ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ದೇಹ ಸ್ಪಂದಿಸುವಷ್ಟು ಕಾಲ ಭಾರತ ದೇಶಕ್ಕಾಗಿ ಆಡುತ್ತೇನೆ: ಸುನಿಲ್ ಛೆಟ್ರಿ

Sunil Chhetri: Will keep playing for India as long as my body permits

ನವದೆಹಲಿ, ಏಪ್ರಿಲ್ 26: ಕ್ರಿಕೆಟ್ ಗುಂಗಿನಲ್ಲಿ ಮುಳುಗಿ ಹೋಗಿರುವ ದೇಶವೊಂದರಲ್ಲಿ ಬೇರೆ ಕ್ರೀಡೆಯ ಮೂಲಕ ಹೆಸರು ಗಳಿಸೋದು ಸುಲಭವಿಲ್ಲ. ಆದರೆ ಸುನಿಲ್ ಛೆಟ್ರಿ ಫುಟ್ಬಾಲ್ ಪ್ರತಿಭೆಯಿಂದ ವಿಶ್ವ ಮಟ್ಟದಲ್ಲಿ ಗಮನ ಸೆಳೆದವರು. ಫುಟ್ಬಾಲ್ ಕಾರಣಕ್ಕಾಗಿ ವಿಶ್ವವೇ ಭಾರತದತ್ತ ಕಣ್ಣಾಯಿಸುವಂತೆ ಮಾಡಿದ ಛೆಟ್ರಿ ದೇಹ ಸ್ಪಂದಿಸುವವರೆಗೂ ತಾನು ದೇಶಕ್ಕಾಗಿ ಆಡುವುದಾಗಿ ಹೇಳಿದ್ದಾರೆ (ಚಿತ್ರಕೃಪೆ: ದ ಬ್ರಿಡ್ಜ್).

ಐಪಿಎಲ್‌ 2019: ಆರ್‌ಸಿಬಿ ಪಂದ್ಯದ ಬಳಿಕ ಸ್ಟೀವನ್‌ ಸ್ಮಿತ್‌ ಮನೆಗೆಐಪಿಎಲ್‌ 2019: ಆರ್‌ಸಿಬಿ ಪಂದ್ಯದ ಬಳಿಕ ಸ್ಟೀವನ್‌ ಸ್ಮಿತ್‌ ಮನೆಗೆ

ಒಟ್ಟು 67 ಗೋಲ್‌ಗಳ ಮೂಲಕ ವಿಶ್ವದ ಸಕ್ರಿಯ ಫುಟ್ಬಾಲ್ ಆಟಗಾರರಲ್ಲಿ ಪೋರ್ಚುಗಲ್ ಸ್ಟಾರ್ ಫುಟ್ಬಾಲರ್ ಕ್ರಿಸ್ಚಿಯಾನೊ ರೊನಾಲ್ಡೋ (85 ಗೋಲ್‌ಗಳು) ಬಳಿಕ ಎರಡನೇ ಅತ್ಯಧಿಕ ಗೋಲ್‌ ಸಾಧಕರಾಗಿ ಛೆಟ್ರಿ ಗುರುತಿಸಿಕೊಂಡಿದ್ದಾರೆ. ಫುಟ್ಬಾಲ್ ದೈತ್ಯ ಪ್ರತಿಭೆ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ (65 ಗೋಲ್‌ಗಳು) ಅವರನ್ನೂ ಛೆಟ್ರಿ ಹಿಂದಿಕ್ಕಿರುವುದು ಭಾರತ ಪಾಲಿಗೆ ಹೆಮ್ಮೆಯ ಸಂಗತಿಯೆ.

'ದೇಹ ಸ್ಪಂದಿಸುವಷ್ಟು ಕಾಲ ನಾನು ದೇಶಕ್ಕಾಗಿ ಆಡಲು ಬಯಸಿದ್ದೇನೆ. ಭಾರತಕ್ಕಾಗಿ ಆಡುವುದೇ ನನ್ನ ಬದುಕಿನ ಹೆಮ್ಮೆ ಎಂದು ನಾನು ಭಾವಿಸಿದ್ದೇನೆ. ಹಾಗಾಗಿ ಎಷ್ಟು ಕಾಲ ನನ್ನಿಂದ ಆಡಲು ಸಾಧ್ಯವೋ ಅಷ್ಟು ಕಾಲ ನಾನೀ ದೇಶದ ಜೆರ್ಸಿ ಧರಿಸುತ್ತೇನೆ' ಎಂದು ಇಂಡೋ ಏಷ್ಯನ್ ನ್ಯೂಸ್ ಸರ್ವೀಸಸ್ (ಐಎಎನ್‌ಎಸ್) ಜೊತೆ ಮಾತನಾಡುತ್ತ ಛೆಟ್ರಿ ಹೇಳಿಕೊಂಡಿದ್ದಾರೆ.

ಟಿ20 ಕ್ರಿಕೆಟ್‌: ಬಿಗ್‌ ಬ್ಯಾಷ್‌ ಲೀಗ್‌ಗೆ ಶೇನ್‌ ವ್ಯಾಟ್ಸನ್‌ ಗುಡ್‌ ಬೈಟಿ20 ಕ್ರಿಕೆಟ್‌: ಬಿಗ್‌ ಬ್ಯಾಷ್‌ ಲೀಗ್‌ಗೆ ಶೇನ್‌ ವ್ಯಾಟ್ಸನ್‌ ಗುಡ್‌ ಬೈ

ದೇಶದಲ್ಲಿ ಫುಟ್ಬಾಲ್ ಕ್ರೇತ್ರದಲ್ಲಿ ಸುಧಾರಣೆಯ ಬಗ್ಗೆ ಮಾತನಾಡಿದ ಸುನಿಲ್, 'ಒಂದು ದೇಶವಾಗಿ ಕಳೆದ ಸುಮಾರು ಐದೇಳು ವರ್ಷಗಳಲ್ಲಿ ಬೇಕಾದ ಸಂಖ್ಯೆಯ ಸ್ಟ್ರೈಕರ್‌ಗಳನ್ನು ಹುಟ್ಟುಹಾಕಲು ನಮ್ಮಿಂದ ಸಾಧ್ಯವಾಗಿಲ್ಲ. ಇದಕ್ಕೆ ಬೇರೆಬೇರೆ ಕಾರಣಗಳಿರಬಹುದು' ಎಂದರು. ಜೊತೆಗೆ ಇನ್ನೂ ಪ್ರತಿಭಾನ್ವಿತ ಸ್ಟ್ರೈಕರ್‌ಗಳ ಸಂಖ್ಯೆ ಬೆಳೆಯಬೇಕಿದೆ ಎಂಬ ಅಭಿಪ್ರಾಯವನ್ನು ಛೆಟ್ರಿ ಹೊರ ಹಾಕಿದರು.

Story first published: Friday, April 26, 2019, 16:09 [IST]
Other articles published on Apr 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X