FIH ಮಹಿಳಾ ವಿಶ್ವಕಪ್‌ಗಾಗಿ ಭಾರತೀಯ ಮಹಿಳಾ ತಂಡ ಪ್ರಕಟ: 20 ಸದಸ್ಯರ ತಂಡ

2022ರ ಜುಲೈ 1 ರಿಂದ ಜುಲೈ 17 ರವರೆಗೆ ನೆದರ್ಲ್ಯಾಂಡ್ಸ್ ಮತ್ತು ಸ್ಪೇನ್‌ನಲ್ಲಿ ನಡೆಯಲಿರುವ ಬಹು ನಿರೀಕ್ಷಿತ ಎಫ್‌ಐಹೆಚ್ ಮಹಿಳಾ ಹಾಕಿ ವಿಶ್ವಕಪ್‌ಗಾಗಿ ಹಾಕಿ ಇಂಡಿಯಾ ಮಂಗಳವಾರ 20 ಸದಸ್ಯರ ಭಾರತೀಯ ಮಹಿಳಾ ಹಾಕಿ ತಂಡವನ್ನು ಹೆಸರಿಸಿದೆ.

ಭಾರತವು ಇಂಗ್ಲೆಂಡ್, ನ್ಯೂಜಿಲೆಂಡ್ , ಚೀನಾ ಜೊತೆಗೆ ಪೂಲ್ ಬಿಯಲ್ಲಿ ಸ್ಥಾನ ಪಡೆದಿದ್ದು, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕಕ್ಕಾಗಿ ನಡೆದ ಫೈಟ್‌ನಲ್ಲಿ ಎದುರಿಸಿದ ಇಂಗ್ಲೆಂಡ್ ವಿರುದ್ಧ ಜುಲೈ 3 ರಂದು ತಮ್ಮ ಅಭಿಯಾನವನ್ನು ಪ್ರಾರಂಭಿಸುತ್ತದೆ. ಭಾರತ ತಂಡದ ನಾಯಕತ್ವವನ್ನು ಏಸ್ ಗೋಲ್‌ಕೀಪರ್ ಸವಿತಾ ಮತ್ತು ಉಪನಾಯಕಿಯಾಗಿ ದೀಪ್ ಗ್ರೇಸ್ ಎಕ್ಕಾ ಮುನ್ನಡೆಸಲಿದ್ದಾರೆ.

ಎಫ್‌ಐಎಚ್ ಮಹಿಳಾ ವಿಶ್ವಕಪ್‌ಗಾಗಿ ಭಾರತೀಯ ಮಹಿಳಾ ತಂಡ

ಗೋಲ್‌ಕೀಪರ್‌ಗಳು:

1. ಸವಿತಾ (ನಾಯಕಿ) 2. ಬಿಚು ದೇವಿ ಖರಿಬಮ್

ಡಿಫೆಂಡರ್ಸ್:
3. ಡೀಪ್ ಗ್ರೇಸ್ ಎಕ್ಕಾ (ಉಪನಾಯಕಿ)
4. ಗುರ್ಜಿತ್ ಕೌರ್
5.ನಿಕ್ಕಿ ಪ್ರಧಾನ್
6.ಉದಿತಾ

ಮಿಡ್‌ಫೀಲ್ಡರ್‌ಗಳು:
7. ನಿಶಾ
8. ಸುಶೀಲಾ ಚಾನು ಪುಖ್ರಂಬಂ
9. ಮೋನಿಕಾ
10. ನೇಹಾ
11. ಜ್ಯೋತಿ
12. ನವಜೋತ್ ಕೌರ್
13. ಸೋನಿಕಾ
14. ಸಲೀಮಾ ಟೆಟೆ

ಫಾರ್ವರ್ಡ್‌ಗಳು:
15. ವಂದನಾ ಕಟಾರಿಯಾ
16. ಲಾಲ್ರೆಮ್ಸಿಯಾಮಿ
17. ನವನೀತ್ ಕೌರ್
18. ಶರ್ಮಿಳಾ ದೇವಿ

ಬದಲಿ ಆಟಗಾರರು:
19. ಅಕ್ಷತಾ ಅಬಾಸೋ ಧೇಕಲೇ
20. ಸಂಗೀತಾ ಕುಮಾರಿ

 ಕಾಮನ್‌ವೆಲ್ತ್ ಗೇಮ್ಸ್‌ 2022: 18 ಸದಸ್ಯರ ಭಾರತೀಯ ಪುರುಷರ ಹಾಕಿ ತಂಡ ಪ್ರಕಟ ಕಾಮನ್‌ವೆಲ್ತ್ ಗೇಮ್ಸ್‌ 2022: 18 ಸದಸ್ಯರ ಭಾರತೀಯ ಪುರುಷರ ಹಾಕಿ ತಂಡ ಪ್ರಕಟ

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, June 21, 2022, 22:37 [IST]
Other articles published on Jun 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X