ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಬರ್ಮಿಂಗ್‌ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಹಾಕಿ ತಂಡಗಳು ಆಡಲ್ಲ!

Indian Hockey Teams Pull Out of 2022 Birmingham Commonwealth Games

ನವದೆಹಲಿ: ಭಾರತೀಯ ಹಾಕಿ ಪುರುಷರ ಮತ್ತು ಮಹಿಳಾ ತಂಡಗಳು ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್ವೆಲ್ತ್‌ ಗೇಮ್ಸ್‌ನಿಂದ ಹಿಂದೆ ಸರಿದಿವೆ. ಕೋವಿಡ್ ಕಾರಣ ಮತ್ತು ಇಂಗ್ಲೆಂಡ್‌ನಲ್ಲಿ ಕೋವಿಡ್ ಕ್ವಾರಂಟೈನ್ ವಿಚಾರದಲ್ಲಿ ಭಾರತೀಯರಿಗೆ ತಾರತಮ್ಯ ಮಾಡಲಾಗುತ್ತದೆ ಎಂಬ ಕಾರಣಕ್ಕೆ ಭಾರತೀಯ ತಂಡಗಳು ಮುಂಬರಲಿರುವ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಆಡದಿರಲು ನಿರ್ಧರಿಸಿವೆ.

ರಾಜಸ್ಥಾನ್ ರಾಯಲ್ಸ್ ಗೆದ್ದರೆ ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್ ಹೊರಕ್ಕೆ!ರಾಜಸ್ಥಾನ್ ರಾಯಲ್ಸ್ ಗೆದ್ದರೆ ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್ ಹೊರಕ್ಕೆ!

ಮುಂದಿನ ತಿಂಗಳು ಒಡಿಶಾದ ಭುವನೇಶ್ವರ್‌ನಲ್ಲಿ ನಡೆಯಲಿರುವ ಇಂಟರ್ ನ್ಯಾಷನಲ್ ಹಾಕಿ ಫೆಡರೇಶನ್ ಪುರುಷರ ಜೂನಿಯರ್ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡ ಆಡದಿರಲು ನಿರ್ಧರಿಸಿತ್ತು. ಏರುತ್ತಿರುವ ಕೋವಿಡ್ ಪ್ರಕರಣಗಳು ಮತ್ತು ಯುಕೆ ರಾಷ್ಟ್ರಗಳಿಗೆ ಕಡ್ಡಾಯ 10 ದಿನಗಳ ಕ್ವಾರಂಟೈನ್ ವಿರೋಧಿಸಿ ಇಂಗ್ಲೆಂಡ್ ವಿಶ್ವಕಪ್‌ನಿಂದ ಹಿಂದೆ ಸರಿದಿತ್ತು.

ಭಾರತ ಕಳೆದ ವಾರ ಯುನೈಟೆಡ್ ಕಿಂಗ್‌ಡಂನಿಂದ ಬರುವ ನಾಗರಿಕರಿಗೆ ತನ್ನ ಪ್ರಯಾಣ ಸಲಹೆಯನ್ನು ಅಪ್‌ಡೇಟ್ ಮಾಡಿತ್ತು. ಯುಕೆ ಯಿಂದ ಭಾರತಕ್ಕೆ ಆಗಮಿಸುವ ಎಲ್ಲಾ ಬ್ರಿಟಿಷ್ ಪ್ರಜೆಗಳು ಸೋಮವಾರದಿಂದ ಕಡ್ಡಾಯವಾಗಿ 10 ದಿನಗಳ ಕ್ವಾರಂಟೈನ್‌ಗೆ ಒಳಪಡಬೇಕು ಎಂದು ಭಾರತ ನಿಯಮ ರೂಪಿಸಿತ್ತು. ಇದು ಇಂಗ್ಲೆಂಡ್‌ಗೆ ಸರಿ ಕಾಣಿಸಿಲ್ಲ.

ಟಿ20 ವಿಶ್ವಕಪ್‌: ಆತಂಕಕ್ಕೆ ಕಾರಣವಾಗಿದೆ ಟೀಮ್ ಇಂಡಿಯಾದ ಈ 5 ಆಟಗಾರರ ಪ್ರದರ್ಶನ!ಟಿ20 ವಿಶ್ವಕಪ್‌: ಆತಂಕಕ್ಕೆ ಕಾರಣವಾಗಿದೆ ಟೀಮ್ ಇಂಡಿಯಾದ ಈ 5 ಆಟಗಾರರ ಪ್ರದರ್ಶನ!

ಇತ್ತೀಚೆಗೆ ಯುನೈಟೆಡ್ ಕಿಂಗ್ಡಮ್ ಭಾರತದ ವ್ಯಾಕ್ಸಿನೇಶನ್ ಸರ್ಟಿಫಿಕೇಟ್ ಅನ್ನು ಪರಿಗಣಿಸುವುದಿಲ್ಲ ಎಂದು ಹೇಳಿತ್ತು. ಎರಡು ಡೋಸ್ ವ್ಯಾಕ್ಸಿನೇಶನ್ ಹಾಕಿಸಿದ್ದರೂ 10 ದಿನಗಳ ಕಡ್ಡಾಯ ಕ್ವಾರಂಟೈನ್ ಅನ್ನು ವಿಧಿಸಿತ್ತು. ಇದೇ ಕಾರಣಕ್ಕೆ ಬೇಸರಗೊಂಡಿರುವ ಭಾರತ ಕಾಮನ್ವೆವೆಲ್ತ್ ಗೇಮ್ಸ್‌ನಲ್ಲಿ ಆಡುವುದಿಲ್ಲವೆಂದು ಹೇಳಿದೆ.

Story first published: Wednesday, October 6, 2021, 10:07 [IST]
Other articles published on Oct 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X