆ ರಿಯಲ್ ಮ್ಯಾಡ್ರಿಡ್ ತಂಡ ಚಾಂಪಿಯನ್ಸ್ ಲೀಗ್ ಕಪ್ ಎತ್ತಿ ಹಿಡಿದ ಖುಷಿಯೊಂದಿಗೆ ಭಾನುವಾರ ಸಂಭ್ರಮಾಚರಿಸುತ್ತಿದ್ದಾಗ ರೊನಾಲ್ಡೋ ತಂಡವನ್ನು ಬಿಡುವ ಸುಳಿವು ನೀಡಿದರು.

ಚಾಂಪಿಯನ್ಸ್ ಲೀಗ್ ಗೆಲುವಿನ ಬಳಿಕ ಸಂದರ್ಶನವೊಂದರ ವೇಳೆ ಮುಂಬರುವ ದಿನಗಳಲ್ಲೂ ತಂಡದ ಬಲವಾಗಿ ಇರಲಿದ್ದೀರಾ? ಎಂಬ ಪ್ರಶ್ನೆಗೆ ರೊನಾಲ್ಡೋ ಉತ್ತರಿಸುತ್ತಾ, 'ನಾವಿದರ ಬಗ್ಗೆ ಮುಂದೆ ಮಾತಾಡೋಣ. ಒಟ್ಟಿನಲ್ಲಿ ನನಗೆ ರಿಯಲ್ ಮ್ಯಾಡ್ರಿಡ್ ತಂಡದಲ್ಲಿ ಆಡಿದ್ದಕ್ಕಾಗಿ ತುಂಬಾ ಖುಷಿಯಿದೆ. ನಿಮ್ಮ ಪ್ರಶ್ನೆಗೆ ಸಂಬಂಧಿಸಿ ನಾನು ಮುಂದೆ ಪ್ರತಿಕ್ರಿಯಿಸಲಿದ್ದೇನೆ' ಎಂದಿದ್ದರು.

'ತಂಡದ ಸಹ ಆಟಗಾರರೊಂದಿಗೆ ನಾನು ಸಾಕಷ್ಟು ಸಂಭ್ರಮಿಸಿದ್ದೇನೆ. ಎಲ್ಲದಕ್ಕಿಂತ ಮುಖ್ಯ ವಿಚಾರವೆಂದರೆ ನಾವು ಒಂದು ತಂಡವಾಗಿದ್ದುಕೊಂಡು ಇತಿಹಾಸ ನಿರ್ಮಿಸಿದ್ದೇವೆ. ಹಾಗಾಗಿ ನಾನು ನನ್ನೆಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳನ್ನು ಹೇಳಬಯಸುತ್ತೇನೆ' ಎಂದು ರೊನಾಲ್ಡೋ ತಂಡದ ತ್ಯಜಿಸುವ ಅನುಮಾನಕ್ಕೀಡಾಗುವಂತಹ ಪ್ರತಿಕ್ರಿಯೆ ನೀಡಿದ್ದರು.

ಈ ಬಗ್ಗೆ ರೊನಾಲ್ಡೋ ಅವರನ್ನು ಕೆಣಕಿದಾಗ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು. 'ಇನ್ನು ಕೆಲವೇ ದಿನಗಳಲ್ಲಿ ನಾನು ಈ ಬಗ್ಗೆ ಉತ್ತರಿಸಲಿದ್ದೇನೆ' ಎಂದಷ್ಟೇ ಹೇಳಿದರು. ಜೊತೆಗೆ ರೊನಾಲ್ಡೋ ಅವರು 'ಇನ್ನು ಕೊಂಚ ವಿಶ್ರಮಿಸಬೇಕಿದೆ. ಬದುಕನ್ನು ಸವಿಯಬೇಕಿದೆ. ನಂತರ ಬೇರೊಂದು ದಾರಿಯಲ್ಲಿ ನಡೆಯಬೇಕಿದೆ' ಎಂದು ಒಗಟಿನ ರೀತಿಯಲ್ಲಿ ಹೇಳಿದ್ದೂ ಅವರು ರಿಯಲ್ ಮ್ಯಾಡ್ರಿಡ್ ತಂಡ ತೊರೆಯಲಿದ್ದಾರೆ ಎಂಬ ಅನುಮಾನಕ್ಕೆ ಪುಷ್ಟಿ ನೀಡಿದೆ.

Story first published: Monday, May 28, 2018, 16:20 [IST]
Other articles published on May 28, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X