ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಮಿಸ್ ಮಾಡಬಾರದ ಬ್ರೆಜಿಲ್ vs ಬೆಲ್ಜಿಯಂ ಆಕರ್ಷಣೀಯ ಆಟವಿದು!

By ಮೈಖೇಲ್ ಟೀಮ್
World Cup 2018: Brazil vs. Belgium preview, players to watch

ಮಾಸ್ಕೋ, ಜು. 5: ಈ ಬಾರಿಯ ಫಿಫಾ ವರ್ಲ್ಡ್ ಕಪ್ ನ ರೋಚಕ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಶುಕ್ರವಾರ (ಜುಲೈ 6) ದಂದು ದಿಗ್ಗಜ ತಂಡಗಳಾದ ಬ್ರೆಜಿಲ್ ಹಾಗೂ ಬೆಲ್ಜಿಯಂ ಸೆಮಿಫೈನಲ್ ತಲುಪಲು ಸೆಣಸಾಡಲಿವೆ. ಒಂದು ರೀತಿಯ ಫೈನಲ್ ಪಂದ್ಯದಷ್ಟೇ ಪ್ರತಿಷ್ಠಿತ ಮ್ಯಾಚ್ ಇದಾಗಿದ್ದು, ಫುಟ್ಬಾಲ್ ಪ್ರೇಮಿಗಳು ಕದನ ಕುತೂಹಲದಿಂದ ಕಾಯುತ್ತಿದ್ದಾರೆ.

ಎರಡೂ ತಂಡಗಳಲ್ಲಿ ಅತ್ಯಂತ ನುರಿತ ಹಾಗೂ ಅನುಭವಿಕ ಆಟಗಾರರಿದ್ದು, ತಂತ್ರಗಾರಿಕೆಯಲ್ಲಿ ಪಳಗಿದ ಕೋಚ್ ಗಳಿಂದ ತರಬೇತಿ ಪಡೆದು ಮೈದಾನಕ್ಕೆ ಧುಮುಕಲು ಸಿದ್ಧರಾಗಿದ್ದಾರೆ. ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರಬಲ್ಲ ಎರಡೂ ತಂಡಗಳಲ್ಲಿನ ಪ್ರಮುಖ ಆಟಗಾರರ ಬಗ್ಗೆ ಮೈ ಖೇಲ್ ಸಿದ್ಧಪಡಿಸಿದ ರೋಚಕ ವರದಿ ಇಲ್ಲಿದೆ..

ಬ್ರೆಜಿಲ್ ತಂಡದ ಅಂಕಿ ಅಂಶಗಳು
ಗೋಲು : 7
ಶಾಟ್‌ಗಳು-ಗುರಿಯತ್ತ : 31
ಒಟ್ಟು ಶಾಟ್‌ಗಳು : 77
ಪೊಸೆಶನ್ : ಶೇ. 55.67
ಪಾಸ್ ಗಳು : 2267
ಪಾಸಿಂಗ್ ಅಕ್ಯುರಸಿ : ಶೇ. 87.72

1. ನೇಮಾರ್ (ಬ್ರೆಜಿಲ್)

1. ನೇಮಾರ್ (ಬ್ರೆಜಿಲ್)

ಈ ವಿಶ್ವಕಪ್ ಅವಧಿಯಲ್ಲಿ ನೇಮಾರ್ ಅತ್ಯಂತ ಪ್ರಮುಖ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ. ತಾನೊಬ್ಬ ಸ್ಟಾರ್ ಪ್ಲೇಯರ್ ಎಂಬ ಯಾವುದೇ ಅಹಮಿಕೆ ಇಲ್ಲದೆ ಮೆಕ್ಸಿಕೊ ವಿರುದ್ಧದ ಪಂದ್ಯದಲ್ಲಿ ಹನ್ನೊಂದು ಆಟಗಾರರಲ್ಲಿ ತಾವೂ ಒಬ್ಬರಾಗಿ ಆಡಿದ್ದು ವಿಶೇಷವಾಗಿದೆ. ಯಾವುದೇ ಅಳುಕಿಲ್ಲದೆ ಹೊರಗೆ ಸಹ ನೇಮಾರ್ ಉಳಿದಿದ್ದರು. ತನಗಿರುವ ಅಗಾಧ ಸಾಮರ್ಥ್ಯದ ಬಗ್ಗೆ ಮೈದಾನದಲ್ಲಿ ತೋರಿಕೆ ಮಾಡುವುದು, ಅಸಭ್ಯವಾಗಿ ವರ್ತಿಸುವುದು ಯಾವುದನ್ನೂ ಅವರು ಮಾಡಿಲ್ಲ. ಮೆಕ್ಸಿಕೊಗಿಂತ ಹೆಚ್ಚು ಅನುಭವ ಹಾಗೂ ಸಾಮರ್ಥ್ಯ ಹೊಂದಿರುವ ಬೆಲ್ಜಿಯಂ ವಿರುದ್ಧ ತನ್ನ ಬ್ರೆಜಿಲ್ ತಂಡವನ್ನು ಹೇಗೆ ಮುನ್ನಡೆಸುತ್ತಾರೆ ಎಂಬುದು ಕುತೂಹಲಕರವಾಗಿದೆ.

2. ಫಿಲಿಪ್ಪೆ ಕುಟಿನೊ (ಬ್ರೆಜಿಲ್)

2. ಫಿಲಿಪ್ಪೆ ಕುಟಿನೊ (ಬ್ರೆಜಿಲ್)

ಬ್ರೆಜಿಲ್ ಪರವಾಗಿ ಈ ವಿಶ್ವಕಪ್‌ನಲ್ಲಿ ಅತ್ಯಂತ ಆಕ್ರಮಣಕಾರಿಯಾಗಿ ಮಿಡ್‌ಫೀಲ್ಡ್‌ನಲ್ಲಿ ಆಟವಾಡಿದ ಫಿಲಿಪ್ಪೆ ಕುಟಿನೊ ಕರಾರುವಾಕ್ ಆಟಕ್ಕೆ ಹೆಸರಾಗಿದ್ದಾರೆ. ಗೋಲ್ ಗಳಿಸುವ ಬಗ್ಗೆ ಎದುರಾಳಿಗಳಲ್ಲಿ ಆತಂಕ ಹುಟ್ಟಿಸುವ ಇವರು, ಕೆಲ ಬಾರಿ ಇಡೀ ತಂಡವನ್ನು ಗೋಲ್ ಮುಂದೆ ತಂದು ಆಕ್ರಮಣಕ್ಕಿಳಿಯುತ್ತಾರೆ. ಸದ್ಯ ಬೆಲ್ಜಿಯಂನ ಪರ್ಫೆಕ್ಟ್ ಫಾರ್ಮ್ ನೋಡಿದರೆ ಕುಟಿನೊ ತಮ್ಮೆಲ್ಲ ಅನುಭವ ಬಳಸಿ ಆಟವಾಡಬೇಕಿದೆ.

3. ವಿಲಿಯನ್ (ಬ್ರೆಜಿಲ್)

3. ವಿಲಿಯನ್ (ಬ್ರೆಜಿಲ್)

ಚೆಲ್ಸಿಯಾ ಪರವಾಗಿ ಆಡುತ್ತಿದ್ದ ಮಿಡ್‌ಫೀಲ್ಡರ್ ವಿಲಿಯನ್, ಬ್ರೆಜಿಲ್ ತಂಡಕ್ಕೆ ತಮ್ಮ ಕಾಣಿಕೆ ನೀಡುತ್ತಲೇ ಇದ್ದಾರೆ. ತಮ್ಮ ಚುರುಕು ಆಟದಿಂದ ಎದುರಾಳಿ ತಂಡದ ರಕ್ಷಣಾ ಕೋಟೆಯನ್ನು ಭೇದಿಸಿ ಮುನ್ನುಗ್ಗುವ ತಾಕತ್ತು ಇವರಲ್ಲಿದೆ. ಜುಲೈ 3 ರಂದು ಮೆಕ್ಸಿಕೊ ವಿರುದ್ಧದ ಪಂದ್ಯದಲ್ಲಿ ತಮ್ಮ ಈ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನೇಮಾರ್ ಅವರಿಂದ ಹಿಂದುಗಡೆಯಿಂದ ಬಾಲ್ ಪಡೆದ ಅವರು, ಬಾಲ್ ಅನ್ನು ತಿರುಗಿಸಿ ನೇಮಾರ್‌ಗೆ ನೀಡಿ ಮೆಕ್ಸಿಕೊ ಗೋಲ್ ಬಾಕ್ಸ್‌ನೊಳಗೆ ಬೀಳುವಂತೆ ಮಾಡಿದ್ದರು. ಈಗ ಬೆಲ್ಜಿಯಂನ ಅಗಾಧ ಶಕ್ತಿಯ ಮುಂದೆ ವಿಲಿಯನ್ ತಮ್ಮ ಚುರುಕು ಹಾಗೂ ತಂತ್ರಗಾರಿಕೆಯ ಆಟ ಪ್ರದರ್ಶಿಸಿ ಬ್ರೆಜಿಲ್‌ಗೆ ಗೆಲುವು ತಂದುಕೊಡಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

1. ರೋಮೆಲು ಲುಕಾಕು (ಬೆಲ್ಜಿಯಂ)

1. ರೋಮೆಲು ಲುಕಾಕು (ಬೆಲ್ಜಿಯಂ)

ಫಾರ್ವರ್ಡ್ ನಲ್ಲಿ ಆಟವಾಡುವ ಲುಕಾಕು ಪ್ರಸಕ್ತ ವಿಶ್ವಕಪ್ ನಲ್ಲಿ ನಾಲ್ಕು ಗೋಲ್ ಗಳಿಸಿದ್ದಾರೆ. ಶಕ್ತಿಯೇ ಮೈದಳೆದಂತೆ ಆಟವಾಡುವ ಇವರ ವೇಗದ ಗತಿ ನಿಬ್ಬೆರಗಾಗಿಸುವಂಥದ್ದು. ಜೊತೆಗೆ ಇವರು ಜಾಣತನದ ಆಟಕ್ಕೂ ಹೆಸರಾಗಿದ್ದಾರೆ. ಬಾಲ್ ಅನ್ನು ಒಂಚೂರು ಮುಟ್ಟದೆಯೇ ಬೆಲ್ಜಿಯಂನ ಮೂರನೇ ಗೋಲ್ ಸಂಪಾದಿಸಿದ ಇವರ ಆಟಕ್ಕೆ ಇವರೇ ಸಾಟಿ. ಹೀಗಾಗಿಯೇ ಅವರನ್ನು ಜೀನಿಯಸ್ ಎನ್ನಲಾಗುತ್ತದೆ. ಜಪಾನ್ ತಂಡದ ಡಿಫೆಂಡರ್ ಆಟಗಾರನೊಬ್ಬರನ್ನು ಮಧ್ಯಕ್ಕೆ ಎಳೆದ ಅವರು ಅಲ್ಲಿ ಸಿಕ್ಕ ಅವಕಾಶದಲ್ಲಿಥಾಮಸ್ ಮುನಿಯೆರ ಅವರಿಗೆ ಬಾಲ್ ತಲುಪಿಸಿ, ಅಲ್ಲಿಂದ ಮುಂದಕ್ಕೆ ನೇಸರ್ ಚಾಡ್ಲಿ ಅವರು ಗೆಲುವಿನ ಗೋಲು ಗಳಿಸುವಂತೆ ಮಾಡಿದ್ದು ಅದ್ಭುತವಾಗಿತ್ತು. ಲುಕಾಕು ಗೋಲು ಗಳಿಸದಿದ್ದರೂ ಯಾವಾಗಲೂ ಎದುರಾಳಿ ತಂಡಕ್ಕೆ ಆತಂಕ ಮಾತ್ರ ಉಂಟು ಮಾಡುತ್ತಾರೆ.

2. ಎಡೆನ್ ಹಜಾರ್ಡ್ (ಬೆಲ್ಜಿಯಂ)

2. ಎಡೆನ್ ಹಜಾರ್ಡ್ (ಬೆಲ್ಜಿಯಂ)

ಕ್ಲಬ್ ಮಟ್ಟದಲ್ಲಿ ಉತ್ತಮ ಆಟವಾಡಿ ಎಡೆನ್ ಹಜಾರ್ಡ್ ಮಿಂಚಿದ್ದರು. ಆದರೆ ಈಗ ಅದೇ ಫಾರ್ಮ ಕಂಡುಕೊಳ್ಳಲು ವಿಫಲರಾದಂತೆ ಕಾಣುತ್ತಿದೆ. ಆದರೆ ಈಗ ಮರಳಿ ಫಾರ್ಮಗೆ ಬಂದು ತಮ್ಮ ಸಾಮರ್ಥ್ಯ ಒರೆಗೆ ಹಚ್ಚಲು ಉತ್ತಮ ಅವಕಾಶ ಅವರಿಗೆ ದೊರಕಿದೆ. ಲುಕಾಕು ಹಾಗೂ ಡ್ರೀಸ್ ಮರ್ಟೆನ್ಸ್ ಅವರ ಮಟ್ಟದ ಉತ್ತಮ ಆಟವಾಡುವ ಹಜಾರ್ಡ್ ಈ ಬಾರಿಯ ರಶಿಯಾ ವಿಶ್ವಕಪ್‌ನಲ್ಲಿ ಗಮನ ಸೆಳೆದ ಆಟಗಾರರಾಗಿದ್ದು, ತಮ್ಮ ತಂತ್ರ ಹಾಗೂ ಸಾಮರ್ಥ್ಯಗಳ ಮೂಲಕ ಬ್ರೆಜಿಲ್ ವಿರುದ್ಧ ಯಾವ ರೀತಿ ಚಮತ್ಕಾರ ನೀಡಲಿದ್ದಾರೆ ಎಂಬುದನ್ನು ನೋಡಬೇಕಿದೆ.

3. ಜಾನ್ ವೆರ್ಟೊಂಗೆನ್ (ಬೆಲ್ಜಿಯಂ)

3. ಜಾನ್ ವೆರ್ಟೊಂಗೆನ್ (ಬೆಲ್ಜಿಯಂ)

ಆರಡಿ ಎರಡಿಂಚು ಎತ್ತರದ ಅಜಾನುಬಾಹು ವ್ಯಕ್ತಿ ವೆರ್ಟೊಂಗೆನ್ ಬೆಲ್ಜಿಯಂ ತಂಡದ ನಂಬಿಕಸ್ಥ ಡಿಫೆಂಡರ್ ಆಗಿದ್ದಾರೆ. ಸಹಜವಾಗಿ ಯುರೋಪಿಯನ್ ಆಟಗಾರರಲ್ಲಿ ಕಂಡು ಬರುವ ಬಂಡೆಗಲ್ಲಿನಂಥ ಶಕ್ತಿಯನ್ನು ಇವರು ಹೊಂದಿದ್ದಾರೆ. ತಮ್ಮ ಎತ್ತರದ ಲಾಭ ಪಡೆದು ಎದುರಾಳಿಗಳ ಕಡೆಯಿಂದ ಬಾಲ್ ಕಸಿಯುವ ಚಾಣಾಕ್ಷತನ ಇವರ ಪ್ಲಸ್ ಪಾಯಿಂಟ್ ಆಗಿದೆ. ಬ್ರೆಜಿಲ್ ವಿರುದ್ಧದ ಪಂದ್ಯದಲ್ಲಿ ಇವರ ಆಟವನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಬೆಲ್ಜಿಯಂ ತಂಡದ ಅಂಕಿ ಅಂಶಗಳು

ಗೋಲು : 12
ಶಾಟ್‌ಗಳು-ಗುರಿಯತ್ತ : 30
ಒಟ್ಟು ಶಾಟ್‌ಗಳು : 76
ಪೊಸೆಶನ್ : ಶೇ. 55.6
ಪಾಸ್ ಗಳು : 2155
ಪಾಸಿಂಗ್ ಅಕ್ಯುರಸಿ : ಶೇ. 85.89
ಬಿಟ್ಟುಕೊಟ್ಟ ಗೋಲು: 4

ಎರಡೂ ತಂಡಗಳ ನೇರಾನೇರ ಹಣಾಹಣಿ
ಬ್ರೆಜಿಲ್ 3 - ಬೆಲ್ಜಿಯಂ 1

Story first published: Thursday, July 5, 2018, 17:13 [IST]
Other articles published on Jul 5, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X