ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಅದೃಷ್ಟವಶಾತ್ ವಿಮಾನ ಅಪಘಾತದಿಂದ ಪಾರಾದ ಫುಟ್‌ಬಾಲ್ ಆಟಗಾರರು

By Manjunatha
Saudi team lands safely in Rostov after engine fire

ಮಾಸ್ಕೋ, ಜೂನ್ 19: ರಷ್ಯಾ ಫುಟ್‌ಬಾಲ್ ವಿಶ್ವಕಪ್‌ನಲ್ಲಿ ಭಾಗವಹಿಸಿರುವ ಸೌದಿ ಅರೆಬಿಯಾ ಫುಟ್‌ಬಾಲ್ ಆಟಗಾರರು ಬದುಕಿದೆಯಾ ಬಡ ಜೀವವೇ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.

ಅವರು ಪ್ರಯಾಣಿಸುತ್ತಿದ್ದ ವಿಮಾನದ ಎಂಜಿನ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಕಾರಣ ಎಲ್ಲರ ಜೀವ ಬಾಯಿಗೆ ಬಂದಿತ್ತು. ಆದರೆ ಪೈಲೆಟ್‌ನ ಸಮಯ ಪ್ರಜ್ಞೆಯಿಂದ ಯಾವುದೇ ಅನಾಹುತವಾಗಲಿಲ್ಲ.

ಫೀಫಾ ವಿಶ್ವಕಪ್ 2018 ವಿಶೇಷ ಪುಟ : ವೇಳಾಪಟ್ಟಿ | ತಂಡಗಳು

ಸೌದಿ ಅರೆಬಿಯಾ ತಂಡವು ತಮ್ಮ ಮುಂದಿನ ಪಂದ್ಯಕ್ಕಾಗಿ ರೋಸ್ತೋವ್ ಆನ್ ಡಾನ್‌ ಗೆ ತೆರಳುತ್ತಿತ್ತು, ನಿಲ್ದಾಣದಲ್ಲಿ ಲ್ಯಾಂಡ್‌ ಆಗುವ ಕೆಲವೇ ನಿಮಿಷಗಳ ಮುಂಚೆ ವಿಮಾನದ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಇದು ಎಲ್ಲರನ್ನೂ ಗಾಬರಿಗೊಳಿಸಿತು.

Saudi team lands safely in Rostov after engine fire

ಆದರೆ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬುದನ್ನು ನಿರಾಕರಿಸಿರುವ 'ರೋಸಿಯಾ ಏರ್‌ಬಸ್‌' ಸಂಸ್ಥೆ, ಹಕ್ಕಿ ತಗುಲಿ ಬೆಂಕಿ ಕಾಣಿಸಿಕೊಂಡಿದೆಯಷ್ಟೆ' ಎಂದು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದೆ. ಈ ಬಗ್ಗೆ ಪೂರ್ಣ ತನಿಖೆ ಮಾಡುವುದಾಗಿ ಅದು ಹೇಳಿದೆ.

ನಿಜವಾಯ್ತು ಬೆಕ್ಕಿನ ಭವಿಷ್ಯ: ಸೌದಿ ಎದುರು ರಷ್ಯಾಕ್ಕೆ 5-0ರ ಜಯನಿಜವಾಯ್ತು ಬೆಕ್ಕಿನ ಭವಿಷ್ಯ: ಸೌದಿ ಎದುರು ರಷ್ಯಾಕ್ಕೆ 5-0ರ ಜಯ

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸೌದಿ ಅರೆಬಿಯಾದ ಮಾಧ್ಯಮಗಳು ಈಗಾಗಲೇ ವಿಮಾನದ ಎಂಜಿನ್ ಹಾಗೂ ರೆಕ್ಕೆಗೆ ಬೆಂಕಿ ಹೊತ್ತಿಕೊಂಡ ಚಿತ್ರಗಳು ಹಾಗೂ ವಿಡಿಯೋವನ್ನು ಪ್ರಸಾರ ಮಾಡುತ್ತಿವೆ.

ಮೊದಲ ಪಂದ್ಯದಲ್ಲಿ ರಷ್ಯಾ ವಿರುದ್ಧ ಸೋಲನ್ನನುಭವಿಸಿರುವ ಸೌದಿ ಅರೆಬಿಯಾ ತಂಡ ಈ ಬುಧವಾರ ಉರುಗ್ವೇಯನ್ನು ಎದುರಿಸಲಿದೆ.

Story first published: Tuesday, June 19, 2018, 12:59 [IST]
Other articles published on Jun 19, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X