ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಏಷ್ಯನ್ ಕಪ್‌ ಸೋಲಿನಾಘಾತ: ಭಾರತದ ಫುಟ್ಬಾಲ್ ಕೋಚ್ ರಾಜೀನಾಮೆ

Stephen Constantine steps down as head coach following Indias exit

ನವದೆಹಲಿ, ಜನವರಿ 15: ಬಹ್ರೇನ್ ವಿರುದ್ಧ ಸೋಮವಾರ (ಜನವರಿ 14) ನಡೆದ ಏಷ್ಯಕಪ್ ಫುಟ್ಬಾಲ್ ಪಂದ್ಯದಲ್ಲಿ ಭಾರತ 0-1 ಅಂತರದಿಂದ ಸೋತಿತು. ಈ ಹಿನ್ನಡೆಯಿಂದ ಬೇಸರಗೊಂಡ ಭಾರತದ ಪುರುಷರ ಫುಟ್ಬಾಲ್ ತಂಡದ ಕೋಚ್ ಸ್ಟೀಫನ್ ಕಾನ್ಸ್ಟಂಟೈನ್ ರಾಜೀನಾಮೆ ನೀಡಿದ್ದಾರೆ.

ಮೈದಾನದಲ್ಲಿ ಆಡುವಾಗಲೇ ಮೃತಪಟ್ಟ ಮಾಜಿ ರಣಜಿ ಆಟಗಾರಮೈದಾನದಲ್ಲಿ ಆಡುವಾಗಲೇ ಮೃತಪಟ್ಟ ಮಾಜಿ ರಣಜಿ ಆಟಗಾರ

ಯುಎಇಯ ಶಾರ್ಜಾದಲ್ಲಿ ಸೋಮವಾರ ನಡೆದ ಭಾರತ-ಬಹ್ರೇನ್ ನಡುವಣ ಗ್ರೂಪ್ ಎ ಅಂತಿಮ ಪಂದ್ಯದಲ್ಲಿ ಭಾರತ ಮುಖಭಂಗ ಅನುಭವಿಸಿತ್ತು. ಈ ಪಂದ್ಯ ಗೆಲ್ಲುತ್ತಿದ್ದರೆ ಚೊಚ್ಚಲ ಬಾರಿಗೆ ಟೂರ್ನಿಯಲ್ಲಿ ನಾಕೌಟ್ ಹಂತಕ್ಕೆ ಪ್ರವೇಶಿಸಿದ ಅಪರೂಪದ ಸಾಧನೆ ಭಾರತದಿಂದಾಗುತ್ತಿತ್ತು. ಆದರೆ ಪಂದ್ಯ ಸೋತ ಕಾರಣ ಭಾರತ ತಂಡ ಟೂರ್ನಿಯಿಂದಲೇ ಹೊರ ಬಿದ್ದಿತ್ತು.

ಮೂಲಗಳ ಪ್ರಕಾರ ಇಂಗ್ಲೆಂಡ್ ಮೂಲದ 56ರ ಹರೆಯದ ಸ್ಟೀಫನ್ ಅವರು ರಾಷ್ಟ್ರೀಯ ಫುಟ್ಬಾಲ್ ತಂಡಕ್ಕೆ ರಾಜೀನಾಮೆ ನೀಡಿದ್ದಾರೆ. ಇದಕ್ಕೆ ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್ ಒಪ್ಪಿಗೆ ಸೂಚಿಸಿದೆ. ಒಟ್ಟಿನಲ್ಲಿ ಕಾನ್ಸ್ಟಂಟೈನ್ ಅವರ ಸೇವೆ ಜನವರಿ 31ರಂದು ಕೊನೆಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.

Story first published: Tuesday, January 15, 2019, 15:31 [IST]
Other articles published on Jan 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X