ಮಸ್ಕಟ್, ಅಕ್ಟೋಬರ್ 21: 4ನೇ ಆವೃತ್ತಿಯ ಏಷ್ಯನ್ ಚಾಂಪಿಯನ್ಸ್ ಟ್ರೋಫಿ (ಎಸಿಟಿ) ಹಾಕಿ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಭಾರತ ತಂಡವು ಶನಿವಾರದಂದು ನಡೆದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸುಲಭವಾಗಿ ಸೋಲಿಸಿದೆ.
ಪಾಕಿಸ್ತಾನವನ್ನು 1-3 ಅಂತರದಲ್ಲಿ ಸೋಲಿಸಿದ ಭಾರತವು ಟೂರ್ನಮೆಂಟ್ ನಲ್ಲಿ ಸತತ 2ನೇ ಜಯ ದಾಖಲಿಸಿದೆ. ಗುರುವಾರದಂದು ನಡೆದ ಮೊದಲ ಪಂದ್ಯದಲ್ಲಿ ಆತಿಥೇಯ ಒಮೆನ್ ವಿರುದ್ಧ ಭಾರತವು 11-0 ಗೋಲುಗಳಿಂದ ಜಯ ದಾಖಲಿಸಿತ್ತು.
ಮುನ್ನಡೆ ಪಡೆದಿದ್ದ ಪಾಕಿಸ್ತಾನ: ಪಂದ್ಯ ಆರಂಭಗೊಂಡ ಮೊದಲ ನಿಮಿಷದಲ್ಲೇ ಪಾಕಿಸ್ತಾನದ ಇರ್ಫಾನ್ ಜೂನಿಯರ್ ಮೊಹಮದ್ ಗೋಲು ದಾಖಲಿಸಿದರು. ಎರಡನೇ ಕ್ವಾರ್ಟರ್ನಲ್ಲಿ ನಾಯಕ ಮನ್ಪ್ರೀತ್ ಸಿಂಗ್ (24ನೇ ನಿಮಿಷ) ಫೀಲ್ಡ್ ಗೋಲಿನ ಮೂಲಕ 1-1ರ ಸಮಬಲ ಸಾಧಿಸಿದರು.
FT| A commendable effort by the Indian Men's Hockey Team saw them beat arch-rivals Pakistan by a goal margin of 3-1, in spite of trailing in the first quarter in this blockbuster clash of the Hero Asian Champions Trophy 2018 on 20th October.#IndiaKaGame #HeroACT2018 #INDvPAK pic.twitter.com/g7sq5mGmVX
— Hockey India (@TheHockeyIndia) October 20, 2018
3ನೇ ಕ್ವಾರ್ಟರ್ನ ಆರಂಭದಲ್ಲೇ ಯುವ ಆಟಗಾರ ಮಂದೀಪ್ ಸಿಂಗ್ (31ನೇ ನಿಮಿಷ) ಮತ್ತೊಂದು ಗೋಲು ಗಳಿಸಿ ಭಾರತಕ್ಕೆ 2-1ರಿಂದ ಮುನ್ನಡೆ ತಂದುಕೊಟ್ಟರೆ, ನಂತರ ಯುವ ಸ್ಟ್ರೈಕರ್ ದಿಲ್ಪ್ರೀತ್ ಸಿಂಗ್ (42ನೇ) ಗೋಲುಗಳಿಸಿ ಗೋಲಿನ ಅಂತರವನ್ನು 3-1ಕ್ಕೇರಿಸಿದರು.