ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ವಿಶ್ವಕಪ್: ಛತ್ರಿಯಡಿ ಬೆಚ್ಚಗಿದ್ದು ಟ್ರೋಲ್ ಮಳೆಯಲಿ ನೆಂದರು ಪುಟಿನ್!

Vladimir Putin Gets Trolled For Bringing Umbrella During Award Ceremony

ಮಾಸ್ಕೋ, ಜುಲೈ 16: ರಷ್ಯಾದ ಲುಜ್ನಿಕಿ ಸ್ಟೇಡಿಯಂನಲ್ಲಿ ಭಾನುವಾರ (ಜು. 15) ನಡೆದ ಫೀಫಾ ವಿಶ್ವಕಪ್ ಫೈನಲ್ ನಲ್ಲಿ ಫ್ರಾನ್ಸ್ ತಂಡ ಕ್ರೊವೇಷಿಯಾ ವಿರುದ್ಧ 4-2ರ ಗೆಲುವಿನೊಂದಿಗೆ ಚಾಂಪಿಯನ್ ಆಗಿದ್ದಾಗಿದೆ. ಆದರೆ ಪ್ರತಿಷ್ಠಿತ ಪಂದ್ಯಾಟದ ಪ್ರಶಸ್ತಿ ವಿತರಣಾ ಸಮಾರಂಭದ ವೇಳೆ ಛತ್ರಿಯೊಂದಿಗೆ ಕಾಣಿಸಿಕೊಂಡ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿ ಟ್ರೋಲ್ ಗೀಡಾಗಿದ್ದಾರೆ.

ಗಮ್ಮತ್ತಿನ ಸಂಗತಿಯೆಂದರೆ ಜುಲೈ 15ರ ಫೀಫಾ ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಶಾಂತವಾಗಿದ್ದ ವರುಣರಾಯ ಪಂದ್ಯ ಮುಗಿಯುತ್ತಲೇ ಅಲ್ಲಿ ನೆರೆದಿದ್ದವರನ್ನೆಲ್ಲಾ ತೋಯಿಸಲಾರಂಭಿಸಿದ. ಫುಟ್ಬಾಲ್ ಹಬ್ಬದ ಸಂಭ್ರಮದಲ್ಲಿದ್ದ ಆಟಗಾರರ, ಅಭಿಮಾನಿಗಳ ಸಹಿತ ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ಬಂದಿದ್ದ ಅತಿಥಿಗಳೂ ಮಳೆಗೆ ಕ್ಯಾರೇ ಅನ್ನಲಿಲ್ಲ. ಬದಲಿಗೆ ಮಳೆಯಲಿ ನೆನೆಯುತ್ತಲೇ ಬಹುಮಾನ ವಿತರಣ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಫೀಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್, ಕ್ರೊವೇಷಿಯಾ ಅಧ್ಯಕ್ಷೆ ಕೊಲಿಂಡಾ ಗ್ರಾಬರ್-ಕಿಟಾರ್ವಿಕ್ ಸೇರಿದಂತೆ ಎಲ್ಲಾ ಗಣ್ಯರೂ ಮಳೆಯಲ್ಲಿ ನೆನೆಯುತ್ತಲೇ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗಿಯಾದರು. ಆದರೆ ಕೊಡೆ ಸಹಿತವಾಗೇ ಸಮಾರೋಪ ಸಮಾರಂಭಕ್ಕೆ ಆಗಮಿಸಿದ ಪುಟಿನ್ ಕೊಡೆಯಡಿಯಲ್ಲಿ ಬೆಚ್ಚಗೆ ನಿಂತುಬಿಡಬೇಕೆ?!

ಪುಟಿನ್ ಹೀಗೆ ಕಾಣಿಸಿದ್ದೇ ತಡ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್ ನಲ್ಲಿ ನೆಟ್ಟಿಗರು ಪುಟಿನ್ ಅವರ ತೋರಿಕೆಯನ್ನು ತಮಾಷೆ ಮಾಡಿದ್ದಾರೆ. ಛತ್ರಿಯಡಿಯಲ್ಲಿ ಬೆಚ್ಚಗಿದ್ದ ಪುಟಿನ್ ಈಗ ಟ್ರೋಲ್ ಮಳೆಯಲ್ಲಿ ತೋಯುವಂತಾಗಿದೆ. ಕೆಳಗೊಂದಿಷ್ಟು ಗಮ್ಮತ್ತಿನ ಟ್ವೀಟ್ ಗಳಿವೆ ನೋಡಿಕೊಂಡು ಬನ್ನಿ..

ಎಲ್ಲರೂ ನೆನೆಯುತ್ತಿದ್ದರೆ ಪುಟಿನ್ ಒಬ್ಬರು ಬೆಚ್ಚಗಿದ್ದರು.

ಚಿತ್ರಕಾರ ರೇಖೆಯ ಮೂಲಕ ತಮಾಷೆ.

ಪುಟಿನ್ ಅಂದರೆ ಪುಟಿನೇ ಅಲ್ಲವೆ?

ಪ್ರೈಸು ನೋಡಬೇಕಾದವರು ಕೊಡೆ ನೋಡಬೇಕಾಯಿತಲ್ಲ ಅಂತ ಅಭಿಮಾನಿಯೊಬ್ಬರು ಗುನುಗಿಕೊಂಡರು.

Story first published: Monday, July 16, 2018, 16:25 [IST]
Other articles published on Jul 16, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X