ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

FIH ಮಹಿಳಾ ಹಾಕಿ ಸೀರೀಸ್‌ ಫೈನಲ್ಸ್‌: ಫಿಜಿ ವಿರುದ್ಧ ಭಾರತಕ್ಕೆ ಜಯ

FIH Womens Series Finals: India hammer Fiji 11-0

ಹಿರೋಶಿಮಾ, ಜೂನ್‌ 18: ಅಕ್ಷರಶಃ ಅಧಿಕಾರಯುತ ಪ್ರದರ್ಶನ ನೀಡಿದ ಭಾರತ ಮಹಿಳಾ ಹಾಕಿ ತಂಡ, 'ಎ' ಗುಂಪಿನ ಕೊನೆಯ ಲೀಗ್‌ ಪಂದ್ಯದಲ್ಲಿ ದುರ್ಬಲ ಫಿಜಿ ತಂಡವನ್ನು 11-0 ಗೋಲ್‌ಗಳಿಂದ ಬಗ್ಗುಬಡಿಯುವ ಮೂಲಕ ಎಫ್‌ಐಎಚ್‌ ಮಹಿಳಾ ಹಾಕಿ ಸೀರೀಸ್‌ ಫೈನಲ್ಸ್‌ ಟೂರ್ನಿಯಲ್ಲಿ ಸೆಮಿಫೈನಲ್ಸ್‌ ಹಂತಕ್ಕೆ ದಾಪುಗಾಲಿಟ್ಟಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಇಲ್ಲಿನ ಹಿರೋಶಿಮಾ ಹಾಕಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಭಾರತದ ಪರ ಮೊದಲ ಕ್ವಾರ್ಟರ್‌ನಲ್ಲಿ ಲಾಲ್ರೆಂಸಿಯಾಮಿ ಮೊದಲ ಗೋಲ್‌ ದಾಖಲಿಸಿದರೆ ನಾಯಕಿ ರಾಣಿ ರಾಂಪಾಲ್‌ (10ನೇ ನಿ.) ಪೆನಾಲ್ಟಿ ಕಾರ್ನರ್‌ ಮೂಲಕ ಎರಡನೇ ಗೋಲ್‌ ಗಳಿಸಿದರು.

ಇದಾದ ಮರು ನಿಮಿಷದಲ್ಲೇ ನೇಹಾ ಗೋಯಲ್‌ ಎದುರಾಳಿ ತಂಡದ ಡಿಫಿನ್ಸ್‌ ವೈಫಲ್ಯವನ್ನು ಅರಿತು ಚುರುಕಿನ ಆಟವಾಡಿ ಮೋನಿಕಾ ಅವರಿಗೆ ಗೋಲ್‌ಗಳಿಸುವ ಸುಲಭದ ಅವಕಾಶವನ್ನು ಸೃಷ್ಠಿಸಿ ಭಾರತಕ್ಕೆ ಮೂರನೇ ಗೋಲ್‌ ತಂದುಕೊಟ್ಟರು. ಬಳಿಕ 12ನೇ ನಿಮಿಷದಲ್ಲಿ ಫಾರ್ವರ್ಡ್‌ ಆಟಗಾರ್ತಿ ವಂದನಾ ಕಟಾರಿಯಾ ಗೆಲುವಿನ ಅಂತರವನ್ನು 4-0ಗೆ ವಿಸ್ತರಿಸಿದರು.

'ಹಿಟ್‌ಮ್ಯಾನ್‌' ರೋಹಿತ್‌ ವಿಶ್ವದಾಖಲೆಯನ್ನು ಮುರಿದ ಐಯಾನ್‌ ಮಾರ್ಗನ್‌!'ಹಿಟ್‌ಮ್ಯಾನ್‌' ರೋಹಿತ್‌ ವಿಶ್ವದಾಖಲೆಯನ್ನು ಮುರಿದ ಐಯಾನ್‌ ಮಾರ್ಗನ್‌!

ಮೊದಲ ಕ್ವಾರ್ಟರ್‌ನ ಅಂತಿಮ ನಿಮಿಷದಲ್ಲಿ ಗೋಲ್‌ ಗಳಿಸಿದವರ ಪಟ್ಟಿಯಲ್ಲಿ ಗುರುಜಿತ್‌ ಕೌರ್‌ಕೂಡ ತಮ್ಮ ಹೆಸರನ್ನು ದಾಖಲಿಸಿಕೊಂಡರು. ಇದರೊಂದಿಗೆ ಮೊದಲ ಕ್ವಾರ್ಟರ್‌ನಲ್ಲೇ ಭಾರತ 5-0 ಅಂತರದ ಭಾರಿ ಮುನ್ನಡೆ ಪಡೆದು ಗೆಲುವನ್ನು ಖಾತ್ರಿ ಪಡಿಸಿಕೊಂಡಿತು. ಬಳಿಕ ಎಲ್ಲಾ ಕ್ವಾರ್ಟರ್ಗಳಲ್ಲೂ ಗೋಲ್‌ ದಾಖಲಿಸಿದ ಭಾರತ ತಂಡ ಅಮೋಘ ಹಾಗೂ ಅಧಿಕಾರಯುತ ಗೆಲುವಿನೊಂದಿಗೆ ಟೂರ್ನಿಯ ಉಪಾಂತ್ಯಕ್ಕೆ ಕಾಲಿಟ್ಟಿತು.

Story first published: Tuesday, June 18, 2019, 21:16 [IST]
Other articles published on Jun 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X