ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಮಿನಿ ಕೂಪರ್ ಆಗಿದ್ದ ನಾರ್ತ್ ಈಸ್ಟನ್ನು ಫೆರಾರಿಯಾಗಿ ಪರಿವರ್ತಿಸಿದ ಷೆಟೋರಿ!

By Isl Media
Schattorie almost turned a Mini-Cooper into a Ferrari at NorthEast United

ಮುಂಬೈ ಮಾರ್ಚ್ 12: ನಾರ್ತ್ ಈಸ್ಟ್ ಯುನೈಟೆಡ್ ತಂಡ ಬೆಂಗಳೂರು ವಿರುದ್ಧ ಸೋತು ಫೈನಲ್ ತಲುಪುವಲ್ಲಿ ವಿಫಲವಾಯಿತು. ಆದರೆ ಈ ಬಾರಿ ಫುಟ್ಬಾಲ್ ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ಆ ತಂಡ ಯಶಸ್ವಿಯಾಗಿದೆ. ಪಂದ್ಯ ಮುಗಿಯುತ್ತಿದ್ದಂತೆ ತಂಡದ ಕೋಚ್ ಎಲ್ಕೋ ಷೆಟೋರಿ ಟ್ವಿಟರ್‌ನಲ್ಲಿ 'ಈ ಋತುವನ್ನು ಸುಂದರಗೊಳಿಸಿದ ಎಲ್ಲರಿಗೂ ಧನ್ಯವಾದಗಳು' ಎಂದಿದ್ದರೆ, ತಂಡದ ಮಾಲೀಕ ಜಾನ್ ಅಬ್ರಾಹಂ, 'ಗಾಯದ ಸಮಸ್ಯೆಗಳ ನಡುವೆಯೂ ನಮ್ಮ ಹುಡುಗರು ಅದ್ಭುತವಾಗಿ ಆಡಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ. ಇದು ತಂಡದ ಬಗ್ಗೆ ಅವರಿಗ ಕಾಳಜಿ ಹಾಗೂ ಬದ್ಧತೆಯನ್ನು ಪ್ರಕಟಿಸುತ್ತದೆ' ಎಂದಿದ್ದಾರೆ.

ಕೊಹ್ಲಿ ಭಯಂಕರ ನಾಯಕ, ಆದರೆ ಧೋನಿ ಅದಕ್ಕೂ ಮೇಲೆ: ಶೇನ್ ವಾರ್ನ್ಕೊಹ್ಲಿ ಭಯಂಕರ ನಾಯಕ, ಆದರೆ ಧೋನಿ ಅದಕ್ಕೂ ಮೇಲೆ: ಶೇನ್ ವಾರ್ನ್

ನಾರ್ತ್ ಈಸ್ಟ್ ಯುನೈಟೆಡ್ ತಂಡ ಈ ಋತುವನ್ನು ಸದಾ ಸ್ಮರಿಸಿಕೊಳ್ಳುವಂತಾಗಿದೆ. ಕಳೆದ ಐದು ಪ್ರಯತ್ನಗಳಲ್ಲಿ ನಾರ್ತ್ ಈಸ್ಟ್ ಇದೇ ಮೊದಲ ಬಾರಿಗೆ ಇಂಡಿಯನ್ ಸೂಪರ್ ಲೀಗ್‌ನ ಪ್ಲೇ ಆಫ್ ಹಂತ ತಲುಪಿದೆ. ಮನೆಯಂಗಣದಲ್ಲಿ ನಡೆದ ಮೊದಲ ಹಂತದ ಸೆಮಿಫೈನಲ್‌ನಲ್ಲಿ ಗೆದ್ದು, ಎರಡನೇ ಸೆಮಿಫೈನಲ್‌ನಲ್ಲಿ ಸೋತು ಫೈನಲ್ ತಲಪುವಲ್ಲಿ ವಿಫಲವಾದರೂ ತಂಡ ಹಲವಾರು ಧನಾತ್ಮಕ ಅಂಶಗಳನ್ನು ಈ ಪಂದ್ಯದಿಂದ ತನ್ನದಾಗಿಸಿಕೊಂಡಿದೆ.

ಯಾರೂ ಊಹಿಸಿರಲಿಲ್ಲ

ಯಾರೂ ಊಹಿಸಿರಲಿಲ್ಲ

ಐಎಸ್‌ಎಲ್ ಆರಂಭಗೊಳ್ಳುವುದಕ್ಕೆ ಮೊದಲು ನಾರ್ತ್ ಈಸ್ಟ್ ತಂಡವನ್ನು ಗಮನಿಸಿದವರು ಈ ತಂಡ ಇತಿಹಾಸ ಬರೆಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ ಈ ಋತು ಅಂತ್ಯಗೊಳ್ಳುಲು ಸಮೀಪಿಸುತ್ತಿದ್ದಂತೆ ನಾರ್ತ್ ಈಸ್ಟ್ ತಂಡ ಪ್ಲೇ ಆಫ್ ಹಂತವನ್ನು ತಲುಪಿತ್ತಲ್ಲದೆ, ಫೈನಲ್ ಹತ್ತಿರ ಲಗ್ಗೆ ಇಟ್ಟಿತು. ಗಾಯದ ಸಮಸ್ಯೆ ಇಲ್ಲದೆ ಇರುತ್ತಿದ್ದರೆ ನಾರ್ತ್ ಈಸ್ಟ್‌ನ ತಂಡದ ಬಗ್ಗೆ ಬೆರೆಯೇ ಕತೆ ಬರೆಯಬೇಕಾಗಿರುತ್ತಿತ್ತು. ಬಾರ್ತಲೋಮ್ಯೊ ಒಗ್ಬಚೆ ಹಾಗೂ ರೌಲಿನ್ ಬೋರ್ಜಸ್ ಅವರ ಅನುಪಸ್ಥಿತಿಯಲ್ಲಿ ಮೊದಲ ಸೆಫೈನಲ್‌ನ ದ್ವಿತೀಯ ಅವಧಿಯನ್ನು ಪೂರ್ಣಗೊಳಿಸಿತ್ತು. ಅದೇ ರೀತಿ ಬೆಂಗಳೂರು ವಿರುದ್ಧ ನಡೆದ ಎರಡನೇ ಹಂತದ ಸೆಫೈನಲ್‌ನಲ್ಲಿ ತಂಡದ ಭರವಸೆಯ ಆಟಗಾರ ಫೆಡ್ರಿಕೊ ಗಲ್ಲೆಗೋ ಗಂಭೀರವಾಗಿ ಗಾಯಗೊಂಡಿದ್ದು ತಂಡಕ್ಕೆ ತುಂಬಲಾರದ ನಷ್ಟವಾಯಿತು. ಪ್ರಮುಖ ಮೂವರರು ಆಟಗಾರರಿಲ್ಲದೆ ಆಡಿರುವುದು ತಂಡದ ಯಶಸ್ಸಿಗೆ ಅಡ್ಡಿಯಾಯಿತು.

ಅಂತಿಮ ಫಲಿತಾಂಶದಲ್ಲಿ ಆಘಾತ

ಅಂತಿಮ ಫಲಿತಾಂಶದಲ್ಲಿ ಆಘಾತ

ಅಂತಿಮವಾಗಿ ಫಲಿತಾಂಶ ತಂಡಕ್ಕೆ ನೋವನ್ನುಂಟು ಮಾಡಿತ್ತು. ಬೆಂಗಳೂರು ತಂಡ ಫೈನಲ್ ತಲುಪಿತಲ್ಲದೆ, ಷೆಟೋರಿ ಅವರ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗಲಿಲ್ಲ. ‘ಈ ಋತು ನಮ್ಮ ಪಾಲಿಗೆ ಸ್ಮರಣೀಯವಾದುದು. ಈ ಋತುವಿನಲ್ಲಿ ನಾವು ಸೋತಿರುವುದು ಕೇವಲ ನಾಲ್ಕು ಬಾರಿ. ಇದರರ್ಥ ನಾವು ಸಮರ್ಪಕ ರೀತಿಯಲ್ಲೇ ಆಡಿದ್ದೇವೆ. ನಾವು ಪ್ರತಿಯೊಂದು ಪಂದ್ಯಕ್ಕೂ ಉತ್ತಮ ಆಟಗಾರರನ್ನೇ ಆಯ್ಕೆ ಮಾಡಿದೆವು. ಅದೇ ರೀತಿ ನಮ್ಮ ತಂಡ ಉತ್ತಮವಾಗಿಯೇ ಆಡಿತ್ತು. ಇಂದು ಇಬ್ಬರು ಪ್ರಮುಕ ಆಟಗಾರರ ಅನುಪಸ್ಥಿತಿಯಲ್ಲಿ ನಾವು ಪಂದ್ಯವನ್ನು ಆರಂಭಿಸಿದೆವು. ತಂಡದಲ್ಲಿ ಸಮತೋಲನವೆಂಬುದು ಪ್ರಮುಖವಾದುದು,‘ ಎಂದು ಸೆಮಿಫೈನಲ್‌ನಿಂದ ನಿರ್ಗಮಿಸಿದ ನಂತರ ಷೆಟೋರಿ ಹೇಳಿದ್ದಾರೆ.

ಉತ್ತಮ ಆಯ್ಕೆ ಅವಕಾಶವಿರಲಿಲ್ಲ

ಉತ್ತಮ ಆಯ್ಕೆ ಅವಕಾಶವಿರಲಿಲ್ಲ

ತಂಡದ ಆಯ್ಕೆಯ ವಿಷಯ ಬಂದಾಗ ಷೆಟೋರಿ ಅವರಿಗೆ ಉತ್ತಮವಾದುದನ್ನು ಆಯ್ಕೆ ಮಾಡುವ ಅವಕಾಶವೇ ಇರಲಿಲ್ಲ. ಏಕೆಂದರೆ ಪ್ರಸಿದ್ಧ ಆಟಗಾರರು ತಂಡದಲ್ಲಿರಲಿಲ್ಲ. ಯಾವಾಗಲೂ ಆಟಗಾರಲ್ಲಿ ಒಬ್ಬರಾದರರೂ ಗಾಯದ ಸಮಸ್ಯೆ ಅಥವಾ ಅಮಾನತಿನ ಶಿಕ್ಷೆಯನ್ನು ಎದುರಿಸುತ್ತಿದ್ದರು. ಆದರೆ ಉತ್ತಮ ರಣಂತ್ರ ಹಾಗೂ ಯೋಜನಾಬದ್ಧವಾದ ಆಟ ಈ ಎಲ್ಲ ಸಮಸ್ಯೆಗಳನ್ನು ಮೂಲೆಗುಂಪು ಮಾಡಿತ್ತು. ಷೆಟೋರಿಯ ತಂಡದ ಆಟಗಾರರು ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದ್ದಾರೆ. ಅವರು ಎಲ್ಲ ರೀತಿಯ ಅಭಿನಂದನೆಗೆ ಅರ್ಹರು.

ಫೆರಾರಿಯನ್ನಾಗಿಸಿದ್ದು ವಿಶೇಷ

ಫೆರಾರಿಯನ್ನಾಗಿಸಿದ್ದು ವಿಶೇಷ

ಆರಂಭದಲ್ಲಿ ಮಿನಿ ಕೂಪರ್ ರೀತಿಯಲ್ಲಿ ಕಂಡು ಬಂದ ತಂಡವನ್ನು ಷೆಟೋರಿ ಬಲಿಷ್ಠ ಹಾಗೂ ಎಲ್ಲರ ಆಕರ್ಷಣೆಯ ಫೆರಾರಿಯನ್ನಾಗಿ ರೂಪುಗೊಳಿಸಿದ್ದು ವಿಶೇಷ. ಒಂದು ವೇಳೆ ಆ ತಂಡದ ಎಲ್ಲ ಆಟಗಾರರು ಫಿಟ್ ಆಗಿರುತ್ತಿದ್ದರೆ? ಮಿಕುವಿಗೆ ಡಿಕ್ಕಿ ಹೊಡೆದಾಗ ಗೆಲ್ಲೆಗೋ ಗಂಭೀರವಾಗಿ ಗಾಯಗೊಳ್ಳದೇ ಇರುತ್ತಿದ್ದರೆ ಏನಾಗುತ್ತಿತ್ತು?, ನಾರ್ತ್ ಈಸ್ಟ್ ತಂಡದ ಅಭಿಮಾನಿಗಳು ಈ ರೀತಿಯಲ್ಲಿ ಯೋಚಿಸುತ್ತಿರುವುದು ಸಹಜ. ಆದರೆ ಸೋಲಿನ ನಡುವೆಯೂ ನಾರ್ತ್ ಈಸ್ಟ್ ತಂಡ ಎಲ್ಲರ ಹೃದಯ ಗೆದ್ದಿರುವುದು ಸ್ಪಷ್ಟ.

Story first published: Tuesday, March 12, 2019, 20:22 [IST]
Other articles published on Mar 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X