ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ನೂತನ ಜೆರ್ಸಿ ಬಿಡುಗಡೆಗೊಳಿಸಿದ ಬೆಂಗಳೂರಿನ ಸೌತ್ ಯುನೈಟೆಡ್ ಎಫ್‌ಸಿ

South United FC Launches Team Kit for their First Division Football Team

ಬೆಂಗಳೂರು, ಅಕ್ಟೋಬರ್ 22: ತನ್ನ ಮೊದಲ ಡಿವಿಷನ್ ಫುಟ್ಬಾಲ್ ತಂಡಕ್ಕಾಗಿ ಬೆಂಗಳೂರು ಮೂಲದ ಸೌತ್ ಯುನೈಟೆಡ್ ಫುಟ್ಬಾಲ್‌ ಕ್ಲಬ್ ಎಸ್‌ಯುಎಫ್‌ಸಿ) ನೂತನ ಜೆರ್ಸಿ ಬಿಡುಗಡೆಗೊಳಿಸಿದೆ. ಐ ಲೀಗ್ ಸೆಕೆಂಡ್‌ ಡಿವಿಷನ್ ಮತ್ತು ಬೆಂಗಳೂರು ಸೂಪರ್ ಡಿವಿಷನ್ ಟೂರ್ನಿಗಳಲ್ಲಿ ಈ ಕ್ಲಬ್ ಮೈದಾನಕ್ಕಿಳಿಯಲಿದೆ. ಬೆಂಗಳೂರಿನ ಆರ್‌ಬಿಎಎನ್‌ಎಂಎಸ್ ಮೈದಾನದಲ್ಲಿ ಜೆರ್ಸಿ ಅನಾವರಣಗೊಳಿಸಲಾಯಿತು.

11ರ ಹರೆಯದ ಹುಡುಗನನ್ನು ಚೆಸ್ ಟೂರ್ನಿಯಿಂದ ಹೊರದಬ್ಬಿದ ಅಧಿಕಾರಿ!11ರ ಹರೆಯದ ಹುಡುಗನನ್ನು ಚೆಸ್ ಟೂರ್ನಿಯಿಂದ ಹೊರದಬ್ಬಿದ ಅಧಿಕಾರಿ!

ಮುಂಬರಲಿರುವ ಸೀಸನ್‌ನ ಗಮನದಲ್ಲಿಟ್ಟುಕೊಂಡು ಎಸ್‌ಯುಎಫ್‌ಸಿಯ ನಿರ್ದೇಶಕ ಶರಣ್ ಪಾರಿಕ್, ತಂಡದ ಹೊಸ ಕಿಟ್‌ ಅನ್ನು ಬಿಡುಗಡೆಗೊಳಿಸಿದರು. ಎಸ್‌ಯುಎಫ್‌ಸಿ ಸಿಇಒ ಪ್ರಣವ್ ಟ್ರೆಹಾನ್ ಮತ್ತು ಡಿವಿಷನ್ ಫುಟ್ಬಾಲ್ ತಂಡದ 24 ಜನ ಆಟಗಾರರು ಈ ವೇಳೆ ಉಪಸ್ಥಿತರಿದ್ದರು.

ರಾಂಚಿಯಲ್ಲಿ ಮಿಂಚಿದ ಭಾರತ, ದಕ್ಷಿಣ ಆಫ್ರಿಕಾಕ್ಕೆ ವೈಟ್‌ವಾಷ್ ಮುಖಭಂಗರಾಂಚಿಯಲ್ಲಿ ಮಿಂಚಿದ ಭಾರತ, ದಕ್ಷಿಣ ಆಫ್ರಿಕಾಕ್ಕೆ ವೈಟ್‌ವಾಷ್ ಮುಖಭಂಗ

ಜೆರ್ಸಿ ಬಿಡುಗಡೆಗೊಳಿಸಿ ಮಾತನಾಡಿದ ಶರಣ್ ಪರಿಕ್, 'ನಮ್ಮ ಬಹು ಮುಖ್ಯ ಮತ್ತು ದೀರ್ಘ ಕಾಲದ ಗುರಿ ಏನೆಂದರೆ ಯುವಕರಿಗೆ ಒಂದು ನೆಲೆಯನ್ನು ಒದಗಿಸುವುದು. ಫುಟ್ಬಾಲ್ ಅನ್ನು ಬೆಂಗಳೂರಿನಲ್ಲಿ ಮಾತ್ರವಲ್ಲದೇ ಇಡೀ ದಕ್ಷಿಣ ಭಾರತದಲ್ಲಿಯೇ ವೃತ್ತಿಪರವಾಗಿ ತೆಗೆದುಕೊಳ್ಳಲು ಯೋಜನೆ ರೂಪಿಸಲಾಗುತ್ತಿದೆ,' ಎಂದರು.

South United FC Launches Team Kit for their First Division Football Team

'ಈ ಹೊಸ ಜೆರ್ಸಿಯೊಂದಿಗೆ ನಾವು ಹೊಸ ಸೀಸನ್‌ ಅನ್ನು ಆರಂಭಿಸುತ್ತಿದ್ದೇವೆ. ಇಲ್ಲಿ ಆಟಗಾರರು ಅತ್ಯುತ್ತಮ ಸಾಮರ್ಥ್ಯದೊಂದಿಗೆ ಸಾಧನೆ ಮಾಡುವಂತಾಗಲು ಅವರಿಗೆ ನೆರವೀಯುವ ಗುರಿಯನ್ನು ನಾವು ಹೊಂದಿದ್ದೇವೆ,' ಎಂದು ಪರಿಕ್ ಹೇಳಿದರು. ಹೊಸ ಜರ್ಸಿಯು ಕಿತ್ತಳೆ ಮತ್ತು ಕಪ್ಪು ಬಣ್ಣದಲ್ಲಿ ವಿನ್ಯಾಸವನ್ನು ಹೊಂದಿದೆ.

'ದ ಹಂಡ್ರೆಡ್‌'ಗೆ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್‌ ಕೊಳ್ಳೋರೇ ಇಲ್ಲ!'ದ ಹಂಡ್ರೆಡ್‌'ಗೆ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್‌ ಕೊಳ್ಳೋರೇ ಇಲ್ಲ!

ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಬಗ್ಗೆ
ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಅನ್ನು 16 ಅಗಸ್ಟ್ 2012ರಂದು ಸ್ಥಾಪಿಸಲಾಯಿತು. ಸೌತ್ ಯುನೈಟೆಡ್ ತಮ್ಮ ಲೀಗ್ ಇತಿಹಾಸವನ್ನು 6 ಡಿಸೆಂಬರ್ 2012ರಂದು ಪ್ರಾರಂಭಿಸಿತು. 2012-13ರಲ್ಲಿ ಬೆಂಗಳೂರು ಸೂಪರ್ ಡಿವಿಷನ್ ಟೂರ್ನಿಯಲ್ಲಿ ಆರ್ಮಿ ಸರ್ವೀಸ್ ಕಾರ್ಪ್ಸ್ ವಿರುದ್ದ ಕ್ಲಬ್ 2-0 ಗೋಲುಗಳಿಂದ ಜಯ ಗಳಿಸಿತ್ತು. ಸೌತ್ ಯುನೈಟೆಡ್ ತಮ್ಮ ಮೊದಲ ವರ್ಷದಲ್ಲಿ (2012-13) ಬೆಂಗಳೂರು ಸೂಪರ್ ಡಿವಿಷನ್ ಲೀಗ್‌ನಲ್ಲಿ ರನ್ನರ್ಸ್ ಅಪ್ ಆಗಿತ್ತು.

Story first published: Tuesday, October 22, 2019, 16:05 [IST]
Other articles published on Oct 22, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X