ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕಾಮನ್‌ವೆಲ್ತ್ ಗೇಮ್ಸ್‌ 2022: 18 ಸದಸ್ಯರ ಭಾರತೀಯ ಪುರುಷರ ಹಾಕಿ ತಂಡ ಪ್ರಕಟ

Indias men hockey team

ಜುಲೈ 29ರಿಂದ ಆರಂಭಗೊಳ್ಳಲಿರುವ ಪ್ರತಿಷ್ಠಿತ ಕಾಮನ್‌ವೆಲ್ತ್‌ ಗೇಮ್ಸ್‌ಗಾಗಿ 18 ಸದಸ್ಯರ ಭಾರತೀಯ ಪುರುಷರ ಹಾಕಿ ತಂಡವನ್ನು ಹಾಕಿ ಇಂಡಿಯಾ ಸೋಮವಾರ ಹೆಸರಿಸಿದೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ಈ ಮೆಗಾ ಟೂರ್ನಮಂಟ್‌ಗೆ ಆತಿಥ್ಯವಹಿಸಿದ್ದು, ಇಂಗ್ಲೆಂಡ್, ಕೆನಡಾ, ವೇಲ್ಸ್ ಮತ್ತು ಘಾನಾ ಜೊತೆಗೆ ಪೂಲ್ ಬಿ ಗುಂಪಿನಲ್ಲಿರುವ ಭಾರತ ಜುಲೈ 31 ರಂದು ಘಾನಾ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.

ಕಳೆದ ವರ್ಷ ಟೋಕಿಯೊದಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಐತಿಹಾಸಿಕ ಕಂಚಿನ ಪದಕ ಗೆಲುವಿಗೆ ತಂಡವನ್ನ ಮುನ್ನಡೆಸಿದ ಮನ್‌ಪ್ರೀತ್ ಸಿಂಗ್ ಅವರು ತಂಡದ ನಾಯಕತ್ವ ವಹಿಸಲಿದ್ದಾರೆ. ಎಫ್‌ಐಎಚ್ ಹಾಕಿ ಪ್ರೊ ಲೀಗ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಡ್ರ್ಯಾಗ್‌ಫ್ಲಿಕ್ ಸ್ಪೆಷಲಿಸ್ಟ್ ಹರ್ಮನ್‌ಪ್ರೀತ್ ಸಿಂಗ್ ಅವರನ್ನು ತಂಡದ ಉಪನಾಯಕರನ್ನಾಗಿ ನೇಮಿಸಲಾಗಿದೆ.

ತಂಡಕ್ಕೆ ಮರಳಿದ್ದಾರೆ ಸ್ಟಾರ್ ಗೋಲ್ ಕೀಪರ್ ಪಿ.ಆರ್ ಶ್ರೀಜೇಶ್

ತಂಡಕ್ಕೆ ಮರಳಿದ್ದಾರೆ ಸ್ಟಾರ್ ಗೋಲ್ ಕೀಪರ್ ಪಿ.ಆರ್ ಶ್ರೀಜೇಶ್

ತಂಡದಲ್ಲಿ ಅನುಭವಿ ಗೋಲ್‌ಕೀಪರ್‌ ಪಿಆರ್‌ ಶ್ರೀಜೇಶ್‌ ಮತ್ತು ಕ್ರಿಶನ್‌ ಬಿ ಪಾಠಕ್‌ ಕಂಬ್ಯಾಕ್ ಮಾಡಿದ್ದು, ಗಾಯದ ಚೇತರಿಕೆ ಬಳಿಕ ತಂಡಕ್ಕೆ ಮರಳಿದ್ದಾರೆ. ಡಿಫೆಂಡರ್‌ಗಳಾದ ವರುಣ್ ಕುಮಾರ್, ಸುರೇಂದರ್ ಕುಮಾರ್, ಹರ್ಮನ್‌ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ಜುಗರಾಜ್ ಸಿಂಗ್ ಮತ್ತು ಜರ್ಮನ್‌ಪ್ರೀತ್ ಸಿಂಗ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಮಿಡ್‌ಫೀಲ್ಡ್‌ನಲ್ಲಿ ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಶಂಶೇರ್ ಸಿಂಗ್, ಆಕಾಶದೀಪ್ ಸಿಂಗ್ ಮತ್ತು ನೀಲಕಂಠ ಶರ್ಮಾ ಅವರ ಅನುಭವವಿದೆ. ಅನುಭವಿ ಸ್ಟ್ರೈಕರ್‌ಗಳಾದ ಮನ್‌ದೀಪ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಗುರ್ಜಂತ್ ಸಿಂಗ್ ಮತ್ತು ಅಭಿಷೇಕ್ ದಾಳಿಯನ್ನು ಮುನ್ನಡೆಸಲಿದ್ದಾರೆ.

ಮುಂಬರುವ ಟಿ20 ವಿಶ್ವಕಪ್‌ನಲ್ಲಿ ರಿಷಭ್ ಪಂತ್‌ಗೆ ಅವಕಾಶ ಸಿಗುತ್ತಾ? ರಾಹುಲ್ ದ್ರಾವಿಡ್ ಉತ್ತರ

ಕಳೆದ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ನಿರಾಸೆ ಮೂಡಿಸಿದ್ದ ಭಾರತ

ಕಳೆದ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ನಿರಾಸೆ ಮೂಡಿಸಿದ್ದ ಭಾರತ

ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತವು ನಾಲ್ಕನೇ ಸ್ಥಾನದೊಂದಿಗೆ ನಿರಾಸೆ ಅನುಭವಿಸಿತು, ಆದಾಗ್ಯೂ, ಈ ವರ್ಷ ಎಫ್‌ಐಹೆಚ್ ಪ್ರೊ ಲೀಗ್‌ನಲ್ಲಿ ಪ್ರಭಾವಶಾಲಿ ಪ್ರದರ್ಶನದ ನಂತರ, ಬರ್ಮಿಂಗ್‌ಹ್ಯಾಮ್‌ನಲ್ಲಿ ಭಾರತೀಯ ತಂಡವು ಯಶಸ್ಸನ್ನು ಸಾಧಿಸಲು ಸಿದ್ಧವಾಗಿದೆ.

ತಂಡದ ಆಯ್ಕೆಯ ಕುರಿತು ಮಾತನಾಡಿದ ಮುಖ್ಯ ಕೋಚ್ ಗ್ರಹಾಂ ರೀಡ್, "ನಾವು ಕಾಮನ್‌ವೆಲ್ತ್ ಗೇಮ್ಸ್‌ಗಾಗಿ ಪ್ರಯತ್ನಿಸಿದ ಮತ್ತು ಪರೀಕ್ಷಿಸಿದ ತಂಡದೊಂದಿಗೆ ಹೋಗಿದ್ದೇವೆ. ಈ ಆಟಗಾರರು ಎಫ್‌ಐಹೆಚ್ ಪ್ರೊ ಲೀಗ್‌ನಲ್ಲಿ ಹೆಚ್ಚಿನ ಒತ್ತಡದ ಪಂದ್ಯಗಳಲ್ಲಿ ಅಗ್ರ ತಂಡಗಳನ್ನು ಆಡಿದ ಅನುಭವವನ್ನು ಹೊಂದಿದ್ದಾರೆ.''

"ನಾವು ನೆದರ್ಲೆಂಡ್ಸ್‌ನಿಂದ ತವರಿಗೆ ಹಿಂದಿರುಗಿದ ಸ್ವಲ್ಪ ವಿರಾಮದ ನಂತರ, ನಾವು ಬೆಂಗಳೂರಿನ SAI ನಲ್ಲಿ ಶಿಬಿರವನ್ನು ಪುನರಾರಂಭಿಸುತ್ತೇವೆ, ಅಲ್ಲಿ ನಾವು ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್‌ ವಿರುದ್ಧದ ನಮ್ಮ ಪ್ರದರ್ಶನವನ್ನು ವಿಶ್ಲೇಷಿಸುತ್ತೇವೆ. ಎಫ್‌ಐಎಚ್‌ ಪ್ರೊ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ಎದುರು ನೋಡಿದ್ದೇವೆ. ಇದರಿಂದ ಕೆಲವು ಕ್ಷೇತ್ರವನ್ನ ಬಲಪಡಿಸಬಹುದು ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟದ ಮೊದಲೇ ನಾವು ಸುಧಾರಿಸಬಹುದು," ಎಂದು ಕೋಚ್ ಗ್ರಹಾಂ ರೀಡ್ ಹೇಳಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಭಾರತದ 11 ಆಟಗಾರರನ್ನ ಹೆಸರಿಸಿದ ಇರ್ಫಾನ್ ಪಠಾಣ್ l

18 ಸದಸ್ಯರನ್ನೊಳಗೊಂಡ ಭಾರತೀಯ ಪುರುಷರ ಹಾಕಿ ತಂಡ

18 ಸದಸ್ಯರನ್ನೊಳಗೊಂಡ ಭಾರತೀಯ ಪುರುಷರ ಹಾಕಿ ತಂಡ

ಗೋಲ್‌ ಕೀಪರ್‌ಗಳು
1.ಶ್ರೀಜೇಶ್ ಪಿ.ಆರ್.
2.ಕೃಷ್ಣ ಬಹದ್ದೂರ್ ಪಾಠಕ್

ಡಿಫೆಂಡರ್ಸ್
3.ವರುಣ್ ಕುಮಾರ್
4.ಸುರೇಂದರ್ ಕುಮಾರ್
5.ಹರ್ಮನ್‌ಪ್ರೀತ್ ಸಿಂಗ್ (ಉಪನಾಯಕ)
6.ಅಮಿತ್ ರೋಹಿದಾಸ್
7.ಜುಗರಾಜ್ ಸಿಂಗ್
8.ಜರ್ಮನ್‌ಪ್ರೀತ್ ಸಿಂಗ್

ಮಿಡ್‌ಪೀಲ್ಡರ್ಸ್‌
9. ಮನ್‌ಪ್ರೀತ್ ಸಿಂಗ್ (ನಾಯಕ)
10. ಹಾರ್ದಿಕ್ ಸಿಂಗ್
11.ವಿವೇಕ್ ಸಾಗರ್ ಪ್ರಸಾದ್
12. ಶಂಶೇರ್ ಸಿಂಗ್
13.ಆಕಾಶ್‌ದೀಪ್ ಸಿಂಗ್
14.ನೀಲಕಂಠ ಶರ್ಮ

ಫಾರ್ವರ್ಡ್ಸ್‌
15. ಮಂದೀಪ್ ಸಿಂಗ್
16. ಗುರ್ಜಂತ್ ಸಿಂಗ್
17.ಲಲಿತ್ ಕುಮಾರ್ ಉಪಾಧ್ಯಾಯ
18.ಅಭಿಷೇಕ್

Story first published: Monday, June 20, 2022, 16:53 [IST]
Other articles published on Jun 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X