ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಹೀರೋ ಏಷ್ಯಾ ಕಪ್ 2022: ಜಪಾನ್ ವಿರುದ್ಧ ಮುಗ್ಗರಿಸಿದ ಭಾರತ, 2-5 ಅಂತರದಲ್ಲಿ ಸೋಲು

India vs Japan hockey match

ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ ಹೀರೋ ಏಷ್ಯಾ ಕಪ್ ಹಾಕಿ 2022 ಟೂರ್ನಿಯಲ್ಲಿ ಭಾರತ ಪುರುಷರ ಹಾಕಿ ತಂಡ ಜಪಾನ್ ವಿರುದ್ಧ ಮುಗ್ಗರಿಸಿದೆ. ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಡ್ರಾ ಸಾಧಿಸಿದ್ದ ಭಾರತ, ಜಪಾನ್ ವಿರುದ್ಧ 2-5 ಗೋಲುಗಳಿಂದ ಸೋಲು ಕಂಡಿದೆ.

ಜಿಬಿಕೆ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಹಾಕಿ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಹೀರೋ ಏಷ್ಯಾಕಪ್‌ನಲ್ಲಿ ಭಾರತೀಯ ಪುರುಷರ ಹಾಕಿ ತಂಡವು ತನ್ನ ಎರಡನೇ ಮುಖಾಮುಖಿಯಲ್ಲಿ ಜಪಾನ್ ವಿರುದ್ಧ ಮುಗ್ಗರಿಸಿತು. ಜಪಾನ್‌ ಪರ ಕೊಸಿ ಕವಾಬೆ (40', 56') ಎರಡು ಗೋಲು ಹೊಡೆದರೆ, ಕೆನ್ ನಾಗಯೋಶಿ (24'), ರ್ಯೋಮಾ ಊಕಾ (49') ಮತ್ತು ಕೋಜಿ ಯಮಸಾಕಿ (54') ಪೂಲ್ ಎ ಪಂದ್ಯದಲ್ಲಿ ಜಪಾನ್‌ನ ಪರ ಗೋಲು ಗಳಿಸಿದರು. ಭಾರತದ ಪರ ಪವನ್ ರಾಜ್‌ಭರ್ (45') ಮತ್ತು ಉತ್ತಮ್ ಸಿಂಗ್ (50') ಎರಡು ಗೋಲು ಗಳಿಸಿದರು.

ಪಂದ್ಯದ ಆರಂಭದಲ್ಲೇ ಭಾರತದ ಮೇಲೆ ಒತ್ತಡ ಹೇರಿದ ಜಪಾನ್

ಪಂದ್ಯದ ಆರಂಭದಲ್ಲೇ ಭಾರತದ ಮೇಲೆ ಒತ್ತಡ ಹೇರಿದ ಜಪಾನ್

ಪಂದ್ಯದ ಆರಂಭದಿಂದಲೇ ಜಪಾನ್ ಯುವ ತಂಡವು ಭಾರತ ತಂಡದ ಮೇಲೆ ಒತ್ತಡ ಹೇರಲು ಆರಂಭಿಸಿತು. 5ನೇ ನಿಮಿಷದಲ್ಲಿ ಕಾರ್ತಿ ಸೆಲ್ವಂ ಅವರು ಜಪಾನ್ ವೃತ್ತದೊಳಗೆ ರಿವರ್ಸ್ ಹಿಟ್ ಹೊಡೆದು ತಮ್ಮ ತಂಡಕ್ಕೆ ಆರಂಭಿಕ ಅವಕಾಶವನ್ನು ಸೃಷ್ಟಿಸಿದರು. ಆದರೆ ಎಸ್.ವಿ.ಸುನೀಲ್ ಗೋಲು ಎದುರಿನ ಚೆಂಡಿನಲ್ಲಿ ಸಂಪರ್ಕ ಸಾಧಿಸಲು ಸಾಧ್ಯವಾಗದೆ ಅವಕಾಶ ಕೈ ತಪ್ಪಿತು. ಮೊದಲ ಕ್ವಾರ್ಟರ್‌ನ 11ನೇ ನಿಮಿಷದಲ್ಲಿ ಜಪಾನ್‌ಗೆ ಮೊದಲ ಪೆನಾಲ್ಟಿ ಕಾರ್ನರ್ ಸಿಕ್ಕಿತು, ಆದರೆ ಗೋಲ್‌ಕೀಪರ್ ಸೂರಜ್ ಕರ್ಕೇರಾ ಅವರು ಎದುರಾಳಿ ತಂಡವನ್ನು ನಿರಾಸೆಗೊಳಿಸಿದರು.

ರೋಹಿತ್ ಶರ್ಮಾ, ಕೊಹ್ಲಿ ಕಳಪೆ ಫಾರ್ಮ್ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದೇನು?

ಬ್ಯಾಕ್ ಟು ಬ್ಯಾಕ್ ಪೆನಾಲ್ಟಿ ಕಾರ್ನರ್‌ಗಳನ್ನು ಬಿಟ್ಟ ಭಾರತ

ಬ್ಯಾಕ್ ಟು ಬ್ಯಾಕ್ ಪೆನಾಲ್ಟಿ ಕಾರ್ನರ್‌ಗಳನ್ನು ಬಿಟ್ಟ ಭಾರತ

ಭಾರತವು ಬ್ಯಾಕ್-ಟು-ಬ್ಯಾಕ್ ಪೆನಾಲ್ಟಿ ಕಾರ್ನರ್‌ಗಳನ್ನು ಬಿಟ್ಟುಕೊಟ್ಟ ನಂತರ ಕೆನ್ ನಾಗಯೋಶಿ ಜಪಾನ್‌ಗೆ 24 ನೇ ನಿಮಿಷದಲ್ಲಿ ಡ್ರ್ಯಾಗ್‌ಫ್ಲಿಕ್‌ನಿಂದ ಮೊದಲ ಗೋಲು ಗಳಿಸಿದರು. ವಿರಾಮದ ವೇಳೆಗೆ 0-1 ಹಿನ್ನಡೆಯಲ್ಲಿದ್ದ ಭಾರತವು ಮೂರನೇ ಕ್ವಾರ್ಟರ್‌ನಲ್ಲಿ ಉತ್ತಮ ಆಟವಾಡಿತು. ಉತ್ತಮ್ ಸಿಂಗ್ ಅವರು ಗೋಲು ಪಡೆಯಲು ವೃತ್ತದೊಳಗೆ ಅವಕಾಶವನ್ನು ಪಡೆದರು. ಆದರೆ ಚೆಂಡನ್ನು ಗೋಲಿನ ಪೆಟ್ಟಿಗೆ ತಲುಪಿಸಲಾಗದೆ ಸಿಕ್ಕ ಅವಕಾಶವೂ ಕೈತಪ್ಪಿತು.

ಏಷ್ಯಾ ಕಪ್ 2022: ಆತಿಥೇಯ ಇಂಡೋನೇಷ್ಯಾ ವಿರುದ್ಧ ಅಬ್ಬರಿಸಿದ ಪಾಕಿಸ್ತಾನ, 13-0 ಅಂತರದ ಜಯ

ಭಾರತದ ದಾಳಿಗೆ ಜಪಾನ್ ಪ್ರತಿದಾಳಿ

ಭಾರತದ ದಾಳಿಗೆ ಜಪಾನ್ ಪ್ರತಿದಾಳಿ

ಭಾರತವು ಆಟಕ್ಕೆ ಮರಳಲು ಪ್ರಾರಂಭಿಸುತ್ತಿದ್ದಂತೆ ಜಪಾನ್ ತಕ್ಷಣವೇ ಪ್ರತಿದಾಳಿ ಆರಂಭಿಸಿತು. ಕೋಸಿ ಕವಾಬೆ 40ನೇ ನಿಮಿಷದಲ್ಲಿ ಭಾರತದ ಯುವ ರಕ್ಷಣಾ ಪಡೆಗೆ ಹೊಡೆತ ನೀಡುವ ಮೂಲಕ ತಂಡದ ಮುನ್ನಡೆಯನ್ನು ದ್ವಿಗುಣಗೊಳಿಸಿದರು. ಮೂರನೇ ಕ್ವಾರ್ಟರ್‌ನ ಅಂತಿಮ ನಿಮಿಷದಲ್ಲಿ, ಬಿರೇಂದ್ರ ಲಾಕ್ರಾ ನೀಡಿದ ಪಾಸ್ ಪಡೆದ ಪವನ್ ರಾಜ್ ಭಾರ್ ಚೆಂಡನ್ನು ನೆಟ್ಸ್‌ಗೆ ತಿರುಗಿಸಿದರು, ಭಾರತ ಹಿನ್ನಡೆಯನ್ನು 1-2ಕ್ಕೆ ತಗ್ಗಿಸಿತು.

ಅಂತಿಮ ಕ್ವಾರ್ಟರ್‌ನಲ್ಲಿ ರ್ಯೋಮಾ ಊಕಾ ನಾಲ್ಕು ನಿಮಿಷಗಳ ಗೋಲು ಗಳಿಸಿದರು, ಆದರೆ ಉತ್ತಮ್ ಸಿಂಗ್ ಮುಂದಿನ ನಿಮಿಷದಲ್ಲಿ ಭಾರತಕ್ಕೆ ಒಂದು ಗೋಲು ಗಳಿಸುವಲ್ಲಿ ಯಶಸ್ವಿಯಾದರು. ಕೋಜಿ ಯಮಸಾಕಿ ಮತ್ತು ಕೊಸಿ ಕವಾಬೆ ಅವರ ತಡವಾದ ಗೋಲುಗಳು ಜಪಾನ್‌ಗೆ ಭಾರೀ ಮುನ್ನಡೆ ನೀಡಿದರ ಜೊತೆಗೆ, ಪಂದ್ಯವನ್ನು 5-2 ರಿಂದ ಗೆದ್ದರು.

ಭಾರತ ತನ್ನ ಮುಂದಿನ ಪಂದ್ಯವನ್ನು ಗುರುವಾರ(ಮೇ. 26) ಇಂಡೋನೇಷ್ಯಾ ವಿರುದ್ಧ ಆಡಲಿದೆ. ಇಂದು ಪಾಕಿಸ್ತಾನ ತಂಡವು ಆತಿಥೇಯ ಇಂಡೋನೇಷ್ಯಾ ವಿರುದ್ಧ 13-0 ಗೋಲುಗಳಿಂದ ಗೆದ್ದಿದೆ.

Story first published: Tuesday, May 24, 2022, 22:20 [IST]
Other articles published on May 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X