ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಮನೆಯಂಗಣದಲ್ಲಿ ಡೆಲ್ಲಿ ಡೈನಮೋಸ್ ವಿರುದ್ಧ ಮಿಂಚಿದ ಗೋವಾ

Sub Brandon & Edu’s late strike bring Goa to winning ways

ಗೋವಾ, ನವೆಂಬರ್ 9 : ಎಡು ಬೇಡಿಯಾ (54 ಹಾಗೂ 89ನೇ ನಿಮಿಷ), ಬ್ರೆನ್ದಾನ್ ಫೆರ್ನಾಂಡಿಸ್ (82ನೇ ನಿಮಿಷ) ಗಳಿಸಿದ ಗೋಲಿನಿಂದ ಎಫ್ ಸಿ ಗೋವಾ ತಂಡ ಇಂಡಿಯನ್ ಸೂಪರ್ ಲೀಗ್ ನಲ್ಲಿ ಡೆಲ್ಲಿ ಡೈನಮೋಸ್ ವಿರುದ್ಧದ ಪಂದ್ಯದಲ್ಲಿ 3-2 ಗೋಲುಗಳ ಅಂತರದಲ್ಲಿ ಜಯ ಗಳಿಸಿತು.

ಜವಾಹರಲಾಲ್ ನೆಹರು ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪ್ರಥಮಾರ್ಧದಲ್ಲಿ ಡೆಲ್ಲಿ ಮೇಲುಗೈ ಸಾಧಿಸಿದರೂ ದ್ವಿತೀಯಾರ್ಧದಳ್ಳಿ ಗೋವಾ ಮೂರು ಗೋಲುಗಳನ್ನು ಗಳಿಸಿ ಪಂದ್ಯದ ಮೇಲೆ ಪ್ರಭುತ್ವ ಸಾಧಿಸಿತು. ಡೆಲ್ಲಿ ಪರ ವಿಕ್ರಂಜಿತ್ ಸಿಂಗ್ (6ನೇ ನಿಮಿಷ) ಹಾಗೂ ಲಾಲಿಯಂಜುವಾಲ ಚಾಂಗ್ಟೇ (70ನೇ ನಿಮಿಷ) ತಲಾ ಒಂದು ಗೋಲು ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ.

ಗೋವಾದ ವಿರುದ್ಧ ಮೊದಲ ಜಯದ ಹುಡುಕಾಟದಲ್ಲಿ ಡೆಲ್ಲಿ ಗೋವಾದ ವಿರುದ್ಧ ಮೊದಲ ಜಯದ ಹುಡುಕಾಟದಲ್ಲಿ ಡೆಲ್ಲಿ

ಡೆಲ್ಲಿ ಮೇಲುಗೈ

ಅದ್ಬುತ ಫುಟ್ಬಾಲ್ ಆಟ. ಆದರೆ ಮೇಲುಗೈ ಸಾಧಿಸಿದ್ದು ಡೆಲ್ಲಿ ಡೈನಮೋಸ್. ಇತ್ತಂಡಗಳಿಗೂ ಗೋಲು ಗಳಿಸಲು ಅವಕಾಶ ಉತ್ತಮವಾಗಿತ್ತು. ಆದರೆ ಡೆಲ್ಲಿ ಆರಂಭದಲ್ಲೇ ವಿಕ್ರಮ್‌ಜಿತ್ ಸಿಂಗ್ ಗಳಿಸಿದ ಅದ್ಭುತ ಗೋಲಿನಿಂದ ಮುನ್ನಡೆ ಕಂಡುಕೊಂಡಿತು. 6ನೇ ನಿಮಿಷದಲ್ಲಿ ಮೂಡಿ ಬಂದ ಗೋಲು ಡೆಲ್ಲಿ ತಂಡಕ್ಕೆ ಪ್ರಥಮಾರ್ಧದ ಉಳಿತ ಸಮಯವನ್ನು ಅತ್ಯಂತ ಆತ್ಮವಿಶ್ವಾಸದಲ್ಲಿ ಆಡುವಂತೆ ಮಾಡಿತು.

Sub Brandon & Edu’s late strike bring Goa to winning ways

ಫ್ರಾನ್ಸಿಸ್ಕೊ ಡೊರಾನ್ಸರೋ ಅವರ ಜಾಗದಲ್ಲಿ ಬೇರಾವ ಗೋಲ್‌ಕೀಪರ್ ಇರುತ್ತಿದ್ದರೂ ಗೋವಾ ತಂಡ ಸಮಬಲ ಅಥವಾ ಮುನ್ನಡೆ ಕಂಡುಕೊಂಡಿರುತ್ತಿತ್ತು. ಹೆಡರ್ ಮೂಲಕ ಮಾರ್ಕೋಸ್ ತೆಬರ್ ಅವರಿಗೆ ಗೋಲು ಗಳಿಸುವ ಅವಕಾಶ ಮುಕ್ತವಾಗಿತ್ತು. ಆದರೆ ಉತ್ತಮ ಅವಕಾಶದಿಂದ ಅವರು ವಂಚಿತರಾದರು.

ಐಎಸ್ಎಲ್ 2018 : ಪುಟಿದೆದ್ದ ಚೆನ್ನೈ ಗೆ ಶರಣಾದ ಪುಣೆ ಐಎಸ್ಎಲ್ 2018 : ಪುಟಿದೆದ್ದ ಚೆನ್ನೈ ಗೆ ಶರಣಾದ ಪುಣೆ

ಗೋವಾಕ್ಕೆ ಆರಂಭದಲ್ಲೇ ಶಾಕ್

ಫೆರಾನ್ ಕೊರೊಮಿನಾಸ್ ಕೂಡ ಇದ್ದಾರೆ. ತಂಡದ ಡಿಫೆನ್ಸ್ ಹಾಗೂ ಫಾರ್ವರ್ಡ್ ವಿಭಾಗ ಬಲಿಷ್ಠವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಪಂದ್ಯ ನಡೆಯುತ್ತಿರುವುದು ಗೋವಾದಲ್ಲೇ. ಆದರೂ ಡೆಲ್ಲಿ ಡೈನಮೋಸ್ 6ನೇ ನಿಮಿಷದಲ್ಲಿ ಗೋಲು ಗಳಿಸಿ ಗೋವಾಕ್ಕೆ ಆರಂಭದಲ್ಲೇ ಅಚ್ಚರಿಯ ಆಘಾತ ನೀಡಿತು.

Sub Brandon & Edu’s late strike bring Goa to winning ways

ಮಾರ್ಕಸ್ ತೆಬಾರ್ ಉತ್ತಮ ಪಾಸೊಂದನ್ನು ಅಡ್ರಿಯಾ ಕಾರ್ಮೋನಾ ಅವರಿಗೆ ನೀಡಿದರು. ಮಿಡ್‌ಫೀಲ್ಡ್‌ನಲ್ಲಿ ಸಿಕ್ಕ ಈ ಪಾಸನ್ನು ಕಾರ್ಮೋನಾ ಗೋವಾದ ಇಬ್ಬರು ಡಿಫೆಂಡರ್ ಗಳನ್ನು ತಪ್ಪಿಸಿಕೊಂಡು ಮುನ್ನುಗ್ಗಿದರು. ಎಡಭಾಗದಲ್ಲಿ ಚೆಂಡಿಗಾಗಿ ಕಾಯುತ್ತಿದ್ದ ವಿಕ್ರಮಜಿತ್ ಸಿಂಗ್ ಅವರಿಗೆ ಕಾರ್ಮೋನಾ ಉತ್ತಮ ರೀತಿಯಲ್ಲಿ ಪಾಸ್ ನೀಡಿದರು. ಯಾವುದೇ ಅಡ್ಡಿ ಇಲ್ಲದೆ, ಸಾಕಷ್ಟು ಅವಕಾಶ ಪಡೆದಿದ್ದ ವಿಕ್ರಮ್‌ಜಿತ್ ಸಿಂಗ್ ಚೆಂಡನ್ನು ಬಲಭಾಗಕ್ಕೆ ಕೊಂಡೊಯ್ದು ಅತ್ಯಂತ ಶಕ್ತಿಯುತವಾಗಿ ತುಳಿದರು. ಕೀಪರ್ ಮೊಹಮ್ಮದ್ ನವಾಜ್ ಉತ್ತಮ ರೀತಿಯಲ್ಲಿ ಡೈವ್ ಹೊಡೆದರೂ ಚೆಂಡನ್ನು ತಡೆಯಲಾಗಲಿಲ್ಲ. ಗೋವಾದ ಪ್ರೇಕ್ಷಕರು ಮೌನಕ್ಕೆ ಶರಣಾದರೆ, ಡೆಲ್ಲಿ ಪಾಳಯದಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು.

ಐಎಸ್‌ಎಲ್‌: ಜೆಮ್ಷೆಡ್ಪುರ್ ಎಫ್‌ಸಿ vs ಡೆಲ್ಲಿ ಡೈನಮೋಸ್ ಪಂದ್ಯ ಸಮಬಲ ಐಎಸ್‌ಎಲ್‌: ಜೆಮ್ಷೆಡ್ಪುರ್ ಎಫ್‌ಸಿ vs ಡೆಲ್ಲಿ ಡೈನಮೋಸ್ ಪಂದ್ಯ ಸಮಬಲ

ಜಯದ ನಾಗಾಲೋಟದಲ್ಲಿ ಮುನ್ನುಗ್ಗುತ್ತಿದ್ದ ಗೋವಾ ತಂಡಕ್ಕೆ ಜೆಮ್ಷೆಡ್ಪುರ ತಂಡ ಹಿಂದಿನ ಪಂದ್ಯದಲ್ಲಿ ಅಚ್ಚರಿಯ ಆಘಾತ ನೀಡಿದೆ. ಆ ಪಂದ್ಯದಲ್ಲಿ ಫೆರಾನ್ ಕೊರೊಮಿನಾಸ್ ಇಲ್ಲದಿರುವುದು ಸೋಲಿಗೆ ಪ್ರಮುಖ ಕಾರಣ ಎನ್ನಬಹುದಾದರೂ, ಕೋಚ್ ತಂಡದ ಸೋಲಿನ ಜವಾಬ್ದಾರಿಯನ್ನು ಹೊತ್ತಿದ್ದರು. ಆದರೆ ಡೆಲ್ಲಿ ಡೈನಮೋಸ್ ವಿರುದ್ಧದ ಪಂದ್ಯಕ್ಕೆ ಅವರು ಲಭ್ಯ ಇರುವುದು ಸಂತಸದ ಸಂಗತಿ.

Sub Brandon & Edu’s late strike bring Goa to winning ways

ಫಾರ್ವರ್ಡ್ ವಿಭಾಗದಲ್ಲಿ ಎಡು ಬೇಡಿಯಾ, ಜಾಕಿಚಾಂದ್ ಸಿಂಗ್, ಹ್ಯುಗೋ ಬೌಮೌಸ್ ಮತ್ತು ಅಹಮ್ಮದ್ ಜಹೌವ್ ತಂಡದ ಪ್ರಮುಖ ಅಸ್ತ್ರ. ಡಿಫೆನ್ಸ್ ವಿಭಾಗದಲ್ಲಿ ಗೋವಾ ತಂಡ ಡೆಲ್ಲಿಗಿಂತ ಬಲಿಷ್ಠ ಎಂಬುದು ಸ್ಪಷ್ಟ. ಡೆಲ್ಲಿ ತಂಡ ಅಟ್ಯಾಕ್ ಹಾಗೂ ಡಿಫೆನ್ಸ್ ವಿಭಾಗದಲ್ಲಿ ಹಿಂದಿದೆ. ಡೆಲ್ಲಿ ಮೊದಲ ಜಯದ ನಿರೀಕ್ಷೆಯಲ್ಲಿದೆ. ಜೆಮ್ಷೆಡ್ಪುರ ತಂಡದ ವಿರುದ್ಧದ ಪಂದ್ಯದಲ್ಲಿ ಡೆಲ್ಲಿಗೆ ಜಯ ಗಳಿಸಲು ಉತ್ತಮ ಅವಕಾಶವಿದ್ದಿತ್ತು, ಆದರೆ ಅಂತಿಮ ಹಂತದಲ್ಲಿ ನೀಡಿದ ಗೋಲು ತಂಡದ ಜಯವನ್ನು ಕಸಿದುಕೊಂಡಿತು. ಇದುವರೆಗೂ ಇತ್ತಂಡಗಳು ಒಂಬತ್ತು ಬಾರಿ ಮುಖಾಮುಖಿಯಾಗಿದ್ದು, ಗೋವಾ 6-3ರ ಮುನ್ನಡೆ ಕಂಡಿದೆ.

Story first published: Friday, November 9, 2018, 10:33 [IST]
Other articles published on Nov 9, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X