ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಹಾಕಿ: ಗ್ರೇಟ್ ಬ್ರಿಟನ್ ವಿರುದ್ಧ ಗೆಲುವು: 4 ದಶಕದ ನಂತರ ಒಲಿಂಪಿಕ್ಸ್ ಸೆಮಿಫೈನಲ್‌ಗೇರಿದ ಭಾರತ

Hockey: India won against Great Britain, enter semifinal after 4 decades

ಟೋಕಿಯೋ ಆಗಸ್ಟ್ 1: ಹಾಕಿ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತೀಯ ಪುರುಷರ ತಂಡ ಗ್ರೇಟ್ ಬ್ರಿಟನ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿ ಗೆಲುವು ಸಾಧಿಸಿದೆ. ಈ ಗೆಲುವಿನ ಮೂಲಕ ಭಾರತೀಯ ಹಾಕಿ ತಂಡ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಈ ಮೂಲಕ ಕಳೆದು ನಾಲ್ಕು ದಶಕಗಳಲ್ಲಿ ಮೊದಲ ಬಾರಿಗೆ ಭಾರತ ಹಾಕಿಯಲ್ಲಿ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಗ್ರೇಟ್‌ ಬ್ರಿಟನ್ ವಿರುದ್ಧದ ಪಂದ್ಯದಲ್ಲಿ ಭಾರತೀಯ ಹಾಕಿ ತಂಡ ಆರಂಭದಿಂದಲೇ ಅದ್ಭುತ ಆಟವನ್ನು ಪ್ರದರ್ಶಿಸುತ್ತಾ ಸಾಗಿತ್ತು. ಮೊದಲ ಕ್ವಾಟರ್‌ನಲ್ಲಿಯೇ ಭಾರತ ತಮ್ಮ ಗೋಲಿನ ಖಾತೆ ತೆರೆಯಿತು. ದಿಲ್‌ಪ್ರೀತ್ ಸಿಂಗ್ ಮೊದಲ ಯಶಸ್ಸನ್ನು ಭಾರತ ತಂಡಕ್ಕೆ ಒದಗಿಸುವಲ್ಲಿ ಯಶಸ್ವಿಯಾದರು.

ಭಾರತ ಎರಡನೇ ಕ್ವಾರ್ಟರ್‌ನ ಆರಂಭದಲ್ಲಿಯೂ ಯಶಸ್ಸು ಸಾಧಿಸಿತು. ಎರಡನೇ ಗೋಲು ಗಳಿಸುವಲ್ಲಿ ಭಾರತೀಯ ತಂಡ ಯಶಸ್ವಿಯಾಯಿತು. ಗುರ್ಜೀತ್ ಸಿಂಗ್ ಭಾರತ ತಂಡಕ್ಕೆ ಎರಡನೇ ಗೋಲು ಗಳಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಭಾರತ 2-0 ಅಂತರದಿಂದ ಮುನ್ನಡೆ ಪಡೆಯಿತು. ಎರಡನೇ ಕ್ವಾರ್ಟರ್‌ನ ಅಂತ್ಯದಲ್ಲಿಯೂ ಈ ಮುನ್ನಡೆ ಭಾರತಕ್ಕೆ ದೊರೆತಿತ್ತು

ಮೂರನೇ ಕ್ವಾರ್ಟರ್‌ನಲ್ಲಿ ಭಾರತ ನಿರಾಸೆ ಅನುಭವಿಸಿತು. ಗ್ರೇಟ್ ಬ್ರಿಟನ್ ಆಟಗಾರರು ಭಾರತದ ವಿರುದ್ಧ ಆಕ್ರಮಣಕಾರಿ ಪ್ರದರ್ಶನ ನೀಡಲು ಆರಂಭಿಸಿದರು. ಹೀಗಾಗಿ ಫೆನಾಲ್ಟಿ ಕಾರ್ನರ್ ಅವಕಾಶವನ್ನು ಇಂಗ್ಲೆಂಡ್ ಪಡೆಯಿತು. ಮೊದಲ ಬಾರಿಗೆ ಭಾರತ ಗೋಲು ತಡೆಯುವಲ್ಲಿ ಯಶಸ್ವಿಯಾಯಿತಾದರೂ ಮತ್ತೊಮ್ಮೆ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದ ಬ್ರಿಟನ್ ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಯಿತು. ಹೀಗಾಗಿ ಮೂರನೇ ಕ್ವಾರ್ಟರ್‌ನ ಅಂತ್ಯಕ್ಕೆ ಭಾರತದ ಮುನ್ನಡೆಯ ಅಂತರ 2-1ಕ್ಕೆ ಇಳಿದಿತ್ತು.

ಸಂಪೂರ್ಣ ಮೇಲುಗೈ ಸಾಧಿಸಿದ ಭಾರತ

ಸಂಪೂರ್ಣ ಮೇಲುಗೈ ಸಾಧಿಸಿದ ಭಾರತ

ಅಂತಿಮ ಕ್ವಾರ್ಟರ್ ಕೂಡ ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿತ್ತು. ಒಂದೆಡೆ ಗ್ರೇಟ್ ಬ್ರಿಟನ್ ತಂಡ ಗೋಲು ಗಳಿಸಿ ಸಮಬಲ ಸಾಧಿಸುವ ಪ್ರಯತ್ನವನ್ನು ಮುಂದಿವರಿಸಿದ್ದರೆ ಭಾರತ ಮುನ್ನಡೆಯನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ನಡೆಸಿತು. ಈ ಹೋರಾಟದಲ್ಲಿ ಭಾರತದ ಕೈಮೇಲಾಯಿತು. ಪಂದ್ಯದ ಅಂತ್ಯಕ್ಕೆ ಇನ್ನೇನು ಮೂರು ನಿಮಿಷಗಳಿವೆ ಎಂದಾಗ ಭಾರತ ಮೂರನೇ ಗೋಲು ಗಳಿಸುವಲ್ಲಿ ಯಶಸ್ವಿಯಾಯಿತು ಈ ಮೂಲಕ ಭಾರತ ತನ್ನ ಮುನ್ನಡೆಯ ಅಂತರವನ್ನು ಹೆಚ್ಚಿಸಿಕೊಂಡಿತು.

41 ವರ್ಷಗಳ ನಂತರ ಸೆಮಿಫೈನಲ್‌ಗೆ

41 ವರ್ಷಗಳ ನಂತರ ಸೆಮಿಫೈನಲ್‌ಗೆ

ಇದಾದ ನಂತರ ಗ್ರೇಟ್ ಬ್ರಿಟನ್‌ ತಂಡಕ್ಕೆ ಯಾವುದೇ ಮ್ಯಾಜಿಕ್ ಮಾಡಲು ಸಾಧ್ಯವಾಗಲಿಲ್ಲ. ಭಾರತ ಗ್ರೇಟ್ ಬ್ರಿಟನ್ ವಿರುದ್ಧ ಅದ್ಭುತ ಜಯವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಬರೊಬ್ಬರಿ 41 ವರ್ಷಗಳ ನಂತರ ಭಾರತ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್ ಹಂತಕ್ಕೇರಿದೆ. ಈ ಮೂಲಕ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತ ಪದಕ ಗೆಲ್ಲಲು ಮತ್ತಷ್ಟು ಹತ್ತಿರವಾಗಿದೆ.

1928-64ರ ಅವಧಿಯಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ 7 ಬಾರಿ ಚಿನ್ನದ ಪದಕವನ್ನು ಗೆದ್ದುಕೊಂಡಿತ್ತು. ಈ ಅವಧಿಯಲ್ಲಿ 1960ರ ಫೈನಲ್ ಪಂದ್ಯದಲ್ಲಿ ಸೋಲು ಕಂಡು ಬೆಳ್ಳಿ ಪದಕವನ್ನು ಗಳಿಸಿದ್ದು ಹೊರತುಪಡಿಸಿ ಉಳಿದೆಲ್ಲಾ ಬಾರಿಯೂ ಚಿನ್ನವನ್ನು ಮುಡಿಗೇರಿಸಿಕೊಂಡಿತ್ತು. ಅದಾದ ಬಳಿಕ ಮತ್ತೆ 1980ರಲ್ಲಿ ಮಾಸ್ಕೋದಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾರತ ಮತ್ತೆ ಚಿನ್ನದ ಪದಕವನ್ನು ಗೆದ್ದುಕೊಂಡಿತ್ತು. ಆದರೆ ನಂತರ ಭಾರತೀಯ ಹಾಕಿ ತಂಡದ ಒಲಿಂಪಿಕ್ಸ್‌ನಲ್ಲಿ ಹೇಳಿಕೊಳ್ಳುವಂತಾ ಪ್ರದರ್ಶನ ನೀಡಲು ಸಂಪೂರ್ಣ ವಿಫಲವಾಗಿತ್ತು.

ಇತ್ತೀಚಿನ ವರ್ಷಗಳಲ್ಲಿ ಕಳೆಗುಂದಿದ್ದ ಭಾರತೀಯ ಹಾಕಿ ತಂಡ

ಇತ್ತೀಚಿನ ವರ್ಷಗಳಲ್ಲಿ ಕಳೆಗುಂದಿದ್ದ ಭಾರತೀಯ ಹಾಕಿ ತಂಡ

ಅದರಲ್ಲೂ ಇತ್ತೀಚಿನ ದಶಕದಲ್ಲಿ ಭಾರತದ ಪ್ರದರ್ಶನ ಹೀನಾಯವಾಗುತ್ತಲೇ ಸಾಗಿತ್ತು. 2008ರ ಬೀಜಿಂಗ್ ಒಲಿಂಪಿಕ್ಸ್ ಗೇಮ್ಸ್‌ಗೆ ಭಾರತ ತಂಡ ಅರ್ಹತೆಯನ್ನು ಪಡೆಯುವಲ್ಲಿಯೂ ವಿಫಲವಾಗಿತ್ತು. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಟೂರ್ನಿಯಲ್ಲಿ ಕೊನೆಯ ಸ್ಥಾನವನ್ನು ಪಡೆದು ಹೊರಬಿದ್ದಿತ್ತು. ಹೀಗೆ ರಾಷ್ಟ್ರೀಯ ಕ್ರೀಡೆ ಹಾಕಿಯಾಗಿದ್ದರೂ ಹಾಕಿ ತಂಡದ ಪರಿಸ್ಥಿತಿ ಮತ್ತಷ್ಟು ಹೀನಾಯವಾಗುತ್ತಲೇ ಸಾಗಿತ್ತು. ಆದರೆ ಕಳೆದ ಎರಡು ವರ್ಷಗಳಲ್ಲಿ ಭಾರತೀಯ ಹಾಕಿ ತಂಡದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಾಣಿಸಲು ಆರಂಭಿಸಿತ್ತು. ಇದು ಈಗ ಒಲಿಂಪಿಕ್ಸ್ ಪ್ರದರ್ಶನದ ಮೂಲಕ ವ್ಯಕ್ತವಾಗುತ್ತಿದೆ.

ಅತ್ಯುತ್ತಮ ಆಟ ಪ್ರದರ್ಶಿಸಿದ ಭಾರತೀಯ ತಂಡ

ಅತ್ಯುತ್ತಮ ಆಟ ಪ್ರದರ್ಶಿಸಿದ ಭಾರತೀಯ ತಂಡ

ಭಾರತ ಈ ಬಾರಿಯ ಒಲಿಂಪಿಕ್ಸ್‌ನ ಪೂಲ್ ಹಂತದ ಪಂದ್ಯದಿಂದಲೂ ಅತ್ಯುತ್ತಮ ಪ್ರದರ್ಶನ ನೀಡಿಕೊಂಡು ಬಂದಿದೆ. ಇದರಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಮಾತ್ರ ಭಾರತದ ಭಾರತದ ಲೆಕ್ಕಾಚಾರ ತಪ್ಪಿತ್ತು. 1-7 ಅಂತರದಿಂದ ಆಸ್ಟ್ರೇಲಿಯಾಗೆ ಭಾರತ ಶರಣಾಗಿತ್ತು. ಇದನ್ನು ಹೊರತುಪಡಿಸಿದರೆ ಭಾರತ ತಂಡದ ಪ್ರದರ್ಶನ ಅತ್ಯುತ್ತಮವಾಗಿದೆ. ಈಗ ಕ್ವಾರ್ಟರ್‌ಫೈನಲ್‌ನಲ್ಲಿಯೂ ಗೆಲುವು ಸಾಧಿಸಿರುವ ಭಾರತ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ

Story first published: Monday, August 2, 2021, 10:02 [IST]
Other articles published on Aug 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X