ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಹಾಕಿ: ಆಸ್ಟ್ರೇಲಿಯಾ 'ಎ' ವಿರುದ್ಧ ಸಮಬಲ ಸಾಧಿಸಿದ ಭಾರತ

Hockey: India draw 1-1 against Australia A

ಪರ್ತ್‌, ಮೇ 13: ಮುಂಬರುವ ಹಾಕಿ ವಿಶ್ವ ಲೀಗ್‌ ಫೈನಲ್ಸ್‌ ಟೂರ್ನಿಗೆ ಭರ್ಜರಿ ಸಿದ್ಧತೆಯಲ್ಲಿರುವ ಭಾರತ ಹಾಕಿ ತಂಡ ಇಲ್ಲಿ ನಡೆದ ಆತಿಥೇಯ ಆಸ್ಟ್ರೇಲಿಯಾ 'ಎ' ವಿರುದ್ಧದ ಹಾಕಿ ಸರಣಿಯ 2ನೇ ಪಂದ್ಯದಲ್ಲಿ 1-1 ಗೋಲ್‌ಗಳ ಸಮಬಲ ಸಾಧಿಸಿದೆ.

ಆಸ್ಟ್ರೇಲಿಯಾ ಥಂಡರ್‌ಸ್ಟಿಕ್ಸ್‌ ವಿರುದ್ಧ 2-0 ಮತ್ತು ಆಸ್ಟ್ರೇಲಿಯಾ 'ಎ' ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ 3-0 ಅಂತರದ ಭರ್ಜರಿ ಜಯ ದಾಖಲಿಸಿದ್ದ ಭಾರತ ತಂಡ, ಸೋಮವಾರ ನಡೆದ ಎರಡನೇ ಪಂದ್ಯದಲ್ಲಿ 0-1 ಗೋಲ್‌ಗಳಿಂದ ಸೋಲನುಭವಿಸುವ ಆತಂಕದಲ್ಲಿತ್ತು. ಆದರೆ, ಡ್ರ್ಯಾಗ್‌ ಫ್ಲಿಕ್ಕರ್‌ ಹರ್ಮನ್‌ಪ್ರೀತ್‌ ಸಿಂಗ್‌ ಪಂದ್ಯದ 56ನೇ ನಿಮಿಷದಲ್ಲಿ ತಂದುಕೊಟ್ಟ ಅದ್ಭುತ ಗೋಲಿನೊಂದಿಗೆ ಭಾರತ ಸಮಬಲಕ್ಕೆ ನಿಟ್ಟುಸಿರು ಬಿಟ್ಟಿತು.

ಎಫ್‌ಐಎಚ್‌ ಸೀರೀಸ್‌ ಫೈನಲ್ಸ್‌: ಭಾರತಕ್ಕೆ ರಷ್ಯಾ ಮೊದಲ ಎದುರಾಳಿಎಫ್‌ಐಎಚ್‌ ಸೀರೀಸ್‌ ಫೈನಲ್ಸ್‌: ಭಾರತಕ್ಕೆ ರಷ್ಯಾ ಮೊದಲ ಎದುರಾಳಿ

ಪಂದ್ಯದ ಮೊದಲ ಅವಧಿಯಲ್ಲಿ ಎರಡು ಬಾರಿ ಎದುರಾಳಿ ತಂಡದ ಗೋಲ್‌ ಗಳಿಕೆಯ ಪ್ರಯತ್ನವನ್ನು ವಿಫಲವನ್ನಾಗಿಸಿದ ಭಾರತ, ಆತಿಥೇಯರಿಗೆ ಸತತ ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಬಿಟ್ಟುಕೊಟ್ಟಿತು. ಇದರಿಂದಾಗಿ ಪ್ರವಾಸಿ ಭಾರತಕ್ಕೆ ಆತಿಥೇಯರ ಮೇಲೆ ಆರಂಭದಲ್ಲೇ ಒತ್ತಡ ಹೇರಲು ಸಾಧ್ಯವಾಗಲಿಲ್ಲ. ಅಂತೆಯೇ ಮೊದಲ ಅವಧಿ ಗೋಲ್‌ ರಹಿತವಾಗಿ ಅಂತ್ಯಗೊಂಡಿತು.

ಹಾಕಿ: ಕೊರಿಯಾ ಪ್ರವಾಕ್ಕೆ ಭಾರತ ಮಹಿಳಾ ಪಡೆಗೆ ರಾಣಿ ಸಾರಥ್ಯ

ಎರಡನೇ ಅವಧಿಯಲ್ಲಿ ಮನ್‌ಪ್ರೀತ್‌ ಸಾರಥ್ಯದ ಭಾರತ ತಂಡಕ್ಕೆ ಆಘಾತ ಎದುರಾಯಿತು. 21ನೇ ನಿಮಿಷದಲ್ಲಿಆಸ್ಟ್ರೇಲಿಯಾ 'ಎ' ತಂಡದ ಆಟಗಾರ ಭಾರತೀಯ ಸಂಜಾತ ಕಿರಣ್‌ ಅರುಣಾಚಲಂ ಅದ್ಭುತ ಫೀಲ್ಡ್‌ ಗೋಲ್‌ ದಾಖಲಿಸಿದರು.

ಹಾಕಿ: ಆಸ್ಟ್ರೇಲಿಯಾ 'ಎ' ವಿರುದ್ಧ ಭಾರತಕ್ಕೆ ಜಯಹಾಕಿ: ಆಸ್ಟ್ರೇಲಿಯಾ 'ಎ' ವಿರುದ್ಧ ಭಾರತಕ್ಕೆ ಜಯ

"ಅತ್ಯಂತ ಕಳಪೆ ಆರಂಭ ಲಭ್ಯವಾಯಿತು. ಶುಕ್ರವಾರ ಆಡಿದ ಆಟಕ್ಕಿಂತಲೂ ಪಂದ್ಯದ ಮೊದಲ 10 ನಿಮಿಷಗಳ ಅವಧಿ ಸಂಪೂರ್ಣ ವಿಭಿನ್ನವಾಗಿತ್ತು. 2ನೇ ಅವಧಿ ಹೊತ್ತೊಗೆ ನಿಧಾನವಾಗಿ ಪಂದ್ಯದ ಮೇಲೆ ಹಿಡಿತ ಕಂಡುಕೊಳ್ಳಲು ಆರಂಭಿಸಿದೆವು. ಬಳಿಕ 3ನೇ ಮತ್ತು 4ನೇ ಅವಧಿಯಲ್ಲಿ ಗೋಲ್‌ ಗಳಿಕೆಯ ಹೆಚ್ಚು ಅವಕಾಶಗಳನ್ನು ಸೃಷ್ಟಿಸಿದೆವು,'' ಎಂದು ಭಾರತ ತಂಡದ ನೂತನ ಕೋಚ್‌ ಗ್ರಹಾಮ್ ರೀಡ್‌ ಪಂದ್ಯದ ಬಳಿಕ ತಮ್ಮ ಅಭಿಪ್ರಾಯ ಹಂಚಿಕೊಂಡರು.

Story first published: Monday, May 13, 2019, 17:01 [IST]
Other articles published on May 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X