ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೀಫಾ ವಿಶ್ವಕಪ್: ಸ್ವೀಡನ್ ಸೋಲಿಸಿದ ಇಂಗ್ಲೆಂಡ್ ಸೆಮಿಫೈನಲ್ ಗೆ

World Cup 2018: England beat Sweden 2-0

ಮಾಸ್ಕೋ, ಜು. 7: ರಷ್ಯಾದ ಸಮರಾ ಅರೆನಾದಲ್ಲಿ ನಡೆದ ಫೀಫಾ ವಿಶ್ವಕಪ್ ಕ್ವಾರ್ಟರ್ ಫೈನಲ್ ಸೆಣಸಾಟದಲ್ಲಿ ಇಂಗ್ಲೆಂಡ್ ತಂಡ ಸ್ವೀಡನ್ ತಂಡವನ್ನು 2-0 ಅಂತರದಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದೆ. ಪಂದ್ಯದ ಪ್ರಥಮಾರ್ಧದಲ್ಲಿ ಮತ್ತು ದ್ವಿತೀಯಾರ್ಧದಲ್ಲಿ ಬಾರಿಸಿದ ಗೋಲ್ ಇಂಗ್ಲೆಂಡ್ ತಂಡದ ಗೆಲುವಿಗೆ ಕಾರಣವಾಯಿತು.

ಪಂದ್ಯದ ಸ್ಕೋರ್ ಕಾರ್ಡ್

ಹ್ಯಾರಿ ಮೇಗುರ್ ಅವರು 30ನೇ ನಿಮಿಷಲದಲ್ಲಿ ಇಂಗ್ಲೆಂಡ್ ಪರ ಮೊದಲ ಗೋಲ್ ಬಾರಿಸಿದರು. ಅನಂತರ 58ನೇ ನಿಮಿಷದಲ್ಲಿ ಡೇಲ್ ಅಲ್ಲಿ ಅವರು ಸಿಡಿಸಿದ ಎರಡನೇ ಗೋಲ್ ಇಂಗ್ಲೆಂಡ್ ಗೆಲುವನ್ನು ಬರೆಯಿತು. 47ನೇ ನಿಮಿಷದಲ್ಲಿ ಸ್ವೀಡನ್ ನ ಮರ್ಕ್ಯೂಸ್ ಬರ್ಗ್ ಅವರು ಗೋಲ್ ಸಿಡಿಸುವ ಪ್ರಯತ್ನ ಮಾಡಿದ್ದರಾದರೂ ಅದನ್ನು ಇಂಗ್ಲೆಂಡ್ ನ ಜೋರ್ಡನ್ ಅವರು ತಪ್ಪಿಸಿದರು.

ಪಂದ್ಯದ ಪ್ರಥಮಾರ್ಧದಲ್ಲಿ 1, ದ್ವಿತೀಯಾರ್ಧದಲ್ಲಿ 5 ಹೆಚ್ಚುವರಿ ನಿಮಿಷಗಳನ್ನು ಸೇರಿಸಲಾಯಿತಾದರೂ ಸ್ವೀಡನ್ ಗೋಲ್ ದಾಖಲಿಸುವಲ್ಲಿ ವಿಫಲವಾಯಿತು. ಈ ಸೋಲಿನೊಂದಿಗೆ ಸ್ವೀಡನ್ ನ ಈ ಬಾರಿಯ ಫೀಫಾ ವಿಶ್ವಕಪ್ ಕನಸು ಭಗ್ನಗೊಂಡಂತಾಗಿದೆ.

ಪಂದ್ಯದ ವೇಳೆ ಇಂಗ್ಲೆಂಡ್ ನ ಹ್ಯಾರಿ ಮೇಗುರ್, ಸ್ವೀಡನ್ ನ ಜಾನ್ ಗುಡೆಟ್ಟಿ, ಸೆಬಾಸ್ಟಿಯನ್ ಲಾರ್ಸನ್ ವಿರುದ್ಧ ಯೆಲ್ಲೋ ಕಾರ್ಡ್ ಪ್ರದರ್ಶಿಸಲ್ಪಟ್ಟಿತು. ಇಂಗ್ಲೆಂಡ್ ಮೂರುಬಾರಿ, ಸ್ವೀಡನ್ ಮೂರುಬಾರಿ ಗಾಯಾಳು ಆಟಗಾರರನ್ನು ಬದಲಿಸಿಕೊಂಡಿತು.

Story first published: Saturday, July 7, 2018, 21:40 [IST]
Other articles published on Jul 7, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X