ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫಿಫಾದ ಎಲ್ಲಾ ಷರತ್ತುಗಳಿಗೂ ಕೇಂದ್ರ ಅಸ್ತು; ಎಐಎಫ್ಎಫ್ ಬ್ಯಾನ್ ಹಿಂತೆಗೆಸಲು ಪ್ಲಾನ್

Sports Ministry accepts FIFAs all demands and sent an application to revoke ban on AIFF

ಆಗಸ್ಟ್ 15ರಂದು ವಿಶ್ವ ಫುಟ್‌ಬಾಲ್ ಆಡಳಿತ ಮಂಡಳಿಯಾದ ಫಿಫಾ ಆಲ್ ಇಂಡಿಯಾ ಫುಟ್‌ಬಾಲ್ ಫೆರಡೇಷನ್ ಅನ್ನು ಮೂರನೇ ವ್ಯಕ್ತಿಗಳ ಹಸ್ತಕ್ಷೇಪದ ಕಾರಣಕ್ಕಾಗಿ ಅನಿರ್ಧಿಷ್ಟಾವಧಿ ಅಮಾನತು ಮಾಡಿತ್ತು. ಇದು ಭಾರತ ಫುಟ್‌ಬಾಲ್ ಫೆಡರೇಶನ್ ಹಾಗೂ ಕೇಂದ್ರ ಸರ್ಕಾರಕ್ಕೆ ಭಾರೀ ಮುಖಭಂಗ ಉಂಟಾಗುವಂತೆ ಮಾಡಿತ್ತು. ಅಷ್ಟೇ ಅಲ್ಲದೇ ಈ ನಿಷೇಧದಿಂದ ಇದೇ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಭಾರತದಲ್ಲಿ ಆಯೋಜನೆಯಾಗಬೇಕಿದ್ದ ಮಹಿಳಾ ಅಂಡರ್ 19 ಫುಟ್‌ಬಾಲ್ ವಿಶ್ವಕಪ್ ಟೂರ್ನಿ ಕೂಡ ಭಾರತದ ಕೈಪತಪ್ಪಿತ್ತು.

ಹೀಗೆ ನಿಷೇಧವನ್ನು ರದ್ದುಗೊಳಿಸಲು ಕೇಂದ್ರ ಸರ್ಕಾರದ ಕ್ರೀಡಾ ಸಚಿವಾಲಯ ಸುಪ್ರೀಂ ಕೋರ್ಟ್ ಮೊರೆಹೋಗಿದ್ದು, ಫಿಫಾ ಜೊತೆಗೆ ಕೆಲ ಆನ್‌ಲೈನ್ ಸಭೆ ನಡೆಸಿದ ನಂತರ ಹಲವು ಸಲಹೆಗಳೊಂದಿಗೆ ವರದಿಯನ್ನು ಸಲ್ಲಿಸಿದೆ. ಫಿಫಾ ನಿಷೇಧದ ವೇಳೆ ವಿಧಿಸಿದ್ದ ಎಲ್ಲಾ ಷರತ್ತುಗಳನ್ನೂ ಕೇಂದ್ರ ಸ್ವೀಕರಿಸಿದೆ. ಇನ್ನು ಸುಪ್ರೀಂ ಕೋರ್ಟ್ ಈ ಕುರಿತಾಗಿ ತೀರ್ಪು ನೀಡಿರುವ ಸುಪ್ರೀಂ ಇಂದಿನಿಂದ ( 22.08.2022 ) ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್‌ನ ನಿರ್ವಹಣೆಯನ್ನು ಎಐಎಫ್ಎಫ್ ಆಡಳಿತ ಮಂಡಳಿ ವಹಿಸಿಕೊಳ್ಳಬೇಕು ಹಾಗು ಮೂರನೇ ವ್ಯಕ್ತಿಗಳ ಸಂಸ್ಥೆಯನ್ನು ( ಸಿಒಎ ) ನೇಮಿಸಬಾರದು ಎಂದು ತಿಳಿಸಿದೆ. ಹಾಗೂ ಸಿಒಎ 23.08.2022ರೊಳಗೆ ಅಂತಿಮ ಕರಡನ್ನು ಸಲ್ಲಿಸಬೇಕೆಂದು ತಿಳಿಸಲಾಗಿದ್ದು, ಇಂದಿನಿಂದ ( 22.08.2022 ) ಸಿಒಎನ ಅವಧಿ ಸಂಪೂರ್ಣವಾಗಿ ಮುಗಿದಿದೆ ಎಂದು ತೀರ್ಮಾನಿಸಿದೆ.

ಹೀಗೆ ಫಿಫಾದ ಎಲ್ಲಾ ಷರತ್ತುಗಳಿಗೂ ಒಪ್ಪಿಗೆ ಸೂಚಿಸಿರುವ ಕೇಂದ್ರ ಕ್ರೀಡಾ ಸಚಿವಾಲಯ ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ ಮೇಲಿನ ನಿಷೇಧವನ್ನು ರದ್ದು ಮಾಡುವಂತೆ ಅರ್ಜಿ ಸಲ್ಲಿಸಿದೆ.

Story first published: Monday, August 22, 2022, 13:52 [IST]
Other articles published on Aug 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X