ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

AIFF ಮೇಲೆ ಫಿಫಾ ಹೇರಿರುವ ನಿಷೇಧ ಹಿಂಪಡೆಯುವತ್ತ ಕೆಲಸ ನಿರ್ವಹಿಸಲು ಸರ್ಕಾರಕ್ಕೆ ಸುಪ್ರೀಂ ಸೂಚನೆ

Supreme Court tells Government to work on lifting ban on lifting FIFAs ban on AIFF

ನಿನ್ನೆ ( ಆಗಸ್ಟ್ 16 ) ಮುಂಜಾನೆ ಭಾರತ ಕ್ರೀಡಾಭಿಮಾನಿಗಳಿಗೆ ಬೇಸರವಾಗುವಂತಹ ಹಾಗೂ ಸರ್ಕಾರಕ್ಕೆ ಮುಖಭಂಗವಾಗುವಂತಹ ತೀರ್ಮಾನವೊಂದನ್ನು ವಿಶ್ವ ಫುಟ್‌ಬಾಲ್ ಆಡಳಿತ ಮಂಡಳಿಯಾದ ಫಿಫಾ ತೆಗೆದುಕೊಂಡಿತ್ತು. ಮೂರನೇ ವ್ಯಕ್ತಿಗಳ ಅನಗತ್ಯ ಹಸ್ತಕ್ಷೇಪ ಹಾಗೂ ಫಿಫಾ ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಆಲ್ ಇಂಡಿಯಾ ಫುಟ್‌ಬಾಲ್ ಫೆಡರೇಶನ್‌ ಅನ್ನು ಅಮಾನತುಗೊಳಿಸಿದ ಫಿಫಾ ಇದೇ ವರ್ಷ ಭಾರತದಲ್ಲಿ ಆಯೋಜನೆಯಾಗಿದ್ದ ಪ್ರತಿಷ್ಠಿತ ಮಹಿಳಾ ಅಂಡರ್ 17 ಫುಟ್‌ಬಾಲ್ ವಿಶ್ವಕಪ್ ಟೂರ್ನಿಯನ್ನೂ ಸಹ ರದ್ದು ಮಾಡಿತು.

ಒಂದಲ್ಲಾ ಎರಡಲ್ಲ ಮೂರು ಬಾರಿ ಈ ಬಾರಿಯ ಏಷ್ಯಾಕಪ್‌ನಲ್ಲಿ ಮುಖಾಮುಖಿಯಾಗಲಿವೆ ಭಾರತ ಮತ್ತು ಪಾಕ್!ಒಂದಲ್ಲಾ ಎರಡಲ್ಲ ಮೂರು ಬಾರಿ ಈ ಬಾರಿಯ ಏಷ್ಯಾಕಪ್‌ನಲ್ಲಿ ಮುಖಾಮುಖಿಯಾಗಲಿವೆ ಭಾರತ ಮತ್ತು ಪಾಕ್!

ಈ ಮೂಲಕ ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ ಭಾರೀ ಮುಖಭಂಗಕ್ಕೆ ಒಳಗಾಗಿದ್ದು, ಕೇಂದ್ರ ಕ್ರೀಡಾ ಸಚಿವಾಲಯ ಕೂಡ ಈ ಬೆಳವಣಿಗೆಯಿಂದ ತಲೆ ತಗ್ಗಿಸುವಂತಾಗಿತ್ತು. ಇಷ್ಟೆಲ್ಲಾ ಬೆಳವಣಿಗೆಯಾದ ನಂತರ ಸುಪ್ರೀಂ ಕೋರ್ಟ್ ಈ ಕುರಿತಾಗಿ ಪ್ರತಿಕ್ರಿಯಿಸಿದ್ದು, ಫಿಫಾ ಭಾರತ ಫುಟ್‌ಬಾಲ್ ಫೆಡರೇಶನ್‌ ಅನ್ನು ಅಮಾನತುಗೊಳಿಸಿದ ಮಾತನೇ ದಿನ ಪ್ರಕರಣದ ವಿಚಾರಣೆ ನಡೆಸಿ ಈ ನಿಷೇಧವನ್ನು ಫಿಫಾ ಹಿಂಪಡೆಯುವ ಹಾಗೆ ಕೆಲಸವನ್ನು ಮಾಡಿ ಎಂದು ಸೂಚನೆಯನ್ನು ನೀಡಿದೆ ಹಾಗೂ ಈ ವರ್ಷ ಭಾರತದಲ್ಲಿ ಮಹಿಳಾ ಅಂಡರ್ 17 ಫುಟ್‌ಬಾಲ್ ವಿಶ್ವಕಪ್ ಟೂರ್ನಿಯನ್ನು ನಡೆಸಲಾಗುವುದಿಲ್ಲ ಎಂದೂ ಸಹ ಸುಪ್ರೀಂ ಹೇಳಿಕೆ ನೀಡಿದೆ.

ಇನ್ನು ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ಕುರಿತಾಗಿ ಸರ್ಕಾರವು ಈಗಾಗಲೇ ಫಿಫಾ ಜೊತೆ ಮಾತುಕತೆಯನ್ನು ನಡೆಸಿದೆ ಎಂದಿದ್ದಾರೆ. ಎಸ್‌ಜಿ ಮೆಹ್ತಾ ಅವರ ಕೋರಿಕೆಯ ಮೇರೆಗೆ U17 ವಿಶ್ವಕಪ್ ನಡೆಸಲು ಪರ ಸಕ್ರಿಯ ಪಾತ್ರವನ್ನು ವಹಿಸುವಂತೆ ನಾವು ಕೇಂದ್ರವನ್ನು ಕೇಳುತ್ತೇವೆ ಹಾಗೂ ಎಐಎಫ್‌ಎಫ್ ಅಮಾನತುಗೊಳಿಸುವಿಕೆಯನ್ನು ಸುಲಭಗೊಳಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಹೀಗೆ ಸುಪ್ರೀಂ ಕೋರ್ಟ್ ಸೂಚನೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಮಹಿಳಾ ಫುಟ್‌ಬಾಲ್ ವಿಶ್ವಕಪ್ ಟೂರ್ನಿಯನ್ನು ಭಾರತದಲ್ಲಿಯೇ ಆಯೋಜಿಸಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು ಶೀಘ್ರದಲ್ಲಿಯೇ ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳಲು ದಾರಿ ಹುಡುಕಲಿದ್ದೇವೆ ಮತ್ತು ಈ ವಿಷಯವನ್ನು ಸೋಮವಾರ, ಆಗಸ್ಟ್ 22 ರವರೆಗೆ ಮುಂದೂಡಲು ವಿನಂತಿಸಿದ್ದೇವೆ ಎಂದು ತಿಳಿಸಿದೆ.

ಇನ್ನು ಫಿಫಾ ಭಾರತ ಫುಟ್‌ಬಾಲ್ ಫೆಡರೇಶನ್ ಅನ್ನು ಅಮಾನತು ಮಾಡಿದ ನಂತರ ಕೇಂದ್ರವು ಫಿಫಾ ಜತೆ ಎರಡು ಸಭೆಗಳನ್ನು ನಡೆಸಿರುವುದಾಗಿ ಕೋರ್ಟ್‌ಗೆ ತಿಳಿಸಿದೆ.

Story first published: Wednesday, August 17, 2022, 13:23 [IST]
Other articles published on Aug 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X