ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಜಂಟಿಯಾಗಿ 3ನೇ 'ಏಷ್ಯನ್ ಚಾಂಪಿಯನ್ಸ್ ಟ್ರೋಫಿ'ಗೆ ಮುತ್ತಿಕ್ಕಿದ ಭಾರತ-ಪಾಕ್

Asian Champions Trophy Final: India-Pakistan win the title

ಮಸ್ಕತ್, ಅಕ್ಟೋಬರ್ 29: ಓಮನ್ ನ ಮಸ್ಕತ್ ನಲ್ಲಿರುವ ಸುಲ್ತಾನ್ ಕ್ವಾಬೂಸ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಸೋಮವಾರ (ಅಕ್ಟೋಬರ್ 29) ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪುರುಷರ ಹಾಕಿ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ಜಂಟಿಯಾಗಿ ಪ್ರಶಸ್ತಿಗೆ ಮುತ್ತಿಕ್ಕಿದವು. ಮಳೆಯಿದ್ದಿದ್ದರಿಂದ ಫೈನಲ್ ಪಂದ್ಯ ನಡೆಯಲಿಲ್ಲ. ಅಂತಿಮವಾಗಿ ಎರಡೂ ತಂಡಗಳನ್ನು ಜಯಶಾಲಿಗಳೆಂದು ಘೋಷಿಸಲಾಯಿತು.

ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಜಪಾನ್ ಸೋಲಿಸಿದ ಭಾರತ ಫೈನಲ್ ಪ್ರವೇಶಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಜಪಾನ್ ಸೋಲಿಸಿದ ಭಾರತ ಫೈನಲ್ ಪ್ರವೇಶ

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳೇ ಹೆಚ್ಚು ಬಾರಿ ಪ್ರಶಸ್ತಿ ಜಯಿಸಿದ ಹಿರಿಮೆ ಗಳಿಸಿವೆ. ಎರಡೂ ತಂಡಗಳು ತಲಾ ಎರಡೆರಡುಸಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದವು. ಹೀಗಾಗಿ 2018ರ ಫೈನಲ್ ಪಂದ್ಯ ತೀವ್ರ ಕುತೂಹಲವನ್ನು ಮೂಡಿಸಿತ್ತು. ಆದರೆ ಭಾನುವಾರ (ಅಕ್ಟೋಬರ್ 28) 10.40pmಗೆ ನಡೆಯಬೇಕಿದ್ದ ಪಂದ್ಯ ಮಳೆಯ ಕಾರಣ ನಡೆಯಲಿಲ್ಲ.

ಶನಿವಾರ (ಅಕ್ಟೋಬರ್ 27) ನಡೆದಿದ್ದ ಸೆಮಿಫೈನಲ್ ನಲ್ಲಿ ಭಾರತದ ಪುರುಷರು ಜಪಾನ್ ತಂಡವನ್ನು 3-2 ಅಂತರದಿಂದ ಸೋಲಿಸಿ ಫೈನಲ್ ಗೆ ಪ್ರವೇಶ ಗಿಟ್ಟಿಸಿಕೊಂಡಿದ್ದರು. ಇನ್ನೊಂದು ಪಂದ್ಯದಲ್ಲಿ ಪಾಕಿಸ್ತಾನ ತಂಡ ಮಲೇಷ್ಯಾವನ್ನು ಶೂಟೌಟ್ ನಲ್ಲಿ 3-1 ಅಂತರದಿಂದ ಹಿಮ್ಮೆಟ್ಟಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿತ್ತು. ಮಲೇಷ್ಯಾ-ಪಾಕಿಸ್ತಾನ ಕಾಳಗ 4-4ರಿಂದ ಕೊನೆಗೊಂಡಿದ್ದರಿಂದ ಶೂಟೌಟ್ ಗೆ ಅವಕಾಶ ನೀಡಲಾಗಿತ್ತು.

ಏಷ್ಯಾದಲ್ಲಿ ತ್ವರಿತಗತಿಯಲ್ಲಿ 6 ಸಾವಿರ ರನ್, ಸಚಿನ್ ದಾಖಲೆ ಮುರಿದ ಕೊಹ್ಲಿಏಷ್ಯಾದಲ್ಲಿ ತ್ವರಿತಗತಿಯಲ್ಲಿ 6 ಸಾವಿರ ರನ್, ಸಚಿನ್ ದಾಖಲೆ ಮುರಿದ ಕೊಹ್ಲಿ

ಈ ಆವೃತ್ತಿಯಲ್ಲಿ ಭಾರತ ತಂಡ ಸೋತಿದ್ದೇ ಇಲ್ಲ. ಮೊದಲ ಪಂದ್ಯದಲ್ಲಿ ಆತಿಥೇಯ ಓಮನ್ ವಿರುದ್ಧ 11-0, ಪಾಕಿಸ್ತಾನ ಎದುರು 3-1, ಜಪಾನ್ ತಂಡವನ್ನು 9-0, ಮಲೇಷ್ಯಾ ವಿರುದ್ಧ 0-0ಯಿಂದ ಪಂದ್ಯ ಡ್ರಾ ಮಾಡಿಕೊಂಡಿದ್ದ ಭಾರತ ಸೆಮಿಫೈನಲ್ ನಲ್ಲಿ ಜಪಾನ್ ಗೆ ಮತ್ತೆ ಮಣ್ಣು ಮುಕ್ಕಿಸಿತ್ತು.

ಭಾನುವಾರ (ಅಕ್ಟೋಬರ್ 28) ತೃತೀಯ ಸ್ಥಾನಕ್ಕಾಗಿ ನಡೆದ ಮೊದಲ ಪಂದ್ಯದಲ್ಲಿ ಮಲೇಷ್ಯಾ ತಂಡ ಜಪಾನನ್ನು ಶೂಟೌಟ್ ನಲ್ಲಿ 3-2ರಿಂದ ಸೋಲಿಸಿತ್ತು. ಆದರೆ ಪ್ರಶಸ್ತಿ ಸುತ್ತಿನ ಪಂದ್ಯ ನಡೆಯಲು ಮಳೆ ಅವಕಾಶವನ್ನೇ ಮಾಡಿಕೊಡಲಿಲ್ಲ. ಭಾರತ ಈ ಟೂರ್ನಿಯಲ್ಲಿ ಸೋಲಿಲ್ಲದ ಸರದಾರನಾಗಿ ಉಳಿದುಕೊಂಡಿತು.

Story first published: Tuesday, October 30, 2018, 13:40 [IST]
Other articles published on Oct 30, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X