ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

FIH ಹಾಕಿ ಸೀರೀಸ್‌ ಫೈನಲ್ಸ್‌ ಟೂರ್ನಿ: ಪ್ರಶಸ್ತಿ ಸುತ್ತಿಗೆ ಭಾರತ ಲಗ್ಗೆ

India thrash Japan 7-2 to enter FIH Series final

ಭುವನೇಶ್ವರ್‌, ಜೂನ್‌ 14: ಏಷ್ಯನ್‌ ಗೇಮ್ಸ್‌ ಚಾಂಪಿಯನ್ಸ್‌ ಜಪಾನ್‌ ವಿರುದ್ಧ ಸೇಡು ತೀರಿಸಿಕೊಂಡ ಭಾರತ ತಂಡ, ಇಲ್ಲಿ ನಡೆದ ಎಫ್‌ಐಎಚ್‌ ಸೀರೀಸ್‌ ಫೈನಲ್ಸ್‌ ಟೂರ್ನಿಯ ಸೆಮಿಫೈನಲ್ಸ್‌ ಪಂದ್ಯದಲ್ಲಿ 7-2 ಗೋಲ್‌ಗಳ ಭರ್ಜರಿ ಜಯ ದಾಖಲಿಸುವ ಮೂಲಕ ಪ್ರಶಸ್ತಿ ಸುತ್ತಿಗೆ ದಾಪುಗಾಲಿಟ್ಟಿದೆ. ಈ ಮೂಲಕ 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆಡುವುದನ್ನು ಬಹುತೇಕ ಖಾತ್ರಿ ಪಡಿಸಿಕೊಂಡಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಗಾಯದ ಸಮಸ್ಯೆಗೆ ಸುದೀರ್ಘಾವಧಿಯ ವಿರಾಮದ ನಂತರ ತಂಡಕ್ಕೆ ಮರಳಿರುವ ಅನುಭವಿ ಆಟಗಾರ ರಮಣ್‌ದೀಪ್‌ ಸಿಂಗ್‌ (23 ಮತ್ತು 37ನೇ ನಿ.) ಭಾರತದ ಪರ ಎರಡು ಗೋಲ್‌ಗಳನ್ನು ದಾಖಲಿಸಿ ಮಿಂಚಿದರೆ, ಹರ್ಮನ್‌ಪ್ರೀತ್‌ ಸಿಂಗ್‌ (7ನೇ ನಿ.), ವರುಣ್‌ ಕುಮಾರ್ (14ನೇ ನಿ.), ಹಾರ್ದಿಕ್‌ ಸಿಂಗ್‌ (25ನೇ ನಿ.), ಗುರುಸಾಹಿಬ್ಜಿತ್‌ ಸಿಂಗ್‌ (43ನೇ ನಿ.) ಮತ್ತು ವಿವೇಕ್‌ ಸಾಗರ್‌ ಪ್ರಸಾದ್‌ (47ನೇ ನಿ.) ಚೆಂಡನ್ನು ಗೋಲ್‌ ಪೆಟ್ಟಿಗೆ ಸೇರಿಸಿ ಭರ್ಜರಿ ಗೆಲುವಿನ ರೂವಾರಿಗಳಾದರು.

ಮತ್ತೊಂದೆಡೆ ಭಾರತದ ಅಬ್ಬರದ ಎದುರು ಕಕ್ಕಾಬಿಕ್ಕಿಯಾದ ಜಪಾನ್‌ ತಂಡದ ಪರ ಕೆಂಜಿ ಜಿಟಾಝಾಟೊ (2ನೇ ನಿ.) ಮತ್ತು ಕೊಟಾ ವತನಾಬೆ (20ನೇ ನಿ.) ಗೋಲ್‌ ಗಳಿಸುವ ಮೂಲಕ ಸೋಲಿನ ಅಂತರವನ್ನಷ್ಟೇ ತಗ್ಗಿಸಿದರು.

ಕ್ರಿಕೆಟ್‌ನಲ್ಲಿ ಬಳಸಲಾಗುವ ಬೇಲ್ಸ್‌ ಬಗ್ಗೆ ನಿಮಗೆಷ್ಟು ತಿಳಿದಿದೆ?ಕ್ರಿಕೆಟ್‌ನಲ್ಲಿ ಬಳಸಲಾಗುವ ಬೇಲ್ಸ್‌ ಬಗ್ಗೆ ನಿಮಗೆಷ್ಟು ತಿಳಿದಿದೆ?

ಇದೀಗ ಪ್ರಶಸ್ತಿ ಸುತ್ತಿನಲ್ಲಿ ಭಾರತ ತಂಡ ಅಪಾಯಕಾರಿ ದಕ್ಷಿಣ ಆಫ್ರಿಕಾ ವಿರುದ್ಧ ಶನಿವಾರ ಪೈಪೋಟಿ ನಡೆಸಲಿದೆ. ದಕ್ಷಿಣ ಆಫ್ರಿಕಾ ತಂಡ ಮತ್ತೊಂದು ಸೆಮಿಫೈನಲ್ಸ್‌ ಹಣಾಹಣಿಯಲ್ಲಿ ಅಮೆರಿಕ ವಿರುದ್ಧ 2-1 ಗೋಲ್‌ಗಳ ರೋಚಕ ಜಯ ದಾಖಲಿಸಿ ಫೈನಲ್‌ ಪ್ರವೇಶಿಸಿದೆ. ಶನಿವಾರ ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಜಪಾನ್‌ ತಂಡ ಅಮೆರಿಕಾ ವಿರುದ್ಧ ಮೂರನೇ ಸ್ಥಾನಕ್ಕಾಗಿ ಪೈಪೋಟಿ ನಡೆಸಲಿದೆ.

ಎಫ್‌ಐಎಚ್‌ ಸೀರೀಸ್‌ ಫೈನಲ್ಸ್‌ ಟೂರ್ನಿಯು ಮುಂಬರುವ ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿ ನಡೆಯಲಿರುವ ಒಲಿಂಪಿಕ್‌ ಕ್ವಾಲಿಫೈಯರ್ಸ್‌ ಟೂರ್ನಿಗೆ ಎರಡು ಸ್ಥಾನಗಳನ್ನು ಒದಗಿಸುತ್ತದೆ.

Story first published: Sunday, June 16, 2019, 11:15 [IST]
Other articles published on Jun 16, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X