ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಗೋಲು ಹೊಡೆಯೋದಷ್ಟೇ ಅಲ್ಲ, ದಿಲ್ಲೂ ಗೆಲ್ತಿದ್ದಾರೆ ಸುನಿಲ್ ಛೆಟ್ರಿ

Sunil Chhetri joins Lionel Messi as second highest international goal scorer

ನವದೆಹಲಿ, ಜೂ. 10: ಸರಳತೆಯಿಂದ ಸಾಧಕರು ಇನ್ನಷ್ಟು ದೊಡ್ಡವರಾಗಬಹುದು ಎನ್ನುವುದಕ್ಕೆ ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಒಳ್ಳೆಯ ಉದಾಹರಣೆ. ಛೆಟ್ರಿ ಅವರು ಗೋಲ್ ದಾಖಲೆಯೊಂದಿಗೆ ಇಡೀ ದೇಶ ಹೆಮ್ಮೆ ಪಡುವಂತೆ ಮಾಡಿದ್ದಷ್ಟೇ ಅಲ್ಲ, ಸರಳತೆ, ಆದರ್ಶ ವ್ಯಕ್ತಿತ್ವದಿಂದ ನಮ್ಮೆದುರು ಇನ್ನಷ್ಟು ಎತ್ತರಕ್ಕೆ ನಿಲ್ಲುತ್ತಲೇ ಇದ್ದಾರೆ.

ನಾವೆಷ್ಟೇ ಸಾಧಿಸಿದರೂ ಸಾಧನೆಯ ಹಮ್ಮು ನಮ್ಮ ನಡವಳಿಕೆಯಲ್ಲಿ ಕಿಂಚಿತ್ತೂ ಕಾಣದಂತೆ ಇನ್ನೂ ಸರಳರಾಗಿ ಕಾಣುತ್ತೇವೆಲ್ಲ ಆ ಒಳ್ಳೆಯತನದ ಬಗ್ಗೆ ಬಗ್ಗೆ ನಾವಿಲ್ಲ ಮಾತನಾಡುತ್ತಿದ್ದೇವೆ. ಛೆಟ್ರಿ ಇತ್ತೀಚೆಗೆ ಕ್ರೀಡಾಭಿಮಾನಿಗಳಿಗೆ ಹೆಚ್ಚು ಇಷ್ಟವಾಗುತ್ತಿರೋದು ಇದೇ ಸಣ್ಣತನದಿಂದ.

ಶನಿವಾರಷ್ಟೇ ಮುಂಬೈಯಲ್ಲಿ ನಡೆದ ಇಂಟರ್ ಕಾಂಟಿನೆಂಟಲ್ ಕಪ್ ಫುಟ್ಬಾಲ್ ಟೂರ್ನಿಯ ಫೈನಲ್ ನಲ್ಲಿ ಭಾರತ ತಂಡ ಕೀನ್ಯಾ ವಿರುದ್ಧ 2-0 ಅಂತರದ ಗೆಲುವು ದಾಖಲಿಸಿತ್ತು. ಈ ಗೆಲುವಿನೊಂದಿಗೆ ಸುನಿಲ್ ಅಧಿಕ ಗೋಲ್ ಸಾಧಕರಲ್ಲಿ ವಿಶ್ವದಲ್ಲೇ ಎರಡನೆಯವರಾಗಿ ಅರ್ಜೆಂಟೀನಾ ಶ್ರೇಷ್ಠ ಆಟಗಾರ ಲಿಯೋನೆಲ್ ಮೆಸ್ಸಿಗೆ ಸರಿ ಸಮಾನರಾಗಿ ನಿಲ್ಲುವ ಮೂಲಕ ಭಾರತ ಹೆಮ್ಮೆ ಪಡುವಂತೆ ಮಾಡಿದ್ದರು.

ಭಾರತದ ಹೆಮ್ಮೆ ಛೆಟ್ರಿ

ಭಾರತದ ಹೆಮ್ಮೆ ಛೆಟ್ರಿ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಕ್ರಿಕೆಟ್ ನಲ್ಲಿ ಹೆಚ್ಚು ಗುರುತಿಸಿಕೊಂಡಿತ್ತು. ಅದು ಬಿಟ್ಟರೆ ಕೊಂಚ ಹಾಕಿ, ಬ್ಯಾಡ್ಮಿಂಟನ್ ನಂತ ಕೆಲವೇ ಕೆಲವು ಕ್ರೀಡೆಗಳಲ್ಲಿ ಭಾರತ ವಿಶ್ವದ ಗಮನ ಸೆಳೆದಿದ್ದನ್ನು ನಾವು ನೋಡಿದ್ದೇವೆ. ಆದರೆ ಇಂದು ಭಾರತ ಫುಟ್ಬಾಲ್ ನತ್ತ ಇಡೀ ವಿಶ್ವವೇ ದೃಷ್ಟಿ ಹರಿಸುವಂತಾಗಿದೆ; ಅದು ಸುನಿಲ್ ಛಟ್ರಿಯಿಂದಾಗಿ.

ನಂ. 1 ಸ್ಥಾನದತ್ತ ದಾಪುಗಾಲು

ನಂ. 1 ಸ್ಥಾನದತ್ತ ದಾಪುಗಾಲು

ಅಂತಾರಾಷ್ಟ್ರೀಯ ಮಟ್ಟದ ಸಕ್ರಿಯ ಫುಟ್ಬಾಲ್ ಆಟಗಾರರಲ್ಲಿ ಅಧಿಕ ಗೋಲ್ ಸಾಧಕರಾಗಿ ಮೂರನೇ ಸ್ಥಾನದಲ್ಲಿದ್ದ ಛೆಟ್ರಿ ಶನಿವಾರವಷ್ಟೇ ದ್ವಿತೀಯ ಸ್ಥಾನಿಗರಾಗಿ ಮೆಸ್ಸಿಗೆ ಸಮಾನ ಸಾಧನೆ ಮೆರೆದರು. ಅದರಲ್ಲೂ ಆಡಿರುವ ಪಂದ್ಯಗಳ ಲೆಕ್ಕಾಚಾರದಲ್ಲಿ ನೋಡಿದರೆ ಛೆಟ್ರಿಯೇ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಅಧಿಕ ಗೋಲ್ ಸಾಧಕರಲ್ಲಿ ಪೋರ್ಚುಗಲ್ ನ ಕ್ರಿಸ್ಚಿಯಾನೊ ರೊನಾಲ್ಡೋ (81 ಗೋಲ್/150 ಪಂದ್ಯಗಳು) ಪ್ರಥಮ ಸ್ಥಾನದಲ್ಲಿದ್ದರೆ, ಸುನಿಲ್ ಛೆಟ್ರಿ (64 ಗೋಲ್/102 ಪಂದ್ಯಗಳು) ಮತ್ತು ಲಿಯೋನೆಲ್ ಮೆಸ್ಸಿ 64 ಗೋಲ್/124 ಪಂದ್ಯಗಳು) ದ್ವಿತೀಯ ಸ್ಥಾನದಲ್ಲಿದ್ದಾರೆ.

ಸ್ಫೂರ್ತಿಯ ನಾಯಕ

ಸ್ಫೂರ್ತಿಯ ನಾಯಕ

ಛೆಟ್ರಿ ಸೂರ್ತಿಯ ನಾಯಕರಾಗಿ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಕ್ರಿಕೆಟ್ ಬೆಂಬಲಿಸುವಂತೆ ಫುಟ್ಬಾಲ್ ಮತ್ತು ಇತರ ಕ್ರೀಡೆಗಳಿಗೂ ಕ್ರೀಡಾಭಿಮಾನಿಗಳು ಪ್ರೋತ್ಸಾಹಿಸಬೇಕು. ಇತರ ಕ್ರೀಡಾಪಟುಗಳೂ ಶ್ರಮ ಪಡುತ್ತಾರೆ; ಅವರನ್ನೂ ಬೆಂಬಲಿಸಿ ಎಂದು ಈ ಹಿಂದೆ ಟ್ವಿಟರ್ ವೀಡಿಯೋ ಮೂಲಕ ಕೇಳಿಕೊಂಡಿದ್ದ ಛೆಟ್ರಿ ಕ್ರೀಡಾಭಿಮಾನಿಗಳ ಪ್ರೀತಿ ಗೆದ್ದಿದ್ದರು.

ಕೈ ಮುಗಿದು ರಾಷ್ಟ್ರಾಭಿಮಾನ ಮೆರೆದಿದ್ದರು

ಕೈ ಮುಗಿದು ರಾಷ್ಟ್ರಾಭಿಮಾನ ಮೆರೆದಿದ್ದರು

ಕೀನ್ಯಾ ವಿರುದ್ಧ ಇಂಟರ್ ಕಾಂಟಿನೆಂಟಲ್ ಕಪ್ ಟೂರ್ನಿಯಲ್ಲಿ ತಮ್ಮ 100ನೇ ಪಂದ್ಯವನ್ನಾಡಿದ್ದ ಛೆಟ್ರಿ ಭಾರತ 3-0 ಅಂತರದಿಂದ ಗೆಲ್ಲುವಲ್ಲೂ ನಿರ್ಣಾಯಕ ಪಾತ್ರ ವಹಿಸಿದ್ದರು. ಪಂದ್ಯದ ಬಳಿಕ ಪೆವಿಲಿಯನ್ ಗೆ ಛೆಟ್ರಿ ಹಿಂದಿರುಗುತ್ತಿದ್ದ ವೇಳೆ ಅಭಿಮಾನಿಯೊಬ್ಬರ ಕೈಯಿಂದ ತ್ರಿವರ್ಣ ಧ್ವಜ ಜಾರಿ ನೆಲಕ್ಕೆ ಬಿದ್ದಿತ್ತು. ಆಗ ಧ್ವಜವನ್ನು ಹೆಕ್ಕಿ ಅಭಿಮಾನಿಗೆ ಕೊಡುವಲ್ಲಿ ನೆರವಾಗಿದ್ದ ಛಟ್ರಿ, ಅಭಿಮಾನಿಯೆಡೆಗೆ ಕೈ ಮುಗಿದು 'ಹೀಗಾಗದಂತೆ ಜಾಗ್ರತೆವಹಿಸಿ' ಎಂದು ಕೋರಿಕೊಂಡಿದ್ದರು.

Story first published: Tuesday, June 12, 2018, 13:44 [IST]
Other articles published on Jun 12, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X