ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಚಾಂಪಿಯನ್ಸ್ ಲೀಗ್‌ನಲ್ಲಿ ಮೊದಲ ಮಹಿಳಾ ರೆಫರೀಯಾಗಿ ಸ್ಟೆಫನಿ ದಾಖಲೆ

Stephanie Frappart becomes first woman to referee in mens Champions League

ಪ್ಯಾರಿಸ್: ಪುರುಷರ ಚಾಂಪಿಯನ್ಸ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಚೊಚ್ಚಲ ಮಹಿಳಾ ರೆಫರೀ ಆಗಿ ಕಾರ್ಯ ನಿರ್ವಹಿಸುವ ಮೂಲಕ ಫ್ರೆಂಚ್ ಫುಟ್ಬಾಲ್ ರೆಫರೀ ಸ್ಟೆಫನಿ ಫ್ರಾಪ್ಪಾರ್ಟ್ ಇತಿಹಾಸ ನಿರ್ಮಿಸಿದ್ದಾರೆ. ಗುರುವಾರ (ಡಿಸೆಂಬರ್ 3) ನಡೆದ ಪಂದ್ಯದಲ್ಲಿ ರೆಫರೀ ಆಗಿ ಸ್ಟೆಫನಿ ಗಮನ ಸೆಳೆದಿದ್ದಾರೆ. ಪುರುಷರ ಪ್ರಮುಖ ಫುಟ್ಬಾಲ್ ಟೂರ್ನಿಯೊಂದರಲ್ಲಿ ಮಹಿಳಾ ರೆಫರೀ ಜವಾಬ್ದಾರಿ ನಿರ್ವಹಿಸಿದ್ದು ಬಲು ಅಪರೂಪ. ಅದರಲ್ಲೂ ಚಾಂಪಿಯನ್ಸ್‌ ಲೀಗ್‌ನಲ್ಲಿ ಇದೇ ಮೊದಲು.

ಆಸ್ಟ್ರೇಲಿಯಾದ ಸೋಲಿಗೆ ಕಾರಣ ಏನೆಂದು ಹೇಳಿದ ಗ್ಲೆನ್ ಮ್ಯಾಕ್ಸ್‌ವೆಲ್ಆಸ್ಟ್ರೇಲಿಯಾದ ಸೋಲಿಗೆ ಕಾರಣ ಏನೆಂದು ಹೇಳಿದ ಗ್ಲೆನ್ ಮ್ಯಾಕ್ಸ್‌ವೆಲ್

ಗುರುವಾರದ ಪಂದ್ಯದಲ್ಲಿ ಯುವೆಂಟಸ್ ಮತ್ತು ಡೈನಮೋ ಕ್ವಿವ್ ತಂಡಗಳು ಮುಖಾಮುಖಿಯಾಗಿದ್ದವು. ಇದರಲ್ಲಿ ಯುವೆಂಟಸ್ ಎಫ್‌ಸಿ ಡೈನಮೋ ಕ್ವಿವ್ ವಿರುದ್ಧ 3-0ರ ಜಯ ದಾಖಲಿಸಿತ್ತು. ಈ ಪಂದ್ಯದಲ್ಲಿ ಸ್ಟೆಫನಿ ಫ್ರಾಪ್ಪಾರ್ಟ್ ರೆಫರೀ ಜವಾಬ್ದಾರಿ ನಿರ್ವಹಿಸಿ ಸೈ ಎನಿಸಿದ್ದಾರೆ.

ಮರಡೋನಾಗೆ ಗೌರವ ಸಲ್ಲಿಸಿದ್ದ ಮೆಸ್ಸಿಗೆ 600 ಯುರೋ ದಂಡಮರಡೋನಾಗೆ ಗೌರವ ಸಲ್ಲಿಸಿದ್ದ ಮೆಸ್ಸಿಗೆ 600 ಯುರೋ ದಂಡ

ಫುಟ್ಬಾಲ್ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಕ್ಕಾಗಿ ದ ಯೂನಿಯನ್ ಆಫ್ ಯುರೋಪಿಯನ್ ಫುಟ್ಬಾಲ್ ಅಸೋಸಿಯೇಶನ್ (ಯುಇಎಫ್‌ಎ) ಸ್ಟೆಫನಿ ಫ್ರಾಪ್ಪಾರ್ಟ್ ಗೆ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದೆ.

ಫುಟ್ಬಾಲ್ ಅಸೋಸಿಯೇಶನ್ ಟ್ವೀಟ್

ಫುಟ್ಬಾಲ್ ಅಸೋಸಿಯೇಶನ್ ಟ್ವೀಟ್

ಸ್ಟೆಫನಿ ರೆಫರೀ ಜವಾಬ್ದಾರಿ ನಿರ್ವಹಿಸುತ್ತಿರುವ ವಿಡಿಯೋವನ್ನು ದ ಯೂನಿಯನ್ ಆಫ್ ಯುರೋಪಿಯನ್ ಫುಟ್ಬಾಲ್ ಅಸೋಸಿಯೇಶನ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದೆ. ಫೀಫಾ ವಿಮೆನ್ಸ್ ವರ್ಲ್ಡ್‌ ಕಪ್‌ ಅಧಿಕೃತ ಟ್ವಿಟರ್ ಖಾತೆ ಕೂಡ ಸ್ಟೆಫನಿ ಫ್ರಾಪ್ಪಾರ್ಟ್‌ಗೆ ಅಭಿನಂದಿಸಿ ಟ್ವೀಟ್ ಮಾಡಿದೆ.

ಅಭಿನಂದನೆಗಳು ಸ್ಟೆಫನಿ

'ಬುಧವಾರ (ಭಾರತದಲ್ಲಿ ಗುರುವಾರ ಪಂದ್ಯ ನಡೆದಿದ್ದು) ರಾತ್ರಿ, ಸ್ಟೆಫನಿ ಫ್ರಾಪ್ಪಾರ್ಟ್ ಪುರುಷರ ಯುಸಿಎಲ್ ಪಂದ್ಯವನ್ನು ತೀರ್ಪು ನೀಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಭಿನಂದನೆಗಳು ಸ್ಟೆಫನಿ,' ಎಂದು ಯುಇಎಫ್‌ಎ ಬರೆದುಕೊಂಡಿದೆ.

ವಿಶ್ವಕಪ್‌ ಫೈನಲ್‌ಗೂ ರೆಫರೀ

ವಿಶ್ವಕಪ್‌ ಫೈನಲ್‌ಗೂ ರೆಫರೀ

36ರ ಹರೆಯದ ಸ್ಟೆಫನಿ ಈ ಹಿಂದೆ ಯುರೋಪಾ ಲೀಗ್ ಪಂದ್ಯಗಳಲ್ಲಿ ರೆಫರೀ ಜವಾಬ್ದಾರಿ ನಿರ್ವಹಿಸಿದ್ದರು. ಲಾ ಲಿಗಾದಲ್ಲೂ 18 ಪಂದ್ಯಗಳಿಗೆ ರೆಫರೀಯಾಗಿ ಕಾರ್ಯ ನಿರ್ವಹಿಸಿದ್ದರು. ಅಷ್ಟೇ ಅಲ್ಲ, ಕಳೆದ ವರ್ಷ ಮಹಿಳಾ ವಿಶ್ವಕಪ್‌ ಫೈನಲ್‌ನಲ್ಲಿ ಲಿವರ್‌ಪೂಲ್ ಮತ್ತು ಚೆಲೆಸಾ ನಡುವಿನ ಸೂಪರ್‌ ಕಪ್ ಪಂದ್ಯದಲ್ಲೂ ರೆಫರೀಯಾಗಿದ್ದರು.

ಮಿಂಚಿದ ರೊನಾಲ್ಡೋ

ಮಿಂಚಿದ ರೊನಾಲ್ಡೋ

ಅಂದ್ಹಾಗೆ ಬುಧವಾರ (ಡಿಸೆಂಬರ್ 2) ನಡೆದ ಚಾಂಪಿಯನ್ಸ್‌ ಲೀಗ್‌ನಲ್ಲಿ ಡೈನಮೋ ಕ್ವಿವ್ ವಿರುದ್ಧ ಯುವೆಂಟಸ್ 3-0ಯ ಜಯ ಗಳಿಸಿದೆ. ವಿಶೇಷವೆಂದರೆ ಯುವೆಂಟಸ್ ಪರ ಮೂರೂ ಗೋಲ್‌ಗಳನ್ನು ಸ್ಟಾರ್ ಆಟಗಾರ ಕ್ರಿಸ್ಚಿಯಾನೋ ರೊನಾಲ್ಡೋ ಬಾರಿಸಿದ್ದರು. ಇದು ರೊನಾಲ್ಡೋ ಅವರ 750ನೇ ವೃತ್ತಿಪರ ಗೋಲ್ ಆಗಿತ್ತು.

Story first published: Friday, December 4, 2020, 12:06 [IST]
Other articles published on Dec 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X