ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಹಾಕಿ ವಿಶ್ವಕಪ್: ರೋಚಕ ಪಂದ್ಯದಲ್ಲಿ ಸ್ಪೇನ್ ಸೋಲಿಸಿದ ಅರ್ಜೆಂಟೀನಾ

Hockey World Cup 2018: Argentina beats Spain in a seven-goal thriller

ಭುವನೇಶ್ವರ್, ನವೆಂಬರ್ 29: ಭುವನೇಶ್ವರ್‌ನ ಕಳಿಂಗ ಸ್ಟೇಡಿಯಂನಲ್ಲಿ ಗುರುವಾರ (ನವೆಂಬರ್ 29) ನಡೆದ ಪುರುಷರ ಹಾಕಿ ವಿಶ್ವಕಪ್ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಅರ್ಜೆಂಟೀನಾ ತಂಡ 4-3ರಿಂದ ಗೆಲುವು ದಾಖಲಿಸಿದೆ. ರೋಚಕ ಹಂತಕ್ಕೆ ತಲುಪಿದ್ದ ಪಂದ್ಯ ಡ್ರಾ ಆಗುವ ನಿರೀಕ್ಷೆಯಿತ್ತು. ಆದರೆ ಅರ್ಜೆಂಟೀನಾ ಕೊನೆಗೂ ಮೇಲುಗೈ ಸಾಧಿಸಿತು.

ಹಾಕಿ ವಿಶ್ವಕಪ್ 2018: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯಹಾಕಿ ವಿಶ್ವಕಪ್ 2018: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ವಿಶ್ವ ನಂ. 2ನೇ ಶ್ರೇಯಾಂಕಿತ ಅರ್ಜೆಂಟೀನಾ ಪಂದ್ಯದ ಆರಂಭದಿಂದಲೂ ಭರ್ಜರಿ ಆಟ ಪ್ರದರ್ಶಿಸಿತು. ಆದರೆ ವಿಶ್ವ 8ನೇ ಶ್ರೇಯಾಂಕಿತ ತಂಡ ಸ್ಪೇನ್ ಕೂಡ ಅಷ್ಟೇ ಪೈಪೋಟಿ ನೀಡಿ ಗಮನ ಸೆಳೆಯಿತು. ಮೊದಲು ಗೋಲ್ ಖಾತೆ ತೆರೆದಿದ್ದು, ಸ್ಪೇನ್. ಸ್ಪೇನ್ ನ ಎನ್ರಿಕೆ ಗೊನ್ಜಾಲೆಜ್ 3ನೇ ನಿಮಿಷದಲ್ಲಿ ಗೋಲ್ ಬಾರಿಸಿದರು.

'ತಂಡದಿಂದ ತಾನಾಗಿ ಹೊರ ನಡೆಯಲು ರಾಹುಲ್ ದಾರಿ ಹುಡುಕುತ್ತಿದ್ದಾರೆ!''ತಂಡದಿಂದ ತಾನಾಗಿ ಹೊರ ನಡೆಯಲು ರಾಹುಲ್ ದಾರಿ ಹುಡುಕುತ್ತಿದ್ದಾರೆ!'

ಅದಾಗಿ 4ನೇ ನಿಮಿಷದಲ್ಲಿ ಅರ್ಜೆಂಟೀನಾದ ಲಾಸ್ ಲಿಯೋನ್ಸ್ ಗೋಲ್ ದಾಖಲಿಸಿ ಅಂಕವನ್ನು 1-1ಕ್ಕೆ ಸರಿದೂಗಿಸಿದರು. ಸ್ಪೇನ್ ನ ಜೋಸೆಪ್ ರೋಮುಯು 14ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟರು. ಅದಾಗಿ ಕೇವಲ 45 ಸೆಕೆಂಡ್ ಗಳಲ್ಲೇ ಅಂದರೆ 15ನೇ ನಿಮಿದಲ್ಲಿ ಅರ್ಜೆಂಟೀನಾದ ಅಗಸ್ಟಿನ್ ಮಝಿಲ್ಲಿ ಮತ್ತೆ ಅಂಕವನ್ನು 2-2ಕ್ಕೆ ಸರಿದೂಗಿಸಿದರು.

ಮೊದಲ ಕ್ವಾರ್ಟರ್ ಮುಕ್ತಾಯಕ್ಕೂ ಮುನ್ನ ಅಂದರೆ 15ನೇ ನಿಮಿಷದಲ್ಲೇ ಅರ್ಜೆಂಟೀನಾ 3ನೇ ಗೋಲ್ ಬಾರಿಸಿತು. ಪಂದ್ಯದ ಪ್ರಥಮಾರ್ಧ ಮುಗಿಯುವಾಗ ಅರ್ಜೆಂಟೀನಾ 3-2ರ ಮುನ್ನಡೆಯಲ್ಲಿತ್ತು. 35ನೇ ನಿಮಿಷದಲ್ಲಿ ಸ್ಪೇನ್ ಗೋಲ್ ಬಾರಿಸಿತು. ಮತ್ತೆ 49ನೇ ನಿಮಿಷದಲ್ಲಿ ಅರ್ಜೆಂಟೀನಾ ಗೋಲ್ ಸಿಡಿಸಿ ಗೆಲುವು ತನ್ನದಾಗಿಸಿಕೊಂಡಿತು.

Story first published: Thursday, November 29, 2018, 20:47 [IST]
Other articles published on Nov 29, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X