ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೀಫಾ ವರ್ಲ್ಡ್‌ ಕಪ್: ಕೆಲವು ಕುತೂಹಲಕಾರಿ ಅಂಕಿ-ಅಂಶಗಳು

By Manjunatha

ಜಾಗತಿಕ ಫುಟ್‌ಬಾಲ್ ಹಬ್ಬ ನಿನ್ನೆಯಷ್ಟೇ ಮುಗಿದಿದೆ. ಒಂದು ತಿಂಗಳಿನಿಂದ ಕಾಲ್ಚೆಂಡಿನಾಟವನ್ನು ಕಣ್ತುಂಬಿ ಸುಖಿಸಿದ ಕ್ರೀಡಾ ಪ್ರೇಮಿಗಳು ಇನ್ನು ಮುಂದಿನ ವಿಶ್ವಕಪ್ ವರೆಗೆ ನೆನಪನ್ನು ಮೆಲುಕು ಹಾಕುತ್ತಿರುತ್ತಾರೆ.

ಜಗತ್ತನ್ನೇ ತನ್ನತ್ತ ಸೆಳೆದಿದ್ದ ಫುಟ್‌ಬಾಲ್ ಕ್ರೀಡಾಕೂಟ ಹಲವು ವಿಶೇಷತೆಗಳನ್ನು ಒಳಗೊಂಡಿತ್ತು. ಸಾಮಾನ್ಯವಾಗಿ ಈ ರೀತಿಯ ಕ್ರೀಡಾಕೂಟಗಳು ಮುಗಿದಾಗ ಕಳೆದ ಬಾರಿಯ ಕ್ರೀಡಾಕೂಟದ ಜೊತೆ ಹೋಲಿಸಲಾಗುತ್ತದೆ.

ಫೀಫಾ ವಿಶ್ವಕಪ್ 2018: ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಗೆದ್ದಿದ್ದು ಇಲ್ಲಿ!ಫೀಫಾ ವಿಶ್ವಕಪ್ 2018: ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಗೆದ್ದಿದ್ದು ಇಲ್ಲಿ!

ಇಲ್ಲಿಯೂ ಅಂತಹದ್ದೊಂದು ಸಣ್ಣ ಪ್ರಯತ್ನ ಮಾಡಲಾಗಿದೆ. ಈ ಕ್ರೀಡಾಕೂಟದ ಕೆಲವು ಕುತೂಹಲಕಾರಿ ಅಂಕಿ-ಅಂಶಗಳು ಇಲ್ಲಿ ನೀಡಲಾಗಿದೆ. ಕಳೆದ ವಿಶ್ವಕಪ್‌ನ ಅಂಕಿ-ಅಂಶಗಳೂ ಇಲ್ಲಿವೆ.

169 ಗೋಲುಗಳು ದಾಖಲು

169 ಗೋಲುಗಳು ದಾಖಲು

ಪ್ರತಿ ಪಂದ್ಯಕ್ಕೆ 2.64 ರ ಸರಾಸರಿಯಂತೆ ಕ್ರೀಡಾಕೂಟದಲ್ಲಿ ಒಟ್ಟು 169 ಗೋಲುಗಳು ದಾಖಲಾಗಿವೆ. ಕಳೆದ ಬಾರಿ ಬ್ರೆಜಿಲ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಪ್ರತಿ ಪಂದ್ಯಕ್ಕೆ 2.67 ಸರಾಸರಿಯಲ್ಲಿ ಗೋಲು ದಾಖಲಾಗಿತ್ತು.

ವಿಶ್ವಕಪ್ ವಿಜೇತರು: ಅರ್ಜೆಂಟೀನಾ, ಉರುಗ್ವೆ ಸಾಲಿಗೆ ಸೇರಿದ ಫ್ರಾನ್ಸ್

ಪ್ರತಿ ಪಂದ್ಯಕ್ಕೆ ಬಂದ ವೀಕ್ಷಕರೆಷ್ಟು

ಪ್ರತಿ ಪಂದ್ಯಕ್ಕೆ ಬಂದ ವೀಕ್ಷಕರೆಷ್ಟು

ಸರಾಸರಿ 46,885 ಮಂದಿ ವೀಕ್ಷಕರು ಪ್ರತಿ ಪಂದ್ಯವನ್ನು ಕ್ರೀಡಾಂಗಣಕ್ಕೆ ಬಂದು ನೋಡಿದ್ದಾರೆ. ಇದು ಸಹ ಕಳೆದ ವಿಶ್ವಕಪ್‌ಗಿಂತಲೂ ಕಡಿಮೆಯೆ ಬ್ರೆಜಿಲ್‌ನಲ್ಲಿ ನಡೆದ ವಿಶ್ವಕಪ್‌ ವೇಳೆ ಸರಾಸರಿ 53,592 ಮಂದಿ ವೀಕ್ಷಕರು ಪಂದ್ಯವನ್ನು ನೋಡಿದ್ದರು. ರಷ್ಯಾದಲ್ಇ ಕ್ರೀಡಾಂಗಣ ಗಾತ್ರ ಚಿಕ್ಕದಿರುವುದರಿಂದ ಸಂಖ್ಯೆ ಕಡಿಮೆ ಆಗಿದೆ.

ದಂಡವಾಗಿ ಭಾರಿ ಮೊತ್ತ ಪಡೆದ ಫಿಫಾ

ದಂಡವಾಗಿ ಭಾರಿ ಮೊತ್ತ ಪಡೆದ ಫಿಫಾ

ಈ ಕ್ರೀಡಾಕೂಟದಲ್ಲಿ ಫುಟ್‌ಬಾಲ್ ಫೆಡರೇಶನ್ ಗೆ ಕೋಟ್ಯಂತರ ಹಣ ದಂಡದ ರೂಪದಲ್ಲಿಯೇ ಹರಿದುಬಂದಿದೆ. ಒಟ್ಟು 10.30 ಕೋಟಿಗೂ ಹೆಚ್ಚು ಹಣ ಕೇವಲ ದಂಡದಿಂದಲೇ ಫಿಫಾಕ್ಕೆ ಹರಿದುಬಂದಿದೆ. ಆಟಗಾರರು ನಿಯಮಬಾಹಿರವಾದ ಸಾಕ್ಸ್ ಧರಿಸಿದ್ದರಿಂದಲೇ 3.33 ಕೋಟಿಗೂ ಹೆಚ್ಚು ಹಣವನ್ನು ದಂಡವಾಗಿ ಫಿಫಾ ವಸೂಲಿ ಮಾಡಿದೆ.

ಎದುರಾಳಿಗೆ ಗೋಲು ಹೊಡೆದುಕೊಟ್ಟವರು

ಎದುರಾಳಿಗೆ ಗೋಲು ಹೊಡೆದುಕೊಟ್ಟವರು

ಓನ್ ಗೋಲ್ ಅಥವಾ ತಮ್ಮ ಗೋಲ್‌ಪೋಸ್ಟ್‌ಗೆ ತಾವೇ ಗೋಲು ಹೊಡೆದುಕೊಟ್ಟವರ ಲೆಕ್ಕವೂ ವಿಶ್ವಕಪ್‌ನಲ್ಲಿ ಬಹಳ ಮುಖ್ಯ. ಈ ಬಾರಿ ಹೀಗೆ ತಮ್ಮ ಗೋಲ್‌ಪೋಸ್ಟ್‌ಗೆ ತಾವೇ ಗೋಲು ಹೊಡೆದವರ ಸಂಖ್ಯೆ 12. ಕಳೆದ ಬಾರಿ ಈ ಸಂಖ್ಯೆ ಬಹ ಕಡಿಮೆ ಇತ್ತು ಕಳೆದ ವಿಶ್ವಕಪ್‌ನಲ್ಲಿ 4 ಜನ ಮಾತ್ರ ಸ್ವಂತ ಪೋಸ್ಟ್‌ಗೆ ಗೋಲು ಹೊಡೆದಿದ್ದರು.

ಹೆಚ್ಚು ನಿಖರವಾದ ಅಂಪೈರಿಂಗ್

ಹೆಚ್ಚು ನಿಖರವಾದ ಅಂಪೈರಿಂಗ್

ಹಿಂದಿನ ಎಲ್ಲಾ ವಿಶ್ವಕಪ್‌ ಫುಟ್‌ಬಾಲ್‌ಗಳಲ್ಲಿ ಈ ಬಾರಿ ಅತಿ ಹೆಚ್ಚು ನಿಖರವಾದ ಅಂಪೈರಿಂಗ್ ನಡೆದಿದೆ. ಅಂಪೈರ್‌ಗಳಿಗೆ ವಿಡಿಯೋ ರಿವ್ಯೂ ಸಿಸ್ಟಂ ನೀಡಿದ್ದರಿಂದ ಶೇ 99.32 ಪ್ರತಿಶತ ಸರಿಯಾದ ತೀರ್ಪುಗಳನ್ನೇ ಅಂಪೈರ್‌ಗಳು ನೀಡಿದ್ದಾರೆ.

219 ಹಳದಿ ಕಾರ್ಡ್‌ಗಳು

219 ಹಳದಿ ಕಾರ್ಡ್‌ಗಳು

ಆಟಗಾರರ ಅಶಿಸ್ತು ಅಥವಾ ನಿಯಮಬಾಹಿರವಾದ ಆಟದಿಂದಾಗಿ ಕ್ರೀಡಾಕೂಟದಲ್ಲಿ ಒಟ್ಟು 219 ಹಳದಿ ಕಾರ್ಡ್‌ಗಳನ್ನು ಅಂಪೈರ್‌ಗಳು ಪ್ರದರ್ಶಿಸಿದರು. 4 ರೆಡ್‌ ಕಾರ್ಡ್‌ಗಳನ್ನು ಸಹ ಪ್ರದರ್ಶಿಸಲಾಯಿತು. ಕಳೆದ ವಿಶ್ವಕಪ್‌ನಲ್ಲಿ 189 ಹಳದಿ ಕಾರ್ಡ್‌ ಮತ್ತು 10 ರೆಡ್‌ ಕಾರ್ಡ್‌ ಪ್ರದರ್ಶಿಸಲಾಗಿತ್ತು.

Story first published: Monday, July 16, 2018, 14:03 [IST]
Other articles published on Jul 16, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X