ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

'ಮ್ಯಾಂಚೆಸ್ಟರ್ ಯುನೈಟೆಡ್ ವಿ ಪ್ಲೇ ಮಾಸ್ಟರ್ ಕ್ಲಾಸ್'ಗೆ ಚಾಲನೆ

‘United We Play Masterclass’ launched in India

ಟೈರ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮತ್ತು ಮ್ಯಾಂಚೆಸ್ಟರ್ ಯುನೈಟೆಡ್ ಫುಟ್‍ಬಾಲ್ ಕ್ಲಬ್‍ಗೆ ಟೈರು ಪಾಲುದಾರರಾಗಿರುವ ಅಪೋಲೊ ಟೈರ್ಸ್, ಯುವ ಫುಟ್‍ಬಾಲ್ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಉದ್ದೇಶದಿಂದ ವಿನೂತನವಾದ 'ಯುನೈಟೆಡ್ ವಿ ಪ್ಲೇ ಮಾಸ್ಟರ್ ಕ್ಲಾಸ್' ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಡಿಜಿಟಲ್ ವಿಧಾನದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಮ್ಯಾಂಚೆಸ್ಟರ್ ಯುನೈಟೆಡ್ ಸಾಕರ್ ಸ್ಕೂಲ್ ಕೋಚ್ ನೇತೃತ್ವದಲ್ಲಿ ನಡೆಯಲಿದೆ.

ಈ ಡಿಜಿಟಲ್ ಕಾರ್ಯಕ್ರಮ 16 ವರ್ಷ ವಯೋಮಿತಿಯ ಎಲ್ಲ ಫುಟ್‍ಬಾಲ್ ಆಟಗಾರರಿಗೆ ಮುಕ್ತವಾಗಿದ್ದು, ಇದರಲ್ಲಿ ಸಂವಾದಾತ್ಮಕ ತರಬೇತಿ ಕಾರ್ಯಕ್ರಮ ಮತ್ತು ಪ್ರತಿ ಆಟಗಾರರಿಗೆ ಮಾಹಿತಿಯುಕ್ತ ಸೆಷನ್ ನಡೆಯಲಿದೆ. ಸಂವಾದಾತ್ಮಕ ತರಬೇತಿ ಕಾರ್ಯಕ್ರಮವು ನಾಲ್ಕು ಸೆಷನ್‍ಗಳ ಸರಣಿ ತಲಾ 60 ಮಂದಿ ಆಟಗಾರರಿಗೆ ಅವಕಾಶದ ಬಾಗಿಲು ತೆರೆಯಲಿದೆ. ಇದು ಅಟಗಾರರ ದೈಹಿಕ ಮತ್ತು ತಾಂತ್ರಿಕ ಅಭಿವೃದ್ಧಿಗೆ ನೆರವಾಗಲಿದೆ. ನಾಲ್ಕು ಸೆಷನ್‍ಗಳ ಪೈಕಿ ಮೊದಲ ಸೆಷನ್ ಡಿಸೆಂಬರ್ 9ರಂದು (ಬುಧವಾರ) ನಡೆಯಲಿದೆ. ಇದು ಆಟಗಾರರ ಪೌಷ್ಟಿಕ, ದೈಹಿಕ ಮತ್ತು ತಾಂತ್ರಿಕ ಕೌಶಲ ಅಭಿವೃದ್ಧಿಗೆ ಗಮನ ಹರಿಸಲಿದೆ.

ಮ್ಯಾಂಚೆಸ್ಟರ್ ಯುನೈಟೆಡ್‍ನ ದಂತಕಥೆ ಎನಿಸಿದ ಡೆನಿಸ್ ಇರ್ವಿನ್ ಅವರು ಇಂದು 18 ವರ್ಷ ವಯೋಮಿತಿ ತಂಡದ ಜತೆಗೆ ನಡೆದ ವೆಬಿನಾರ್ ನಲ್ಲಿ 200 ಮಂದಿ ಯುವ ಫುಟ್‍ಬಾಲ್ ಆಟಗಾರರು ಮತ್ತು ಅವರ ಪೋಷಕರ ಜತೆ ಸಂವಾದ ನಡೆಸಿಕೊಟ್ಟರು.

"ಕಳೆದ ಕೆಲ ವರ್ಷಗಳಿಂದ ಭಾರತದಲ್ಲಿ ಫುಟ್‍ಬಾಲ್ ಅಭಿವೃದ್ಧಿಗೆ ತಳಹಂತದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಯುನೈಟೆಡ್ ವಿ ಕಾರ್ಯಕ್ರಮವು ಇದನ್ನು ಖಾತರಿಸುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆಯಾಗಿದೆ. ಹೊಸ ಸಹಜ ಸ್ಥಿತಿ ರೂಪುಗೊಳ್ಳುತ್ತಿರುವಂತೆ, ಭೌತಿಕ ಕಾರ್ಯಕ್ರಮದ ಬದಲಾಗಿ ಎಲ್ಲೆಡೆ ಡಿಜಿಟಲ್ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಕಾರ್ಯಕ್ರಮದ ನಿರಂತರತೆಯನ್ನು ಉಳಿಸಿಕೊಳ್ಳುವ ಮೂಲಕ, ಮಕ್ಕಳು ವಿಶ್ವದ ಆಕರ್ಷಕ ಕ್ಲಬ್ ಜತೆಗೆ ತಮ್ಮನ್ನು ತೊಡಗಿಸಿಕೊಳ್ಳಲು, ಕಲಿಯಲು ವಿಶಿಷ್ಟ ಅವಕಾಶ ಕಲ್ಪಿಸಿಕೊಡಲಾಗಿದೆ" ಎಂದು ಅಪೋಲೊ ಟೈರ್ಸ್ ಲಿಮಿಟೆಡ್‍ನ ಮಾರುಕಟ್ಟೆ, ಮಾರಾಟ ಮತ್ತು ಸೇವಾ ವಿಭಾಗ ಮುಖ್ಯಸ್ಥ ರಾಜೇಶ್ ದಹಿಯಾ, ಹೇಳಿದರು.

Story first published: Tuesday, December 8, 2020, 10:16 [IST]
Other articles published on Dec 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X