ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಭಾರತ vs ಮಲೇಷ್ಯಾ ಕುತೂಹಲಕಾರಿ ಹಾಕಿ ಪಂದ್ಯದ ಸಮಯ, ಪ್ರಸಾರ ಮಾಹಿತಿ

Asian Champions Trophy: India vs Malaysia Preview: Where to watch

ಮಸ್ಕತ್, ಅಕ್ಟೋಬರ್ 23: ಓಮನ್ ನ ಮಸ್ಕತ್ ನಲ್ಲಿ ನಡೆಯುತ್ತಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪುರುಷರ ಹಾಕಿ ಟೂರ್ನಿಯಲ್ಲಿ ಇಂದು (ಅಕ್ಟೋಬರ್ 23) ಕುತೂಹಲಕಾರಿ ಪಂದ್ಯದಲ್ಲಿ ಬಲಿಷ್ಟ ಭಾರತ ಮತ್ತು ಮಲೇಷ್ಯಾ ತಂಡಗಳು ಮುಖಾಮುಖಿಯಾಗಿವೆ.

ಧೋನಿಗೆ 80 ವರ್ಷವಾದರೂ ನನ್ನ ತಂಡದಲ್ಲಿ ಇರುತ್ತಾರೆ: ಎಬಿಡಿಧೋನಿಗೆ 80 ವರ್ಷವಾದರೂ ನನ್ನ ತಂಡದಲ್ಲಿ ಇರುತ್ತಾರೆ: ಎಬಿಡಿ

ಟೂರ್ನಿಯಲ್ಲಿ ಈವರೆಗೆ ಆಡಿದ ಮೂರು ಪಂದ್ಯಗಳಲ್ಲಿ ಎರಡೂ ತಂಡಗಳು ಗೆದ್ದು ಅಂಕಪಟ್ಟಿಯಲ್ಲಿ ಸಮಾನ ಅಂಕ ಹಂಚಿಕೊಂಡಿವೆ. ಒಂದೂ ಸೋಲು ಕಂಡಿರದ ಎರಡೂ ತಂಡಗಳಿಗೆ ತಲಾ 9 ಅಂಕಗಳು ಲಭಿಸಿವೆ. ಗೋಲ್ ಅಂಕಗಳನ್ನು ಗಮನಿಸಿದರೆ ಭಾರತ 22 ಗೋಲ್ ಡಿಫರೆನ್ಸ್ ಅಂಕಗಳನ್ನು ಹೊಂದಿದ್ದರೆ, ಮಲೇಷ್ಯಾ 7 ಅಂಕಗಳನ್ನು ಪಡೆದಿದೆ.

ಇನ್ನೂ ಕುತೂಹಲಕಾರಿ ಅಂಶವೆಂದರೆ ಈ ಬಾರಿಯ ಏಷ್ಯನ್ ಗೇಮ್ಸ್ ನಲ್ಲಿ ಬಂಗಾರ ಗೆದ್ದಿದ್ದ ಜಪಾನ್ ವಿರುದ್ಧ ಭಾರತ ಭಾನುವಾರ (ಅಕ್ಟೋಬರ್ 21) ಭರ್ಜರಿ 9-0 ಅಂತರದಿಂದ ಗೆದ್ದಿತ್ತು. ಏಷ್ಯಾನ್ ಗೇಮ್ಸ್ ನ ಸೆಮಿಫೈನಲ್ಸ್ ನಲ್ಲಿ ಭಾರತವನ್ನು ಹೊರಗಟ್ಟಿದ್ದ ಮಲೇಷ್ಯಾ ವಿರುದ್ಧ ಇಂದು ಭಾರತ ಮುಯ್ಯಿ ತೀರಿಸಿಕೊಳ್ಳುವುದರಲ್ಲಿದೆ.

ಏಷ್ಯನ್ ಗೇಮ್ಸ್ ಹಾಕಿ ಚಾಂಪಿಯನ್ ಜಪಾನ್ ಎದುರು ಭಾರತಕ್ಕೆ ಗೆಲುವುಏಷ್ಯನ್ ಗೇಮ್ಸ್ ಹಾಕಿ ಚಾಂಪಿಯನ್ ಜಪಾನ್ ಎದುರು ಭಾರತಕ್ಕೆ ಗೆಲುವು

ಜಪಾನ್ ಸೋಲಿಸುವುದಕ್ಕೂ ಮುನ್ನ ಭಾರತದ ಹಾಕಿ ಪುರುಷರು ಆತಿಥೇಯ ಓಮನ್ ವಿರುದ್ಧ 11-0, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 3-1ರ ಗೆಲುವು ದಾಖಲಿಸಿದ್ದರು. ಮಲೇಷ್ಯಾ ವಿರುದ್ಧದ ಕುತೂಹಲಕಾರಿ ಪಂದ್ಯ ಇಂದು ರಾತ್ರಿ 10.40 pmಗೆ ಪ್ರಾರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ 2 ಅಥವಾ ಸ್ಟಾರ್ ಸ್ಪೋರ್ಟ್ಸ್ ಎಚ್‌ಡಿ2 ಚಾನೆಲ್ ಗಳು ನೇರ ಪ್ರಸಾರ ಮಾಡಲಿವೆ. ಜಾಲತಾಣಿಗರಿಗಾಗಿ ಹಾಟ್‌ಸ್ಟಾರ್ ಪಂದ್ಯವನ್ನು ನೇರಪ್ರಸಾರಗೊಳಿಸಲಿದೆ.

Story first published: Tuesday, October 23, 2018, 15:31 [IST]
Other articles published on Oct 23, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X