ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಜಪಾನ್ ಸೋಲಿಸಿದ ಭಾರತ ಫೈನಲ್ ಪ್ರವೇಶ

Asian Hockey Champions Trophy, India vs Japan-semifinal

ಮಸ್ಕತ್, ಅಕ್ಟೋಬರ್ 27: ಓಮನ್ ನ ಮಸ್ಕತ್ ನಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಸೆಮಿಫೈನಲ್ ನಲ್ಲಿ ಜಪಾನ್ ವಿರುದ್ಧ 3-2 ಅಂತರದ ಜಯ ಸಾಧಿಸುವುದರೊಂದಿಗೆ ಭಾರತ ಫೈನಲ್ ಪ್ರವೇಶಿಸಿದೆ. ಕುತೂಹಲಕಾರಿ ಈ ಪಂದ್ಯದಲ್ಲಿ ಭಾರತ ರೋಚಕ ಗೆಲುವನ್ನಾಚರಿಸಿತು. ಪ್ರಶಸ್ತಿ ಪಂದ್ಯದಲ್ಲಿ ಭಾರತದ ಪುರುಷರು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಸವಾಲು ಸ್ವೀಕರಿಸಲಿದ್ದಾರೆ.

ಚಾಂಪಿಯನ್ಸ್ ಟ್ರೋಫಿ: ಕೊರಿಯಾ ಸೋಲಿಸಿ ಅಜೇಯವಾಗಿ ಉಳಿದ ಭಾರತಚಾಂಪಿಯನ್ಸ್ ಟ್ರೋಫಿ: ಕೊರಿಯಾ ಸೋಲಿಸಿ ಅಜೇಯವಾಗಿ ಉಳಿದ ಭಾರತ

ಮಸ್ಕತ್ ನ ಸುಲ್ತಾನ್ ಕ್ವಾಬೂಸ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಶನಿವಾರ (ಅಕ್ಟೋಬರ್ 27) ನಡೆದ ಪಂದ್ಯದ ಆರಂಭದಲ್ಲೇ ಭಾರತ ಮುನ್ನಡೆ ಗಳಿಸಿತು. ಭಾರತದ ಗುರ್ಜಂತ್ ಸಿಂಗ್ ಅವರು 19ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡಕ್ಕೆ 1-0ಯ ಮುನ್ನಡೆ ಕೊಟ್ಟರು. ಅನಂತರ ಜಪಾನ್ ನ ವಾಕುರಿ ಅವರೂ 22ನೇ ನಿಮಿಷದಲ್ಲಿ ಗೋಲ್ ಬಾರಿಸಿ ಅಂಕವನ್ನು 1-1ಕ್ಕೆ ಸರಿದೂಗಿಸಿಕೊಂಡರು.

ಪ್ರಥಮಾರ್ಧದಲ್ಲಿ ಇತ್ತಂಡಗಳ ಅಂಕ 1-1 ಆಗಿದ್ದರಿಂದ ಪಂದ್ಯ ಮುಂದುವರೆದಂತೆ ಇನ್ನಷ್ಟು ರೋಚಕ ಅನ್ನಿಸಿತ್ತು. ಆದರೆ 44ನೇ ನಿಮಿಷದಲ್ಲಿ ಭಾರತ ಚಿನ್ಲೆನ್ಸನಾ ಗೋಲ್ ಸಿಡಿಸಿ ಭಾರತಕ್ಕೆ 2-1ರ ಮುನ್ನಡೆ ಕೊಟ್ಟರು. ಅಂತಿಮ ಕ್ಷಣದಲ್ಲಿ ಅಂದರೆ 55ನೇ ನಿಮಿಷದಲ್ಲಿ ಭಾರತ ಪರ ದಿಲ್ಪ್ರೀತ್ ಸಿಂಗ್ ಮತ್ತೊಂದು ಗೋಲ್ ಬಾರಿಸಿ ಮುನ್ನಡೆ 3-1ಕ್ಕೆ ಹೆಚ್ಚಿಸಿದರು. ಜಪಾನ್ ಕೂಡ 56ನೇ ನಿಮಿಷದಲ್ಲಿ ಗೋಲ್ ಬಾರಿಸಿತಾದರೂ ಗೆಲುವು ಭಾರತದ ಪರವಾಯಿತು.

ಹಾಲಿ ಚಾಂಪಿಯನ್ ಭಾರತ ಇದಕ್ಕೂ ಮುನ್ನ ಜಪಾನ್ ತಂಡವನ್ನು 9-0 ಅಂತರದಿಂದ ಸೋಲಿಸಿ ಅಂಕಪಟ್ಟಿಯಲ್ಲಿ 13 ಪಾಯಿಂಟ್ ಗಳೊಂದಿಗೆ ಅಗ್ರ ಸ್ಥಾನದಲ್ಲಿತ್ತು. ಈ ಮೊದಲು ಆಡಿದ್ದ 5 ಪಂದ್ಯಗಳಲ್ಲಿ ಭಾರತ 4 ಪಂದ್ಯಗಳನ್ನು ಗೆದ್ದು ಮಲೇಷ್ಯಾ ವಿರುದ್ಧದ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು.

ಜಕಾರ್ತಾ ಏಷ್ಯಾನ್ ಗೇಮ್ಸ್ ಪುರುಷರ ಹಾಕಿಯಲ್ಲಿ ಜಪಾನ್ ತಂಡ ಚಾಂಪಿಯನ್ ಆಗಿ ಮೂಡಿಬಂದಿತ್ತು. ಮಲೇಷ್ಯಾ ರನ್ನರ್ಸ್ ಅನ್ನಿಸಿಕೊಂಡಿದ್ದರೆ, ಭಾರತ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತ್ತು. ಹೀಗಾಗಿ ಸೆಮಿಫೈನಲ್ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿತ್ತು.

Story first published: Sunday, October 28, 2018, 0:32 [IST]
Other articles published on Oct 28, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X