ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಮಹಿಳಾ ಹಾಕಿ: ಭಾರತ ತಂಡಕ್ಕೆ ದಕ್ಷಿಣ ಕೊರಿಯಾ ವಿರುದ್ಧ ಜಯ

India eves beat South Korea 2-1 in tour opener

ಜಿನ್‌ಚೆಯೊನ್‌, ಮೇ 20: ಭಾರತ ಮಹಿಳಾ ಹಾಕಿ ತಂಡ ದಕ್ಷಿಣ ಕೊರಿಯಾ ಪ್ರವಾಸದಲ್ಲಿ ಶುಭಾರಂಭ ಮಾಡಿದ್ದು, ಸೋಮವಾರ ನಡೆದ ಮೂರು ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಹಣಾಹಣಿಯಲ್ಲಿ 2-1 ಗೋಲ್‌ಗಳ ಭರ್ಜರಿ ಜಯ ದಾಖಲಿಸಿದೆ.

ಇಂಗ್ಲೆಂಡ್‌ ವಿಶ್ವಕಪ್‌ ತಂಡದ ಬಗ್ಗೆ ಕ್ಯಾಪ್ಟನ್‌ ಮಾರ್ಗನ್‌ ಹೇಳಿದ್ದೇನು?ಇಂಗ್ಲೆಂಡ್‌ ವಿಶ್ವಕಪ್‌ ತಂಡದ ಬಗ್ಗೆ ಕ್ಯಾಪ್ಟನ್‌ ಮಾರ್ಗನ್‌ ಹೇಳಿದ್ದೇನು?

ಮಿಂಚಿನ ಆಟವಾಡಿದ ಭಾರತ ತಂಡದ ಪರ ಲಾಲ್ರೆಮ್ಸಿಯಾಮಿ (20ನೇ ನಿ.) ಮತ್ತು ಕವನೀತ್‌ ಕೌರ್‌ (40ನೇ ನಿ) ಚೆಂಡನ್ನು ಗೋಲ್‌ ಪೆಟ್ಟಿಗೆ ಸೇರಿಸುವಲ್ಲಿ ಯಶಸ್ವಿಯಾಗಿ ಗೆಲುವಿನ ರೂವಾರಿಗಳಾದರು. ಆತಿಥೇಯ ಕೊರಿಯಾ ತಂಡದ ಪರ ಶಿನ್‌ ಹೇಜೆಯಾಂಗ್‌ (48ನೇ ನಿ.) ಅಂತಿಮ ಕ್ವಾರ್ಟರ್‌ನಲ್ಲಿ ಗೋಲ್‌ ದಾಖಲಿಸುವ ಮೂಲಕ ಸೋಲಿನ ಅಂತರವನ್ನು ಕೊಂಚ ತಗ್ಗಿಸುವಷ್ಟಕ್ಕೆ ಶಕ್ತರಾದರು.

ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ಗಳುವಿಶ್ವಕಪ್‌ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ಗಳು

ಇತ್ತೀಚೆಗಷ್ಟೇ ಸ್ಪೇನ್‌ ಮತ್ತು ಮಲೇಷ್ಯಾದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಭಾರತ ಮಹಿಳಾ ತಂಡ, ಕೊರಿಯಾ ಪ್ರವಾಸದಲ್ಲೂ ಅಂಥದ್ದೇ ಪ್ರದರ್ಶನ ನೀಡಿ ಶುಭಾರಂಭ ಮಾಡಿದೆ. ಪಂದ್ಯದಲ್ಲಿ ಭಾರತ ತಂಡಕ್ಕೆ ಗೋಲ್‌ಗಳ ಅಂತರವನ್ನು ಮತ್ತಷ್ಟು ಹೆಚ್ಚಿಸುವ ಅವಕಾಶಗಳಿತ್ತಾದರೂ ಅದೃಷ್ಠ ಕೈ ಹಿಡಿಯಲಿಲ್ಲ. ಮೊದಲ ಕ್ವಾರ್ಟರ್‌ನಲ್ಲೇ ಸಿಕ್ಕ ಪೆನಾಲ್ಟಿ ಕಾರ್ನರ್‌ನಲ್ಲಿ ಭಾರತ ತಂಡ ಗೋಲ್‌ ದಾಖಲಿಸುವಲ್ಲಿ ವಿಫಲವಾಯಿತು.

ವಿಶ್ವಕಪ್‌ನಲ್ಲಿ ಆರ್ಭಟಿಸಬಲ್ಲ TOP 5 ಆಲ್‌ರೌಂಡರ್‌ಗಳಿವರು!ವಿಶ್ವಕಪ್‌ನಲ್ಲಿ ಆರ್ಭಟಿಸಬಲ್ಲ TOP 5 ಆಲ್‌ರೌಂಡರ್‌ಗಳಿವರು!

ಆದರೆ, ತಂಡಕ್ಕೆ ಮೊದಲ ಯಶಸ್ಸಿನ ಸಿಂಚನ ಲಭ್ಯವಾಗುವುದಕ್ಕೆ ಹೆಚ್ಚು ಸಮಯ ಬೇಕಾಗಲಿಲ್ಲ. 20ನೇ ನಿಮಷದಲ್ಲಿ ಲಾಲ್ರೆಮ್ಸಿಯಾಮಿ ಆಕರ್ಷಕ ಫೀಲ್ಡ್‌ಗೋಲ್‌ನೊಂದಿಗೆ 1-0 ಅಂತರದ ಮುನ್ನಡೆ ತಂದುಕೊಟ್ಟರು. ಬಳಿಕ 40ನೇ ನಿಮಿಷದಲ್ಲಿ ಮುನ್ನುಗ್ಗಿ ಆಟವಾಡಿದ ನವನೀತ್‌ ತಂಡದ ಮುನ್ನಡೆಯನ್ನು 2-0 ಅಂತರಕ್ಕೆ ವಿಸ್ತರಿಸಿದರು. ಆದರೆ, ಪಂದ್ಯದಲ್ಲಿ ಒಟ್ಟು 5 ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಭಾರತ ಕೈಚೆಲ್ಲಿತು.

World Cupನಲ್ಲಿ ಅಬ್ಬರಿಸಬಲ್ಲ Top 10 ಬ್ಯಾಟ್ಸ್‌ಮನ್‌ಗಳಿವರು!World Cupನಲ್ಲಿ ಅಬ್ಬರಿಸಬಲ್ಲ Top 10 ಬ್ಯಾಟ್ಸ್‌ಮನ್‌ಗಳಿವರು!

"ಫಲಿತಾಂಶ ಉತ್ತಮವಾಗಿದೆ. ಆದರೂ, ಆಟಗಾರ್ತಿಯರ ಪ್ರದರ್ಶನ ಮತ್ತಷ್ಟು ಉತ್ತಮವಾಗಬೇಕಿದೆ. ಈ ಪಂದ್ಯದಲ್ಲಿ ಹಲವು ಹೊಸ ಸಂಗತಿಗಳ ಪ್ರಯೋಗ ನಡೆಸಿದೆವು. ತಂಡ ಇದನ್ನು ಹೇಗೆ ನಿಭಾಯಿಸಿರು ಎಂಬುದು ಇಲ್ಲಿ ಪ್ರಮುಖವಾಗಿತ್ತು. ನಮ್ಮ ತಾಂತ್ರಿಕ ಗುಣಮಟ್ಟವನ್ನು ಮತ್ತಷ್ಟು ಸುಧಾರಿಸಿಕೊಳ್ಳಲಬೇಕಿದೆ. ಮುಂದಿನ ಪಂದ್ಯದಲ್ಲಿ ಇದನ್ನು ಕಂಡುಕೊಳ್ಳುವುದು ನಮ್ಮ ಮೊದಲ ಆದ್ಯತೆ ಆಗಿರಲಿದೆ,'' ಎಂದು ಪಂದ್ಯದ ಬಳಿಕ ಮಾತನಾಡಿದ ಭಾರತ ತಂಡದ ಕೋಚ್‌ ಸೋರ್ಡ್‌ ಮರಿಜಿನ್‌ ಹೇಳಿದ್ದಾರೆ.

ಭಾರತ ತಂಡ ಮೇ 22ರಂದು (ಬುಧವಾರ) ದಕ್ಷಿಣ ಕೊರಿಯಾ ವಿರುದ್ಧ ಎರಡನೇ ಪಂದ್ಯವನ್ನಾಡಲಿದೆ.

Story first published: Monday, May 20, 2019, 18:33 [IST]
Other articles published on May 20, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X