ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಹಾಕಿ ಏಷ್ಯಾ ಕಪ್ 2022: ಪ್ರಥಮ ಪಂದ್ಯದಲ್ಲೇ ಭಾರತ - ಪಾಕ್ ಮುಖಾಮುಖಿ; ಇಲ್ಲಿದೆ ವೇಳಾಪಟ್ಟಿ

India to open Asia Cup men’s hockey campaign against Pakistan on May 23

ಹಾಕಿ ಏಷ್ಯಾ ಕಪ್‌ನ ಹನ್ನೊಂದನೇ ಆವೃತ್ತಿ ಇದೇ ತಿಂಗಳ 23ರಿಂದ ಇಂಡೋನೇಷಿಯಾದಲ್ಲಿ ಆರಂಭವಾಗಲಿದ್ದು, ಟೂರ್ನಿಯ ಪ್ರಥಮ ಪಂದ್ಯದಲ್ಲಿಯೇ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಕಿ ತಂಡ ಮತ್ತು ಪಾಕಿಸ್ತಾನ ಹಾಕಿ ತಂಡಗಳು ಸೆಣಸಾಟ ನಡೆಸಲಿವೆ. ಇನ್ನು ಈ ಹಾಕಿ ಏಷ್ಯಾ ಕಪ್ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸುತ್ತಿದ್ದು, ಗ್ರೂಪ್ ಎ ಮತ್ತು ಗ್ರೂಪ್ ಬಿ ಎಂದು ಎರಡು ಗುಂಪುಗಳನ್ನು ಮಾಡಿ ಗುಂಪೊಂದರಲ್ಲಿ ನಾಲ್ಕು ತಂಡಗಳನ್ನು ಸೇರಿಸಲಾಗಿದೆ.

ಇನ್ನು ಗ್ರೂಪ್ ಎನಲ್ಲಿ ಭಾರತ, ಪಾಕಿಸ್ತಾನ, ಜಪಾನ್ ಮತ್ತು ಇಂಡೋನೇಷಿಯಾ ತಂಡಗಳಿದ್ದರೆ, ಗ್ರೂಪ್ ಬಿನಲ್ಲಿ ಮಲೇಷ್ಯಾ, ಕೊರಿಯಾ, ಒಮನ್ ಮತ್ತು ಬಾಂಗ್ಲಾದೇಶ ತಂಡಗಳಿವೆ. ಇನ್ನು ಒಂದೇ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿರುವ ಭಾರತ ಮತ್ತು ಪಾಕಿಸ್ತಾನ ಮೇ 23ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಸೆಣಸಾಟ ನಡೆಸಲಿದ್ದು, ಎರಡೂ ತಂಡಗಳೂ ಸೆಮಿಫೈನಲ್ ಹಂತ ತಲುಪಿದರೆ ಮತ್ತೊಮ್ಮೆ ಮುಖಾಮುಖಿಯಾಗಲಿವೆ.

ಚೆನ್ನೈಗೆ ಮಣ್ಣುಮುಕ್ಕಿಸಿದ ಆರ್‌ಸಿಬಿ ಪ್ಲೇಆಫ್ ಪ್ರವೇಶಿಸಲು ಇನ್ನೂ ಇಷ್ಟು ಪಂದ್ಯಗಳಲ್ಲಿ ಗೆಲ್ಲಲೇಬೇಕು!ಚೆನ್ನೈಗೆ ಮಣ್ಣುಮುಕ್ಕಿಸಿದ ಆರ್‌ಸಿಬಿ ಪ್ಲೇಆಫ್ ಪ್ರವೇಶಿಸಲು ಇನ್ನೂ ಇಷ್ಟು ಪಂದ್ಯಗಳಲ್ಲಿ ಗೆಲ್ಲಲೇಬೇಕು!

ಇನ್ನು ಈ ಎರಡು ಗುಂಪುಗಳಲ್ಲಿ ಟಾಪ್ ಎರಡು ಸ್ಥಾನಗಳನ್ನು ಪಡೆದುಕೊಳ್ಳುವ ತಂಡಗಳು ಸೂಪರ್ 4 ಎಂದರೆ ಸೆಮಿಫೈನಲ್ ಸುತ್ತಿಗೆ ಲಗ್ಗೆ ಇಡಲಿವೆ.

ಭಾರತ ಹಾಕಿ ತಂಡದ ವೇಳಾಪಟ್ಟಿ

ಈ ಬಾರಿಯ ಹಾಕಿ ಏಷ್ಯಾ ಕಪ್‌ನಲ್ಲಿ ಎ ಗುಂಪಿನಲ್ಲಿರುವ ಭಾರತ ಪುರುಷರ ಹಾಕಿ ತಂಡ ಯಾವ ತಂಡದ ವಿರುದ್ಧ ಯಾವ ದಿನದಂದು ಸೆಣಸಾಡಲಿದೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

* ಮೇ 23ರಂದು ಪ್ರಥಮ ಪಂದ್ಯ - ಭಾರತ ಹಾಕಿ ತಂಡ vs ಪಾಕಿಸ್ತಾನ ಹಾಕಿ ತಂಡ

* ಮೇ 24ರಂದು ದ್ವಿತೀಯ ಪಂದ್ಯ - ಭಾರತ ಹಾಕಿ ತಂಡ vs ಜಪಾನ್ ಹಾಕಿ ತಂಡ

* ಮೇ 26ರಂದು ತೃತೀಯ ಪಂದ್ಯ - ಭಾರತ ಹಾಕಿ ತಂಡ vs ಇಂಡೋನೇಷ್ಯಾ ಹಾಕಿ ತಂಡ

RCB vs CSK: ಧೋನಿ ಔಟ್ ಆಗಿದ್ದಕ್ಕೆ ಕೊಹ್ಲಿ ಸಂಭ್ರಮಾಚರಣೆ; ವಿಡಿಯೋ ವೈರಲ್RCB vs CSK: ಧೋನಿ ಔಟ್ ಆಗಿದ್ದಕ್ಕೆ ಕೊಹ್ಲಿ ಸಂಭ್ರಮಾಚರಣೆ; ವಿಡಿಯೋ ವೈರಲ್

ಕಳೆದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತ ಪುರುಷರ ಹಾಕಿ ತಂಡ ಈ ಬಾರಿಯ ಹಾಕಿ ಏಷ್ಯಾ ಕಪ್ ಟೂರ್ನಿಯಲ್ಲಿಯೂ ಉತ್ತಮ ಪ್ರದರ್ಶನ ನೀಡುವತ್ತ ಚಿತ್ತ ನೆಟ್ಟಿದ್ದು, ಟ್ರೋಫಿ ಎತ್ತಿ ಹಿಡಿಯುವ ಯೋಜನೆಯಲ್ಲಿದೆ. ಇನ್ನು ಟೂರ್ನಿಯ ಪ್ರಥಮ ಪಂದ್ಯ ಮೇ 23ರಂದು ನಡೆಯಲಿದ್ದು ಫೈನಲ್ ಪಂದ್ಯ ಜೂನ್ 1ರಂದು ನಡೆಯಲಿದೆ. ಹೀಗೆ ಕೇವಲ ಒಂದೇ ವಾರದಲ್ಲಿ ಇಡೀ ಟೂರ್ನಿಯನ್ನು ಮುಗಿಸಲು ಏಷ್ಯಾ ಹಾಕಿ ಫೆಡರೇಶನ್ ತೀರ್ಮಾನಿಸಿದೆ.

Story first published: Friday, May 6, 2022, 11:33 [IST]
Other articles published on May 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X