ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಥಾಯ್ಲೆಂಡ್: ಸಾವನ್ನು ಗೆದ್ದು ಬಂದ ಫುಟ್ಬಾಲ್ ತಂಡದ ಬಾಲಕರು

ಚಿಯಾಂಗ್ ರೈ, ಜುಲೈ 3: ಥಾಯ್ಲೆಂಡ್‌ನ ಗುಹೆಯೊಂದರಲ್ಲಿ ಒಂಬತ್ತು ದಿನಗಳಿಂದ ಸಿಲುಕಿದ್ದ ಫುಟ್ಬಾಲ್ ತಂಡವೊಂದರ 12 ಬಾಲಕರು ಮತ್ತು ಅವರ ಕೋಚ್ ಅನ್ನು ರಕ್ಷಿಸಲಾಗಿದೆ.

ಥಾಯ್ಲೆಂಡ್‌ನ ವೈಲ್ಡ್ ಬೋರ್ ಎಂಬ ಫುಟ್ಬಾಲ್ ತಂಡದ 11-16ರ ವಯಸ್ಸಿನ ಬಾಲಕರು ಪ್ರವಾಸಕ್ಕೆಂದು ಜೂನ್ 23ರಂದು ಥಾಮ್ ಲುವಾಂಗ್ ನಂಗ್ ನಾನ್ ಎಂಬ ಗುಹೆಯೊಳಗೆ ಹೋಗಿದ್ದರು. ಆದರೆ, ಇದ್ದಕ್ಕಿದ್ದಂತೆ ಸುರಿದ ಭಾರಿ ಮಳೆಗೆ ಉಂಟಾದ ಪ್ರವಾಹದಿಂದಾಗಿ ಕತ್ತಲೆಯ ಗುಹೆಯಿಂದ ಹೊರಬರಲಾರದೆ ಸಿಲುಕಿಕೊಂಡಿದ್ದರು.

ಅವರ ಸಂಪರ್ಕ ಕಷ್ಟವಾಗಿದ್ದರಿಂದ ಮತ್ತು ವಿಪರೀತ ಮಳೆಯಿಂದಾಗಿ ಅವರ ರಕ್ಷಣೆಗೆ ಕಷ್ಟವಾಗಿತ್ತು. ಕೊನೆಗೆ ಅಮೆರಿಕ, ಚೀನಾ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನ ಪರಿಣತರು ಹಾಗೂ ಥಾಯ್ ನೌಕಾ ಪಡೆಗಳನ್ನು ಒಳಗೊಂಡ ಅಂತರರಾಷ್ಟ್ರೀಯ ರಕ್ಷಣಾ ಕಾರ್ಯತಂಡ ಈ ಬೃಹತ್ ಗುಹೆಯನ್ನು ತಲುಪುವಲ್ಲಿ ಯಶಸ್ವಿಯಾಯಿತು.

ಪಟ್ಟಾಯ ಬೀಚ್ ಸಮೀಪದ ಈ ಗುಹೆ ಪ್ರವಾಹದಿಂದ ಜಲಾವೃತವಾಗಿತ್ತು. ಗುಹೆಯೊಳಗೆ ಸುಮಾರು 300-400 ಮೀಟರ್ ಪ್ರವೇಶಿಸಿದ ರಕ್ಷಣಾ ಪಡೆ 9 ದಿನಗಳಿಂದ ಆಹಾರ, ಗಾಳಿ ಬೆಳಕು ಇಲ್ಲದೆ ಒದ್ದಾಡುತ್ತಿದ್ದ ಬಾಲಕರನ್ನು ಪತ್ತೆಹಚ್ಚಿತು.

soccer team boys found alive in caves after 9 days

ಪ್ರವಾಹದಿಂದಾಗಿ ಈ ಬಾಲಕರು ಬದುಕಿರುವುದು ಸಾಧ್ಯವಿಲ್ಲ ಎಂಬ ಅನುಮಾನ ವ್ಯಕ್ತವಾಗಿತ್ತು. ಗುಹೆಯ ಕಡುಕತ್ತಲೆಯೊಳಗೆ ಹೇಗೋ ಜೀವ ಉಳಿಸಿಕೊಂಡಿದ್ದ ಬಾಲಕರು, ರಕ್ಷಣಾ ತಂಡವನ್ನು ನೋಡಿದೊಡನೆ ಖುಷಿಯಿಂದ ಕೂಗಿದರು.

Story first published: Tuesday, July 3, 2018, 9:43 [IST]
Other articles published on Jul 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X