ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಕತಾರ್‌ ತರಬೇತಿ ಕ್ಯಾಂಪ್‌ ರದ್ದುಗೊಳಿಸಿದ ಯುಎಸ್ ಫುಟ್ಬಾಲ್ ತಂಡ

US football team cancels Qatar training camp amid unrest in Middle East

ದೋಹಾ, ಜನವರಿ 4: ಮಿಡ್ಲ್‌ ಈಸ್ಟ್‌ನಲ್ಲಿನ ರಾಜಕೀಯ ಉದ್ವಿಗ್ನತೆ ಕಾರಣದಿಂದಾಗಿ ಕತಾರ್‌ನಲ್ಲಿ ನಡೆಯಬೇಕಿದ್ದ ಯುನೈಡ್ ಸ್ಟೇಟ್ಸ್‌ ಫುರುಷರ ಫುಟ್ಬಾಲ್ ತಂಡದ ತರಬೇತಿ ಕ್ಯಾಂಪನ್ನು ರದ್ದುಗೊಳಿಸಲಾಗಿದೆ. ಯುಎಸ್ ಫುಟ್ಬಾಲ್ ಫೆಡರೇಶನ್ ಈ ವಿಚಾರವನ್ನು ಶುಕ್ರವಾರ (ಜನವರಿ 3) ಖಾತರಿಪಡಿಸಿದೆ.

ಮೊದಲ ರನ್‌ಗೆ 45 ನಿಮಿಷ,39 ಎಸೆತ; ಪ್ರೇಕ್ಷಕರಿಂದ ಎದ್ದುನಿಂತು ಚಪ್ಪಾಳೆ ಗಿಟ್ಟಿಸಿದ ಸ್ಟೀವ್ ಸ್ಮಿತ್ಮೊದಲ ರನ್‌ಗೆ 45 ನಿಮಿಷ,39 ಎಸೆತ; ಪ್ರೇಕ್ಷಕರಿಂದ ಎದ್ದುನಿಂತು ಚಪ್ಪಾಳೆ ಗಿಟ್ಟಿಸಿದ ಸ್ಟೀವ್ ಸ್ಮಿತ್

ಯುಎಸ್ ಫುಟ್ಬಾಲ್ ತಂಡ ದೊಹಾದ ಆ್ಯಸ್ಪೈರ್ ಅಕಾಡೆಮಿಯಲ್ಲಿ ಜನವರಿ 5ರಿಂದ ಸುಮಾರು 20 ದಿನಗಳ ಟ್ರೈನಿಂಗ್ ಕ್ಯಾಂಪ್‌ ನಡೆಯುವುದರಲ್ಲಿತ್ತು. ಆದರೆ 25 ಪುರುಷರು ಪಾಲ್ಗೊಳ್ಳಬೇಕಿದ್ದ ಕ್ಯಾಂಪ್‌ ರದ್ದುಗೊಂಡಿರುವುದಾಗಿ ಯುಎಸ್ ಫುಟ್ಬಾಲ್ ಕೋಚ್ ಗ್ರೆಗ್ ಬೆರ್ಹಾಲ್ಟರ್ ಕೂಡ ತಿಳಿಸಿದ್ದಾರೆ.

ಇಂಗ್ಲೀಷಿನಲ್ಲಿ ಸ್ಟೋರಿ ಓದಿ: US football team cancels Qatar training camp amid unrest in Middle East

ಬಾಗ್ದಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಜನರಲ್ ಕಾಸಿಮ್ ಸೊಲೈಮಾನಿಯನ್ನು ಡ್ರೋನ್ ದಾಳಿ ಮೂಲಕ ಕೊಂದ ಘಟನೆ ನಡೆದ ಬಳಿಕ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ಯಾಂಪ್‌ ರದ್ದುಗೊಳಿಸುವಂತೆ ಆದೇಶ ನೀಡಿದ್ದಾರೆ ಎಂದು ಪೆಂಟಗನ್ ಹೇಳಿತ್ತು. ಇದಾಗಿ 24 ಗಂಟೆಗಳ ಒಳಗೆ ಯುಎಸ್ ಸಾಕರ್ ಈ ನಿರ್ಧಾರವನ್ನು ಪ್ರಕಟಿಸಿದೆ.

ಸ್ಟೋಯ್ನಿಸ್ ಎದುರು ಮಂಕಡ್ ನಾಟಕವಾಡಿದ ಕ್ರಿಸ್ ಮೋರಿಸ್: ವೀಡಿಯೋಸ್ಟೋಯ್ನಿಸ್ ಎದುರು ಮಂಕಡ್ ನಾಟಕವಾಡಿದ ಕ್ರಿಸ್ ಮೋರಿಸ್: ವೀಡಿಯೋ

'ಈ ಪ್ರದೇಶದಲ್ಲಿನ ಆತಂಕಕಾರಿ ಪರಿಸ್ಥಿತಿಯಿಂದಾಗಿ, ಪುರುಷರ ಫುಟ್ಬಾಲ್ ತಂಡ ತರಬೇತಿ ಸಲುವಾಗಿ ಕತಾರ್‌ಗೆ ಬೆಳೆಸಬೇಕಿದ್ದ ಪ್ರಯಾಣವನ್ನು ಮುಂದೂಡಲು ಯುಎಸ್ ಸಾಕರ್ ನಿರ್ಧರಿಸಿದೆ,' ಎಂದು ಹೇಳಿಕೆಯಲ್ಲಿ ಯುಎಸ್ ಫುಟ್ಬಾಲ್ ಫೆಡರೇಶನ್ ತಿಳಿಸಿದೆ.

Story first published: Saturday, January 4, 2020, 11:46 [IST]
Other articles published on Jan 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X