ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಭಾರತದ ಹಾಕಿ ದಿಗ್ಗಜ ಒಲಿಂಪಿಕ್ಸ್ ಪದಕ ವಿಜೇತ ಮೈಕಲ್ ಕಿಂಡೋ ನಿಧನ

India hockey great Michael Kindo dies at 73

ಭಾರತೀಯ ಹಾಕಿಯ ದಿಗ್ಗಜ ಆಟಗಾರ ಮೈಕಲ್ ಕಿಂಡೋ ಡಿಸೆಂಬರ್ 31ರಂದು ನಿಧನರಾಗಿದ್ದಾರೆ. ಒಡಿಶಾದ ರೌರ್ಕೆಲಾದಲ್ಲಿ ದೀರ್ಘ ಕಾಲದ ಅನಾರೋಗ್ಯದ ಹಿನ್ನೆಲೆಯಲ್ಲಿ ಮೂಕಲ್ ಕಿಂಡೋ ನಿಧನರಾಗಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು.

ಕಿಂಡೋ 1972ರಲ್ಲಿ ಮ್ಯೂನಿಚ್‌ನಲ್ಲಿ ನಡೆದ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಭಾರತೀಯ ಹಾಕಿ ತಂಡದ ಸದಸ್ಯರಾಗಿದ್ದರು. ಇದಲ್ಲದೆ 1975ರಲ್ಲಿ ಮಲೇಶಿಯಾದ ಕೌಲಲಾಂಪುರದಲ್ಲಿ ನಡೆದ ಹಾಕಿ ವಿಶ್ವಕಪ್‌ನಲ್ಲೂ ಭಾಗಿಯಾಗುವ ಮೂಲಕ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದಾರೆ ಮೈಕಲ್ ಕಿಂಡೋ. ಪಾಕಿಸ್ತಾನ ತಂಡವನ್ನು ಫೈನಲ್ ತಂಡದಲ್ಲಿ ಮಣಿಸಿ ಭಾರತ ವಿರ್ಶವಕಪ್ ಗೆದ್ದು ಬೀಗಿತ್ತು.

ಟೆಸ್ಟ್ ರ‍್ಯಾಂಕಿಂಗ್: ಆರನೇ ಸ್ಥಾನಕ್ಕೆ ಜಿಗಿದ ಅಜಿಂಕ್ಯ ರಹಾನೆ, 7ಸ್ಥಾನಕ್ಕೇರಿದ ಅಶ್ವಿನ್ಟೆಸ್ಟ್ ರ‍್ಯಾಂಕಿಂಗ್: ಆರನೇ ಸ್ಥಾನಕ್ಕೆ ಜಿಗಿದ ಅಜಿಂಕ್ಯ ರಹಾನೆ, 7ಸ್ಥಾನಕ್ಕೇರಿದ ಅಶ್ವಿನ್

ಮೈಕಲ್ ಕಿಂಡೋ ಅವರು ದೀರ್ಘ ಕಾಲದಿಂದ ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದರು ಎಂಬ ವಿಚಾರವನ್ನು ತಿಳಿಸಿದ್ದಾರೆ. ಗುರುವಾರ ಮಧ್ಯಾಹ್ನ 3:30ರ ವೇಳೆಗೆ ಅವರು ಕೊನೆಯುಸಿರು ಎಳೆದಿದ್ದಾರೆ. ಮೈಕಲ್ ಕಿಂಡೋ ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಹಾಕಿ ಇಂಡಿಯಾ ಹಾಗೂ ಒಡಿಶಾ ಕ್ರೀಡಾ ಸಚಿವಾಲಯ ಮೈಕಲ್ ಕಿಂಡೋ ಅವರ ನಿಧನಕ್ಕೆ ಸಂತಾಪವನ್ನು ಸೂಚಿಸಿದೆ. ಭಾರತೀಯ ಧ್ವಜವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಾಡುವಂತೆ ಮಾಡಿದ ಕ್ರೀಡಾಪಟುವಿಗೆ ಈ ಮೂಲಕ ಗೌರವವನ್ನು ಸೂಚಿಸಲಾಗಿದೆ.

Story first published: Friday, January 1, 2021, 9:56 [IST]
Other articles published on Jan 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X