ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಹಾಕಿ ವಿಶ್ವಕಪ್‌ಗೆ ರೆಹಮಾನ್ ಸಂಗೀತದ ಮೆರುಗು, ಗುಲ್ಜಾರ್‌ ಸಾಹಿತ್ಯ

AR Rahman creating theme song for Hockey world cup

ನವದೆಹಲಿ, ಸೆಪ್ಟೆಂಬರ್ 22: ಪುರುಷರ ಹಾಕಿ ವಿಶ್ವಕಪ್‌ನ ಆತಿಥ್ಯವನ್ನು ಈ ಬಾರಿ ಭಾರತ ವಹಿಸಿದ್ದು ವಿಶ್ವಕಪ್‌ನ ಧ್ಯೇಯ ಗೀತೆ (ಥೀಮ್‌ ಸಾಂಗ್‌) ಅನ್ನು ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಮಾಡಿಕೊಡಲಿದ್ದಾರೆ.

ರೆಹಮಾನ್ ನಿರ್ದೇಶನದ ಹಾಡಿಗೆ, 'ಜೈ ಹಿಂದ್, ಜೈ ಇಂಡಿಯಾ..' ಎಂದು ಗುಲ್ಜಾರ್ ಅವರು ಸಾಹಿತ್ಯ ಬರೆದಿದ್ದಾರೆ. 14ನೇ ಪುರುಷರ ಹಾಕಿ ವಶ್ವಕಪ್‌ ಒಡಿಸ್ಸಾದ ಕಲಿಂಗಾ ಹಾಕಿ ಸ್ಟೇಡಿಯಂನಲ್ಲಿ ಉದ್ಘಾಟನೆ ಆಗಲಿದೆ.

ಹಾಕಿಯು ಭಾರತದ ಸ್ವಂತ ಕ್ರೀಡೆ, ಅದೂ ಈ ಬಾರಿ ವಿಶ್ವದ ದೊಡ್ಡ ಹಾಕಿ ಹಬ್ಬ ಭಾರತದಲ್ಲಿ ನಡೆಯುತ್ತಿರುವುದು ನಮಗೆ ಹೆಮ್ಮೆ, ಎಂದು ಎ.ಆರ್.ರೆಹಮಾನ್ ಅವರು ವಿಶ್ವಕಪ್‌ಗೆ ಧ್ಯೇಯ ಗೀತೆ ನಿರ್ದೇಶಿಸಲು ಸಿಕ್ಕ ಅವಕಾಶದ ಬಗ್ಗೆ ಸಂತೋಶ ವ್ಯಕ್ತಪಡಿಸಿ ಹೇಳಿದ್ದಾರೆ.

AR Rahman creating theme song for Hockey world cup

ಈ ಹಿಂದೆಯೂ ಎ.ಆರ್.ರೆಹಮಾನ್ ಹಲವು ಪ್ರಮುಖ ಕ್ರೀಡಾಟೂಕ ಹಾಗೂ ಪ್ರಮುಖ ಕಾರ್ಯಕ್ರಮಗಳಿಗೆ ಧ್ಯೇಯ ಗೀತೆ ಮಾಡಿಕೊಟ್ಟಿದ್ದಾರೆ. ಭಾರತವು 50ನೇ ವರ್ಷದ ಸ್ವಾತಂತ್ರೋತ್ಸವ ಆಚರಣೆ ಸಂದರ್ಭ ರೆಹಮಾನ್ ಮಾಡಿದ್ದ ವಂದೇ ಮಾತರಂ ಹಾಡೂ ಇಂದಿಗೂ ಫೇಮಸ್‌.

ಸುಮಧುರ ಪದಗಳ ವಾರಸುದಾರ ಎಂದು ಕರೆಸಿಕೊಳ್ಳುವ ಗುಲ್ಜಾರ್ ಅಥವಾ ಗುಲ್ಜಾರ್ ಸಾಬ್ ಅವರ ಸಾಹಿತ್ಯ ವಿಶ್ವಕಪ್‌ ಧ್ಯೇಯ ಗೀತೆಗೆ ಹೊಸ ಹೊಳಪು ನೀಡಲಿದೆ. ಹಾಡಿನ ವಿಡಿಯೋ ಶೂಟಿಂಗ್‌ನ ಜವಾಬ್ದಾರಿಯನ್ನೂ ರೆಹಮಾಣ್ ಅವರೇ ವಹಿಸಿಕೊಂಡಿದ್ದಾರೆ. ಅದರ ನಿರ್ದೇಶನದ ಜವಾಬ್ದಾರಿ ರೆಹಮಾನ್‌ ಅವರದ್ದೇ.

ಭಾರತದ ಸಂಸ್ಕೃತಿಯ ಜೊತೆಗೆ ಹಾಕಿ ಬೆರೆತುಕೊಂಡಿರುವ ರೀತಿ, ಜೊತೆಗೆ ಸೋಲಿರಲಿ, ಗೆಲುವಿರಲಿ ಕ್ರೀಡಾ ಸ್ಪೂರ್ಥಿ ಮೆರೆಯುವುದರ ಬಗ್ಗೆ, ಕ್ರೀಡೆಗಳು ಭಿನ್ನ ಸಂಸ್ಕೃತಿಯ ಜನರನ್ನು, ಭಿನ್ನ ದೇಶಗಳ ಜನರನ್ನು ಹತ್ತಿರ ಸೆಳೆಯುವ ಬಗ್ಗೆ ವಿಶ್ವಕಪ್‌ನ ಧ್ಯೇಯ ಗೀತೆ ಇರಲಿದೆ.

Story first published: Tuesday, October 30, 2018, 14:49 [IST]
Other articles published on Oct 30, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X