ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಅಂತಾರಾಷ್ಟ್ರೀಯ ಹಾಕಿಗೆ ನಿವೃತ್ತಿ ಘೋಷಿಸಿದ ಕನ್ನಡಿಗ ಎಸ್‌ವಿ ಸುನಿಲ್

Former India hockey striker SV Sunil retires from Internationa hockey

ನವದೆಹಲಿ: ಭಾರತೀಯ ಹಾಕಿ ತಂಡದ ಅನುಭವಿ ಆಟಗಾರ, ಕನ್ನಡಿಗ, ಸ್ಟ್ರೈಕರ್ ಎಸ್‌ವಿ ಸುನಿಲ್ ಶುಕ್ರವಾರ (ಅಕ್ಟೋಬರ್‌ 1) ಅಂತಾರಾಷ್ಟ್ರೀಯ ಹಾಕಿ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ಸುನಿಲ್ ತನ್ನ 14 ವರ್ಷಗಳ ವರ್ಣರಂಜಿತ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ.

ಡಿಆರ್‌ಎಸ್ ಇಲ್ಲ, ನಾಟ್ ಔಟ್ ತೀರ್ಪು, ಆದರೂ ಹೊರ ನಡೆದ ಪೂನಂ: ವಿಡಿಯೋಡಿಆರ್‌ಎಸ್ ಇಲ್ಲ, ನಾಟ್ ಔಟ್ ತೀರ್ಪು, ಆದರೂ ಹೊರ ನಡೆದ ಪೂನಂ: ವಿಡಿಯೋ

32ರ ಹರೆಯದ ಎಸ್‌ವಿ ಸುನಿಲ್ 2014ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಹಾಕಿ ಪುರುಷರ ತಂಡ ಬಂಗಾರ ಗೆದ್ದಿದ್ದಾಗ ತಂಡದಲ್ಲಿ ಆಡಿದ್ದರು. ಭಾರತೀಯ ಹಾಕಿ ತಂಡದಲ್ಲಿದ್ದ ರೂಪೀಂದರ್ ಪಾಲ್ ಸಿಂಗ್ ಮತ್ತು ಬಿರೇಂದ್ರ ಲಾಕ್ರ ಸೆಪ್ಟೆಂಬರ್ 30ರ ಗುರುವಾರ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ್ದರು. ಇದರ ಮರು ದಿನವೇ ಸುನಿಲ್ ಕೂಡ ನಿವೃತ್ತಿಯ ನಿರ್ಧಾರ ಪ್ರಕಟಿಸಿದ್ದಾರೆ.

ಗುರುವಾರ ಹಾಕಿ ವೃತ್ತಿಗೆ ನಿವೃತ್ತಿ ಗೋಷಿಸಿದ್ದ ರೂಪೀಂದರ್ ಪಾಲ್ ಮತ್ತು ಬಿರೇಂದ್ರ ಇಬ್ಬರೂ ಆಗಸ್ಟ್ ತಿಂಗಳಲ್ಲಿ ಕೊನೆಗೊಂಡ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ಹಾಕಿ ಪುರುಷರ ತಂಡದಲ್ಲಿ ಆಡಿದ್ದರು. ಸದ್ಯ ನಿವೃತ್ತಿ ಘೋಷಿಸಿರುವ ಸುನಿಲ್ ನಮ್ಮ ಕರ್ನಾಟಕದ ಕೊಡಗಿನವರು ಅನ್ನೋದು ಹೆಮ್ಮೆಯ ಸಂಗತಿ.

ಸಾಮಾಜಿಕ ಜಾಲತಾಣದಲ್ಲಿ ವಿಚಿತ್ರ ಸಂದೇಶ ಬರೆದ ಡೇವಿಡ್ ವಾರ್ನರ್ಸಾಮಾಜಿಕ ಜಾಲತಾಣದಲ್ಲಿ ವಿಚಿತ್ರ ಸಂದೇಶ ಬರೆದ ಡೇವಿಡ್ ವಾರ್ನರ್

ಸುನಿಲ್ ಕೂಡ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ತಂಡದ ಪರ ಆಡಿದ್ದರು. ಭವಿಷ್ಯದಲ್ಲಿ ಭಾರತೀಯ ತಂಡ ಗೆಲ್ಲಲು ಅನುಕೂಲವಾಗುವಂತೆ ಯುವಕರಿಗೆ ಹೆಚ್ಚು ಅವಕಾಶ ನೀಡಲು ತಾನು ನಿವೃತ್ತಿ ನೀಡುತ್ತಿರುವುದಾಗಿ ಸುನಿಲ್ ನಿವೃತ್ತಿ ವೇಳೆ ಹೇಳಿದ್ದಾರೆ. 264 ಪಂದ್ಯಗಳಲ್ಲಿ ಭಾರತ ತಂಡ ಪ್ರತಿನಿಧಿಸಿದ್ದ ಸುನಿಲ್, 72 ಗೋಲ್ ದಾಖಲೆ ಹೊಂದಿದ್ದಾರೆ.

Story first published: Friday, October 1, 2021, 21:07 [IST]
Other articles published on Oct 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X