ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಏಷ್ಯಾ ಕಪ್ 2022: ಜಪಾನ್ ತಂಡವನ್ನ ಸೋಲಿಸಿ ಕಂಚಿನ ಪದಕ ಗೆದ್ದ ಭಾರತ

India vs Japan match

ಇಂಡೋನೇಷ್ಯಾದ ಜಕಾರ್ತದಲ್ಲಿನ ಜಿಬಿಕೆ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಹಾಕಿ ಸ್ಟೇಡಿಯಂನಲ್ಲಿ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಜಪಾನ್ ವಿರುದ್ಧ ಗೆದ್ದ ಭಾರತ ಪುರುಷರ ಹಾಕಿ ತಂಡ ಕಂಚಿನ ಪದಕಕ್ಕೆ ಕೊರಳೊಡ್ಡಿದೆ.

ಫೈನಲ್ ಅವಕಾಶವನ್ನ ಕಳೆದುಕೊಂಡಿದ್ದ ಭಾರತವು ಇಂದು ಜಪಾನ್ ವಿರುದ್ಧ ನಡೆದ ಪಂದ್ಯದಲ್ಲಿ 1-0 ಅಂತರದಲ್ಲಿ ಜಯಗಳಿಸುವ ಮೂಲಕ ಹೀರೋ ಏಷ್ಯಾ ಕಪ್ 2022 ರಲ್ಲಿ ಕಂಚಿನ ಪದಕವನ್ನು ಪಡೆದುಕೊಂಡಿತು.

ಏಕೈಕ ಗೋಲು ದಾಖಲಿಸಿ ಗೆಲುವು ಸಾಧಿಸಿದ ಭಾರತ

ಏಕೈಕ ಗೋಲು ದಾಖಲಿಸಿ ಗೆಲುವು ಸಾಧಿಸಿದ ಭಾರತ

ಭಾರತೀಯ ಪುರುಷರ ಹಾಕಿ ತಂಡದಿಂದ ಪ್ರಬಲ ರಕ್ಷಣಾತ್ಮಕ ಪ್ರದರ್ಶನದ ಜೊತೆಗೆ, ರಾಜ್ ಕುಮಾರ್ ಪಾಲ್ (7') ಭಾರತಕ್ಕೆ ಏಕೈಕ ಗೋಲು ಗಳಿಸಿ ಗೆಲುವನ್ನು ಸಾಧಿಸಲು ಸಹಾಯ ಮಾಡಿದರು.

ಮಿಡ್‌ಫೀಲ್ಡ್‌ನಲ್ಲಿ ಹಿಡಿತ ಸಾಧಿಸಿದ ಭಾರತ ಎಚ್ಚರಿಕೆಯಿಂದ ಪಂದ್ಯವನ್ನು ಆರಂಭಿಸಿತು. ಕಾರ್ತಿ ಸೆಲ್ವಂ ವೃತ್ತದ ಒಳಗೆ ಅದ್ಭುತ ಪಾಸ್ ಪಡೆದರು, ಮತ್ತು ಅವರು ವಿಷ್ಣುಕಾಂತ್ ಸಿಂಗ್ ಅವರಿಗೆ ಚೆಂಡನ್ನು ಪಾಸ್ ಮಾಡಿದರು. ಆದರೆ ಜಪಾನಿನ ರಕ್ಷಣಾ ಪಡೆ ಅಪಾಯವನ್ನು ತಪ್ಪಿಸಿತು. ಬಲ ವಿಭಾಗದಲ್ಲಿ ಉತ್ತಮ್ ಸಿಂಗ್ ಅವರ ಸ್ಪೂರ್ತಿದಾಯಕ ಓಟವು ರಾಜ್ ಕುಮಾರ್ ಪಾಲ್ ವೃತ್ತದೊಳಗೆ ತೆರೆದುಕೊಂಡಿತು ಮತ್ತು ಅವರು ಚೆಂಡನ್ನ ಗೋಲಿನ ಪೆಟ್ಟಿಗೆಗೆ ಹಾಕುವ ಮೂಲಕ ಭಾರತಕ್ಕೆ 1-0 ಮುನ್ನಡೆ ತಂದುಕೊಟ್ಟರು.

ನಮ್ಮೂರ ಪ್ರತಿಭೆ: ನೀರಜ್ ಚೋಪ್ರಾ ಹಾದಿಯಲ್ಲಿ ಕರ್ನಾಟಕದ ಜಾವೆಲಿನ್ ಥ್ರೋ ಪಟು ಮನು ಡಿಪಿ

ಜಪಾನ್‌ಗೆ ಬ್ಯಾಕ್-ಟು-ಬ್ಯಾಕ್ ಪೆನಾಲ್ಟಿ ಕಾರ್ನರ್‌

ಜಪಾನ್‌ಗೆ ಬ್ಯಾಕ್-ಟು-ಬ್ಯಾಕ್ ಪೆನಾಲ್ಟಿ ಕಾರ್ನರ್‌

ಮೊದಲ ಕ್ವಾರ್ಟರ್‌ನ ಅಂತ್ಯದ ಮೊದಲು ಭಾರತವು ಬ್ಯಾಕ್-ಟು-ಬ್ಯಾಕ್ ಪೆನಾಲ್ಟಿ ಕಾರ್ನರ್‌ಗಳನ್ನು ಪಡೆದುಕೊಂಡಿತು. ಆದರೆ ಭಾರತದ ದಾಳಿಯನ್ನ ಜಪಾನ್ ಉತ್ತಮವಾಗಿ ರಕ್ಷಿಸಿಕೊಂಡಿತು. ಭಾರತ ತಕ್ಷಣವೇ ಎರಡನೇ ಕ್ವಾರ್ಟರ್‌ನಲ್ಲಿ ಆಕ್ರಮಣಕಾರಿ ಪ್ರದರ್ಶನ ತೋರಿದರೂ ಸಹ ತ್ವರಿತವಾಗಿ ತಮ್ಮ ಮುನ್ನಡೆಯನ್ನು ಪಡೆಯಲು ಸಾಧ್ಯವಾಗಲಿಲ್ಲ.

ಜಪಾನ್ ಏಳು ಪೆನಾಲ್ಟಿ ಕಾರ್ನರ್‌ಗಳನ್ನು ಹೊಂದಿತ್ತು, ಆದರೆ ಭಾರತ ಕೇವಲ ಎರಡನ್ನು ಹೊಂದಿತ್ತು. ಭಾರತವು 11-10 ಅಂಕಿಅಂಶಗಳನ್ನು ಮುನ್ನಡೆಸಿತು. ಪಂದ್ಯದ ಕೊನೆಯ ನಿಮಿಷದಲ್ಲಿ ಭಾರತವು 10 ಆಟಗಾರರೊಂದಿಗೆ ಕಣಕ್ಕಿಳಿದರೂ ಸಹ ಏಷ್ಯಾಕಪ್‌ನಲ್ಲಿ ತಮ್ಮ ಎರಡನೇ ಕಂಚಿನ ಪದಕವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.

2008ರಲ್ಲೇ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೆ, ಆದ್ರೆ ಸಚಿನ್ ತಡೆದ್ರು: ವೀರೇಂದ್ರ ಸೆಹ್ವಾಗ್

ಸಮಬಲ ಸಾಧಿಸಲು ಜಪಾನ್ ಹೋರಾಟ ವ್ಯರ್ಥ

ಸಮಬಲ ಸಾಧಿಸಲು ಜಪಾನ್ ಹೋರಾಟ ವ್ಯರ್ಥ

ಜಪಾನ್ ಸಮಬಲ ಸಾಧಿಸಲು ಸಾಕಷ್ಟು ಹೋರಾಟ ನಡೆಸಿತು. ಆದರೆ ಭಾರತದ ರಕ್ಷಣಾ ವಿಭಾಗವು ವಿರಾಮದವರೆಗೆ 1-0 ಮುನ್ನಡೆ ಕಾಯ್ದುಕೊಂಡಿತು. ದ್ವಿತೀಯಾರ್ಧದ ಆರಂಭದಲ್ಲಿ ಭಾರತ ಎಡ ಭಾಗದಿಂದ ಆಕ್ರಮಣಕಾರಿ ಚಲನೆಗಳನ್ನು ರಚಿಸಲು ಪ್ರಾರಂಭಿಸಿತು. ಜಪಾನಿನ ನಾಯಕ ಸೆರೆನ್ ತನಕಾ ವೃತ್ತದೊಳಗೆ ಅಪಾಯಕಾರಿ ಚೆಂಡನ್ನು ದಾಟಲು ಪ್ರಯತ್ನಿಸಿದರು, ಆದರೆ ದಿಪ್ಸನ್ ಟಿರ್ಕಿ ಅವರು ಚೆಂಡನ್ನು ತ್ವರಿತವಾಗಿ ತೆರವುಗೊಳಿಸಿದರು.

ಮಣಿಂದರ್ ಸಿಂಗ್ ಅಂತಿಮ ನಿಮಿಷದಲ್ಲಿ ಕೊನೆಯ ಪ್ರಯತ್ನ ಮಾಡಿದರೂ ಸಹ ಜಪಾನಿನ ರಕ್ಷಣೆ ಮುಂದೆ ಅವರ ಆಟ ನಡೆಯಲಿಲ್ಲ. ಕೊನೆಯ 30 ಸೆಕೆಂಡ್‌ಗಳಲ್ಲಿ ಸಮಬಲ ಸಾಧಿಸಲು ಜಪಾನ್ ಪ್ರಯತ್ನಿಸಿತು. ಆದ್ರೆ ಅವರಿಗೆ ಸಾಧ್ಯವಾಗಲಿಲ್ಲ ಮತ್ತು ಭಾರತ 1-0 ಅಂತರದಲ್ಲಿ ಗೆಲುವು ಸಾಧಿಸಿತು.

Story first published: Thursday, June 2, 2022, 9:37 [IST]
Other articles published on Jun 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X