ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಹಾಕಿ ವಿಶ್ವಕಪ್: ಕೆನಡಾ ವಿರುದ್ಧ ಭರ್ಜರಿ ಜಯ, ಭಾರತ ಕ್ವಾರ್ಟರ್‌ ಫೈನಲ್‌ಗೆ

Hockey World Cup 2018: India beat Canada by 5-1

ಭುವನೇಶ್ವರ್, ಡಿಸೆಂಬರ್ 8: ಭುವನೇಶ್ವರ್‌ನ ಕಳಿಂಗ ಅಂತಾರಾಷ್ಟ್ರೀಯ ಹಾಕಿ ಸ್ಟೇಡಿಯಂನಲ್ಲಿ ಶನಿವಾರ (ಡಿಸೆಂಬರ್ 8) ನಡೆದ ಪುರುಷರ ಹಾಕಿ ವಿಶ್ವಕಪ್ ಪಂದ್ಯದಲ್ಲಿ ಕೆನಡಾ ವಿರುದ್ಧ ಭಾರತ 5-1 ಅಂತರದ ಗೆಲುವನ್ನಾಚರಿಸಿದೆ. ಈ ಮೂಲಕ ಭಾರತ ಕ್ವಾರ್ಟರ್ ಫೈನಲ್‌ಗೆ ನೇರ ಪ್ರವೇಶ ಗಿಟ್ಟಿಸಿಕೊಂಡಿದೆ.

ಹಾಕಿ ವಿಶ್ವಕಪ್ 2018 ಮುಖಪುಟ (ಪಾಯಿಂಟ್ ಟೇಬಲ್‌ ಸೇರಿ ಹೆಚ್ಚಿನ ಮಾಹಿತಿಗಳು ಇಲ್ಲಿವೆ)

ಪೂಲ್‌ 'ಸಿ'ಯಲ್ಲಿರುವ ಇತ್ತಂಡಗಳ ಈ ಕುತೂಹಲಕಾರಿ ಕದನದಲ್ಲಿ ಭಾರತವೇ ಮೊದಲು ಗೋಲ್ ಖಾತೆ ತೆರೆಯಿತು. ಭಾರತದ ಹರ್ಮನ್‌ಪ್ರೀತ್‌ ಸಿಂಗ್‌ ಅವರು 12ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡಕ್ಕೆ 1-0ಯ ಮುನ್ನಡೆ ಕೊಟ್ಟರು. ಪಂದ್ಯದ ಪ್ರಥಮಾರ್ಧದಲ್ಲಿ ಮತ್ತೆ ಗೋಲ್ ದಾಖಲಾಗಲಿಲ್ಲ.

ಭಾರತ vs ಆಸ್ಟ್ರೇಲಿಯಾ ಟೆಸ್ಟ್: ಧೋನಿ ದಾಖಲೆ ಸರಿದೂಗಿಸಿದ ರಿಷಬ್ ಪಂತ್!ಭಾರತ vs ಆಸ್ಟ್ರೇಲಿಯಾ ಟೆಸ್ಟ್: ಧೋನಿ ದಾಖಲೆ ಸರಿದೂಗಿಸಿದ ರಿಷಬ್ ಪಂತ್!

ಆದರೆ ಗೋಲ್ ಗಾಗಿ ಪ್ರಬಲ ಸೆಣಸಾಟ ನಡೆಸಿದ ಕೆನಡಾ ತೃತೀಯ ಕ್ವಾರ್ಟರ್ ನಲ್ಲಿ ಗೋಲ್‌ ಬಾರಿಸಿ ಪಂದ್ಯವನ್ನು ಜಿದ್ದಾಜಿದ್ದಿ ಹಂತಕ್ಕೆ ತಂದಿತು. 39ನೇ ನಿಮಿಷದಲ್ಲಿ ಕೆನಡಾದ ಫ್ಲೋರಿಸ್ ವ್ಯಾನ್ ಸನ್ ಅವರು ಗೋಲ್ ಬಾರಿಸಿ ಅಂತರವನ್ನು 1-1ಕ್ಕೆ ಸರಿದೂಗಿಸಿದರು.

ಅಂತಿಮ ಕ್ವಾರ್ಟರ್ನಲ್ಲಿ ಭಾರತ ತೀವ್ರ ದಾಳಿಯಾತ್ಮಕ ಆಟವನ್ನು ಶುರುಮಾಡಿರು. ಇದರ ಫಲವಾಗಿ 46ನೇ ನಿಮಿಷದಲ್ಲಿ ಭಾರತದ ಚಿಂಗ್ಲೆನ್ಸನಾ ಸಿಂಗ್ ಅವರಿಂದ ಗೋಲ್ ಸಿಡಿಯಿತು. ಅದಾಗಿ ಮರುಕ್ಷಣದಲ್ಲಿ ಅಂದರೆ 47ನೇ ನಿಮಿಷದಲ್ಲಿ ಲಲಿತ್ ಉಪಧ್ಯಾಯವರಿಂದ 3ನೇ ಗೋಲ್ ದಾಖಲಾಯಿತು.

ಔಟಾಗದೆ ಅಚ್ಚರಿ ರೀತಿಯಲ್ಲಿ ಬಚಾವಾಗಿದ್ದ ಪ್ಯಾಟ್ ಕಮಿನ್ಸ್: ವೈರಲ್ ವಿಡಿಯೋಔಟಾಗದೆ ಅಚ್ಚರಿ ರೀತಿಯಲ್ಲಿ ಬಚಾವಾಗಿದ್ದ ಪ್ಯಾಟ್ ಕಮಿನ್ಸ್: ವೈರಲ್ ವಿಡಿಯೋ

ಅಷ್ಟಕ್ಕೇ ಗೋಲ್ ಮಳೆ ನಿಲ್ಲಲಿಲ್ಲ. 51ನೇ ನಿಮಿಷದಲ್ಲಿ ಭಾರತದ ರೋಹಿದಾಸ್ ಅವರು 4ನೇ ಗೋಲ್, 57ನೇ ನಿಮಿಷದಲ್ಲಿ ಲಲಿತ್ ಉಪಧ್ಯಾಯ 5ನೇ ಗೋಲ್ ಬಾರಿಸಿ ತಂಡಕ್ಕೆ ಭರ್ಜರಿ ಮುನ್ನಡೆ ಕೊಟ್ಟರು. ವಿಶ್ವ ರ್ಯಾಂಕಿಂಗ್‌ನಲ್ಲಿ 11ನೇ ಸ್ಥಾನದಲ್ಲಿರುವ ಕೆನಡಾ ವಿರುದ್ಧ ವಿಶ್ವ 5ನೇ ಶ್ರೇಯಾಂಕಿತ ಭಾರತ ಸುಲಭ ಜಯ ಸಾಧಿಸಿತು.

Story first published: Saturday, December 8, 2018, 20:57 [IST]
Other articles published on Dec 8, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X