ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೈನಲ್ 'ಫೈಟ್' ಅರ್ಜೆಂಟಿನಾ vs ಜರ್ಮನಿ ಕದನ ಸ್ವಾರಸ್ಯ

By Mahesh

ರಿಯೋ ಡಿಜನೈರೋ, ಜು.11: ವಿಶ್ವಕಪ್ ಫುಟ್ ಬಾಲ್ ಪಂದ್ಯಾವಳಿಗೆ 84 ವರ್ಷ ತುಂಬಿಬಂದಿದೆ. 1930 ರಲ್ಲಿ ಆರಂಭವಾದ ವಿಶ್ವಕಪ್ ಫುಟ್ ಬಾಲ್ ಟೂರ್ನಿ ಕಳೆದ 19 ಬಾರಿ ನೀಡಿದ ರೋಚಕತೆ ಈ ಬಾರಿಯೂ ನೀಡುವಲ್ಲಿ ಯಶಸ್ವಿಯಾಗಿದೆ. ಬ್ರೆಜಿಲ್ಲಿನಲ್ಲಿ ನಡೆದಿರುವ 20ನೇ ವಿಶ್ವಕಪ್ ನ ಅಂತಿಮ ಹಣಾಹಣಿಯಲ್ಲಿ ಅರ್ಜೆಂಟಿನಾ ತಂಡ ಜರ್ಮನಿಯನ್ನು ಎದುರಿಸಲಿದೆ. ಅಂತಿಮ ಹಣಾಹಣಿಯ ಕದನ ಸ್ವಾರಸ್ಯ ಇಲ್ಲಿದೆ.

ಇದುವರೆವಿಗೂ ಬ್ರೆಜಿಲ್ 7 ಬಾರಿ ಫೈನಲ್ ಪ್ರವೇಶಿಸಿದ್ದು 5 ಬಾರಿ ಗೆದ್ದು 2 ಬಾರಿ ರನ್ನರ್ ಅಪ್ ಆಗಿದೆ. ಇಟಲಿ 6 ಬಾರಿ ಫೈನಲ್ ಪ್ರವೇಶಿಸಿ 4 ಬಾರಿ ಗೆದ್ದು 2 ಬಾರಿ ರನ್ನರ್ ಅಪ್ ಆಗಿ ಎರಡನೇ ಸ್ಥಾನದಲ್ಲಿದೆ. ಮಿಕ್ಕಂತೆ, ಜರ್ಮನಿ 7 ಬಾರಿ ಫೈನಲ್ ಹಂತಕ್ಕೇರಿದರೂ 3 ಬಾರಿ ಮಾತ್ರ ಜಪ್ ಎತ್ತಿ 4 ಬಾರಿ ರನ್ನರ್ ಅಪ್ ಆಗಿದೆ. ಜರ್ಮನಿಗೆ ಇದು 8ನೇ ವಿಶ್ವಕಪ್ ಫೈನಲ್ ಪಂದ್ಯವಾಗಿದೆ. [ವಿಶ್ವಕಪ್ ಫೈನಲ್ಸ್, ಕಪ್ ವಿನ್ನರ್ಸ್ ಪಟ್ಟಿ]

ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಗೆದ್ದ ತಂಡ ವಿಶ್ವ ಚಾಂಪಿಯನ್ ಎನಿಸಲಿದೆ. 90 ನಿಮಿಷಗಳ ನಿಗದಿತ ಆಟದ ವೇಳೆ ಫಲಿತಾಂಶ ಹೊರಬೀಳದೆ ಡ್ರಾ ಆಗಿದ್ದರೆ, ಹೆಚ್ಚುವರಿ 30 ಸಮಯ ನೀಡಲಾಗುತ್ತದೆ. ಆದರೂ ಫಲಿತಾಂಶ ಸಿಗದಿದ್ದಾಗ ಪೆನಾಲ್ಟಿ ಶೂಟೌಟ್ ಮೂಲಕ ಪಂದ್ಯದ ಫಲಿತಾಂಶ ನಿರ್ಣಯವಾಗಲಿದೆ.[ಗೋಲ್ಡನ್ ಬೂಟ್ ರೇಸ್]

ಅರ್ಜೆಂಟಿನಾ vs ಜರ್ಮನಿ ಅಜೇಯ ತಂಡಗಳು

ಅರ್ಜೆಂಟಿನಾ vs ಜರ್ಮನಿ ಅಜೇಯ ತಂಡಗಳು

ವಿಶ್ವಕಪ್ ಫೈನಲ್ ಹಣಾಹಣಿ ತಲುಪಿರುವ ಅರ್ಜೆಂಟಿನಾ ತಂಡ ಇದುವರೆವಿಗೂ ಕಳೆದ 6 ಪಂದ್ಯಗಳಲ್ಲಿ ಒಂದು ಪಂದ್ಯವನ್ನೂ ಸೋತಿಲ್ಲ. ಜರ್ಮನಿ ಕೂಡಾ ಸೋಲು ಕಂಡಿಲ್ಲ. ಆದರೆ, ಲೀಗ್ ಹಂತದಲ್ಲಿ ಒಂದು ಪಂದ್ಯ ಡ್ರಾ ಮಾಡಿಕೊಂಡಿತ್ತು.

ಜರ್ಮನಿಯ ಮಿರಾಸ್ಲವ್ ಕ್ಲೋಸ್ (2002 ಫೈನಲ್) ಬಿಟ್ಟರೆ ಉಭಯ ತಂಡದ ಮಿಕ್ಕಾ ಎಲ್ಲಾ ಆಟಗಾರರಿಗೆ ಇದು ಮೊದಲ ಫೈನಲ್ ಪಂದ್ಯದ ಅನುಭವವಾಗಿದೆ.

ಅಂತಿಮ ಹಣಾಹಣಿಗೆ ಸ್ಟೇಡಿಯಂ ಸಜ್ಜು

ಅಂತಿಮ ಹಣಾಹಣಿಗೆ ಸ್ಟೇಡಿಯಂ ಸಜ್ಜು

ರಿಯೋ ಡಿ ಜನೈರೋದ ಎಸ್ಟಡಿಯೋ ಡೊ ಮರಕಾನಾ ಸ್ಟೇಡಿಯಂನಲ್ಲಿ ಫೀಫಾ ವಿಶ್ವಕಪ್ 2014ನ ಅಂತಿಮ ಹಣಾಹಣಿ ಜು.13ರ ರಾತ್ರಿ ನಡೆಯಲಿದೆ. 1950ರ ನಂತರ ಫೈನಲ್ ಪಂದ್ಯಕ್ಕೆ ಮೈದಾನ ಸಾಕ್ಷಿಯಾಗುತ್ತಿದೆ. 76,935 ಪ್ರೇಕ್ಷಕರನ್ನು ಈ ಮೈದಾನ ತುಂಬಿಕೊಳ್ಳಲಿದೆ.

ವಿಶ್ವಕಪ್ ಪ್ರಶಸ್ತಿ ಮೊತ್ತ

ವಿಶ್ವಕಪ್ ಪ್ರಶಸ್ತಿ ಮೊತ್ತ

ವಿಶ್ವಕಪ್ ಪ್ರಶಸ್ತಿ ವಿಜೇತ ತಂಡಕ್ಕೆ 35 ಮಿಲಿಯನ್ ಡಾಲರ್ ಪ್ರಶಸ್ತಿ ನಗದು ಹಾಗೂ ಕಪ್ ಸಿಗಲಿದೆ. ರನ್ನರ್ ಅಪ್ ತಂಡಕ್ಕೆ 25 ಮಿಲಿಯನ್ ದಾಲರ್ ಸಿಗಲಿದೆ.

ಪರಸ್ಪರ ಮುಖಾಮುಖಿ

ಪರಸ್ಪರ ಮುಖಾಮುಖಿ

ವಿಶ್ವಕಪ್ ಫೈನಲ್ ನಲ್ಲಿ ಜರ್ಮನಿ ಹಾಗೂ ಅರ್ಜೆಂಟಿನಾ ಮೂರನೇ ಬಾರಿ ಸಂಧಿಸುತ್ತಿದ್ದಾರೆ. ಕಳೆದ ಎರಡು ಬಾರಿಯಲ್ಲಿ ಸಮಬಲ ಸಾಧಿಸಿದ್ದಾರೆ. ಅರ್ಜೆಂಟಿನಾ 1986 ರಲ್ಲಿ 3-2ರಿಂದ ಗೆದ್ದರೆ, ಜರ್ಮನಿ 1990ರಲ್ಲಿ 1-0 ಗೋಲು ಅಂತರದಿಂದ ಗೆಲುವು ಸಾಧಿಸಿತ್ತು.

ಜರ್ಮನಿ ಕಪ್ ಗೆದ್ದಿದ್ದು ಯಾವಾಗ?

ಜರ್ಮನಿ ಕಪ್ ಗೆದ್ದಿದ್ದು ಯಾವಾಗ?

ಜರ್ಮನಿ ತಂಡ ಮೂರು ಬಾರಿ ವಿಶ್ವಕಪ್ ಗೆದ್ದಿದೆ. ಅತಿಥೇಯರಾಗಿ 1954,1974 ರಲ್ಲಿ ಹಾಗೂ 1990ರಲ್ಲಿ(ಪಶ್ಚಿಮ ಜರ್ಮನಿಯಾಗಿ) ಗೆಲುವು ಸಾಧಿಸಿದೆ. ಅರ್ಜೆಂಟಿನಾ ತಂಡ ಅತಿಥೇಯರಾಗಿ 1978ರಲ್ಲಿ ಹಾಗೂ 1986 ರಲ್ಲಿ ಗೆಲುವು ಸಾಧಿಸಿತ್ತು.

ಅರ್ಜೆಂಟಿನಾ ಫೈನಲ್ ಗೆಲುವು

ಅರ್ಜೆಂಟಿನಾ ಫೈನಲ್ ಗೆಲುವು

* ಅರ್ಜೆಂಟಿನಾ ಐದನೇ ಬಾರಿ ಫೈನಲ್ ಪ್ರವೇಶಿಸಿದ್ದು( 2 ಗೆಲುವು 1978,1986; 2 ಬಾರಿ ಸೋಲು 1930, 1990)
* ಜರ್ಮನಿ 8 ಬಾರಿ ಫೈನಲ್ ಪ್ರವೇಶಿಸಿದ್ದು (3 ಜಯ 1954, 1974, 1990; 4 ಸೋಲು 1966, 1982, 1986, 2002)

ಅರ್ಜೆಂಟಿನಾ ಮುಂದೆ

ಅರ್ಜೆಂಟಿನಾ ಮುಂದೆ

ಪರಸ್ಪರ ಕಾದಾಟದಲ್ಲಿ ಇದುವರೆವಿಗೂ ಅರ್ಜೆಂಟಿನಾ ಮುಂದಿದ್ದು 9-6 ಅನುಪಾತ ಹೊಂದಿದೆ. 5 ಪಂದ್ಯಗಳು ಡ್ರಾನಲ್ಲಿ ಮುಕ್ತಾಯ ಕಂಡಿವೆ.

ಜರ್ಮನಿ ಗೆದ್ದರೂ ಬ್ರೆಜಿಲ್ ಮುಂದೆ

ಜರ್ಮನಿ ಗೆದ್ದರೂ ಬ್ರೆಜಿಲ್ ಮುಂದೆ

8ನೇ ಬಾರಿ ಫೈನಲ್ ಪ್ರವೇಶಿಸಿರುವ ಜರ್ಮನಿ ಒಂದು ವೇಳೆ ಈ ಬಾರಿ ಕಪ್ ಎತ್ತಿದರೂ ಬ್ರೆಜಿಲ್ ವಿಜೇತ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳಲಿದೆ.

ಬ್ರೆಜಿಲ್ (5 - 1958, 1962, 1970, 1994, 2002), ಇಟಲಿ (4 - 1934 as hosts, 1938, 1982, 2006) ಗೆದ್ದು ಮುನ್ನಡೆ ಕಾಯ್ದುಕೊಂಡಿವೆ.

24 ವರ್ಷದ ನಂತರ ಫೈನಲ್ ಗೆ

24 ವರ್ಷದ ನಂತರ ಫೈನಲ್ ಗೆ

24 ವರ್ಷದ ನಂತರ ಅರ್ಜೆಂಟಿನಾ ಫೈನಲ್ ಗೆ ಲಗ್ಗೆ ಇಟ್ಟಿದ್ದರೆ, ಜರ್ಮನಿ ತಂಡ 12 ವರ್ಷಗಳ ನಂತರ ಫೈನಲ್ ನಲ್ಲಿ ಆಡುತ್ತಿದೆ.

ಜರ್ಮನಿಯ ಥಾಮಸ್ ಮುಲ್ಲರ್ ಚಿನ್ನದ ಬೂಟಿನ ರೇಸಿನಲ್ಲಿ 5 ಗೋಲು ಗಳಿಸಿ ಎರಡನೇ ಸ್ಥಾನದಲ್ಲಿದ್ದರೆ, ಮೆಸ್ಸಿ 4 ಗೋಲು ಗಳಿಸಿ ಮೂರನೇ ಸ್ಥಾನದಲ್ಲಿದ್ದರೆ, ಕೊಲಂಬಿಯಾದ ಅಮೆಸ್ ರೋಡ್ರಿಗ್ರೇಜ್ 6 ಗೋಲು ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.

ವಿದೇಶಿ ಕೋಚ್ ಕಪ್ ಗೆಲ್ಲಿಸಿಲ್ಲ

ವಿದೇಶಿ ಕೋಚ್ ಕಪ್ ಗೆಲ್ಲಿಸಿಲ್ಲ

ವಿದೇಶಿ ಕೋಚ್ ಹೊಂದಿರುವ ತಂಡಗಳು ಇದುವರೆವಿಗೂ ವಿಶ್ವಕಪ್ ಗೆಲ್ಲಿಸಿಕೊಡಲು ಆಗದಿರುವುದು ಅಚ್ಚರಿಯೇ ಸರಿ. ಇದುವರೆವಿಗೂ ಕಪ್ ಗೆಲ್ಲಿಸಿ ಕೊಟ್ಟ 18 ಕೋಚುಗಳು ಕಪ್ ಗೆದ್ದ ದೇಶಕ್ಕೆ ಸೇರಿದವರಾಗಿದರು.

ಅರ್ಜೆಂಟಿನಾ (ಆಲೆಕ್ಸಾಂಡ್ರೊ ಸಬೆಲ್ಲಾ), ಜರ್ಮನಿ (ಜೋಕಿಂ ಲೊ) ತಮ್ಮ ದೇಶದ ಕೋಚ್ ಗಳನ್ನೆ ಹೊಂದಿದೆ. ಫೈನಲ್ ನಲ್ಲಿ ಮೆಸ್ಸಿ (ಅರ್ಜೆಂಟಿನಾ) ಹಾಗೂ ಫಿಲಿಪ್ ಲಾಮ್ (ಜರ್ಮನಿ) ನಾಯಕರಾಗಿದ್ದಾರೆ.

Story first published: Wednesday, January 3, 2018, 10:13 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X