ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫುಟ್ಬಾಲ್‌: ರೊನಾಲ್ಡೊ ಮುಡಿಗೆ ಇಟಲಿಯ ಶ್ರೇಷ್ಠ ಫುಟ್ಬಾಲಿಗ ಪ್ರಶಸ್ತಿ

Ronaldo wins Serie A Player of the Year award

ರೋಮ್‌, ಮೇ 19: ಪೋರ್ಚುಗಲ್‌ನ ಅನುಭವಿ ಫುಟ್ಬಾಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ, ಇಟಲಿಯ 'ಸೀರೀಸ್ ಎ ವರ್ಷದ ಶ್ರೇಷ್ಠ ಫುಟ್ಬಾಲಿಗ' ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಇಟಲಿಯ ಯುವೆಂಟಸ್‌ ತಂಡವನ್ನು ಪ್ರತಿನಿಧಿಸಿದ ಮೊದಲ ವರ್ಷದಲ್ಲೇ ರೊನಾಲ್ಡೊ ಈ ಅದ್ಭುತ ಸಾಧನೆ ಮಾಡಿದ್ದಾರೆ.

ವಿಶ್ವಕಪ್‌ನಲ್ಲಿ ಕಿವೀಸ್‌ ಪರ ಆರಂಭದಲ್ಲಿ ಈ ಆಟಗಾರ ಆಡುವುದು ಡೌಟ್‌!ವಿಶ್ವಕಪ್‌ನಲ್ಲಿ ಕಿವೀಸ್‌ ಪರ ಆರಂಭದಲ್ಲಿ ಈ ಆಟಗಾರ ಆಡುವುದು ಡೌಟ್‌!

ಇದರೊಂದಿಗೆ ಇಂಗ್ಲೆಂಡ್‌, ಸ್ಪೇನ್‌ ಹಾಗೂ ಇಟಲಿಯಲ್ಲಿ ರೊನಾಲ್ಡೊ, ವರ್ಷದ ಶ್ರೇಷ್ಠ ಡೊಮಾಸ್ಟಿಕ್‌ ಅಟಗಾರ ಪ್ರಶಸ್ತಿ ಪಡೆದ ಸಾಧನೆ ಮಾಡಿದ್ದಾರೆ. ಇದಲ್ಲದೆ ವಿಶ್ವ ಶ್ರೇಷ್ಠ ಫುಟ್ಬಾಲ್‌ ಆಟಗಾರನಿಗೆ ಪ್ರತಿವರ್ಷ ನೀಡಲಾಗುವ ಬಲೂನ್‌ ಡಿ'ಓರ್‌ ಪ್ರಶಸ್ತಿಗೂ 5 ಬಾರಿ ಭಾಜನರಾಗಿರುವ ರೊನಾಲ್ಡೊ, ಮೂರು ರಾಷ್ಟ್ರಗಳಲ್ಲಿ ಲೀಗ್‌ ಚಾಂಪಿಯನ್‌ಷಿಪ್‌ಗಳನ್ನು ಗೆದ್ದ ಆಟಗಾರ ಕೂಡ.

<strong>ODI ವಿಶ್ವಕಪ್‌ನಲ್ಲಿ ದಾಖಲಾದ 5 ವೈಯಕ್ತಿಕ ಗರಿಷ್ಠ ಮೊತ್ತಗಳಿವು!</strong>ODI ವಿಶ್ವಕಪ್‌ನಲ್ಲಿ ದಾಖಲಾದ 5 ವೈಯಕ್ತಿಕ ಗರಿಷ್ಠ ಮೊತ್ತಗಳಿವು!

34 ವರ್ಷದ ಫಾರ್ವರ್ಡ್‌ ಆಟಗಾರ 2018ರಲ್ಲಿ ಸ್ಪೇನ್‌ನ ದೈತ್ಯ ಕ್ಲಬ್‌ ರಿಯಲ್‌ ಮ್ಯಾಡ್ರಿಡ್‌ ತಂಡವನ್ನು ತೊರೆದು, ಇಟಲಿಯ ಯುವೆಂಟಸ್‌ಗೆ ಸೇರಿದ್ದರು. ರಿಯಲ್‌ ಮ್ಯಾಡ್ರಿಡ್‌ ಪರ ಸತತ ಮೂರು ಚಾಂಪಿಯನ್ಸ್‌ ಲೀಗ್‌ ಗೆದ್ದಿರುವ ರೊನಾಲ್ಡೊ, ಕ್ಲಬ್‌ ಪರ ಅತಿ ಹೆಚ್ಚು ಗೋಲ್‌ಗಳನ್ನು ಗಳಿಸಿದ ಆಟಗಾರನಾಗಿದ್ದಾರೆ.

<strong>World Cupನಲ್ಲಿ ಅಬ್ಬರಿಸಬಲ್ಲ Top 10 ಬ್ಯಾಟ್ಸ್‌ಮನ್‌ಗಳಿವರು! </strong>World Cupನಲ್ಲಿ ಅಬ್ಬರಿಸಬಲ್ಲ Top 10 ಬ್ಯಾಟ್ಸ್‌ಮನ್‌ಗಳಿವರು!

ಇನ್ನು ಪ್ರಸಕ್ತ ಸಾಲಿನಲ್ಲಿ ಯುವೆಂಟಸ್‌ ಪರ ಅಬ್ಬರಿಸುತ್ತಿರುವ ರೊನಾಲ್ಡೊ ಒಟ್ಟಾರೆ 21 ಗೋಲ್‌ಗಳನ್ನು ದಾಖಲಿಸಿದ್ದಾರೆ.

ಇದೇ ವೇಳೆ ಇಂಟರ್‌ ಮಿಲಾನ್‌ ತಂಡದ ಸಮಿರ್‌ ಹ್ಯಾಂಡನೋವಿಕ್‌ ಇಟಲಿಯ ವರ್ಷದ ಶ್ರೇಷ್ಠ ಗೋಲ್‌ಕೀಪರ್‌ ಪ್ರಶಸ್ತಿಗೆ ಭಾಜನಾರಾಗಿದ್ದಾರೆ. ಎಸ್‌ಎಸ್‌ಸಿ ನಾಪೊಲಿ ತಂಡದ ಕಲಿಡೊ ಕೌಲಿಬೇಲಿ ಶ್ರೇಷ್ಠ ಡಿಫೆಂಡರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಈ ಬಾರಿ ವಿಶ್ವಕಪ್‌ನಲ್ಲಿ ಮೋಡಿ ಮಾಡಬಲ್ಲ Top 5 ಸ್ಪಿನ್ನರ್‌ಗಳು!ಈ ಬಾರಿ ವಿಶ್ವಕಪ್‌ನಲ್ಲಿ ಮೋಡಿ ಮಾಡಬಲ್ಲ Top 5 ಸ್ಪಿನ್ನರ್‌ಗಳು!

2018ರಲ್ಲಿ ಇಂಟರ್‌ ಮಿಲಾನ್‌ ತಂಡ ಮೌರೊ ಇಕಾರ್ಡಿ ಸೀರೀಸ್‌ 'ಎ' ಶ್ರೇಷ್ಠ ಫುಟ್ಬಾಲ್‌ ಆಟಗಾರ ಪ್ರಶಸ್ತಿ ಪಡೆದಿದ್ದರು. 2017-18ರ ಸಾಲಿನಲ್ಲಿ ಇಕಾರ್ಡಿ ಒಟ್ಟಾರೆ 29 ಗೋಲ್‌ಗಳನ್ನು ದಾಖಲಿಸಿ ಮಿಂಚಿದ್ದರು.

Story first published: Sunday, May 19, 2019, 13:30 [IST]
Other articles published on May 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X