ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಹಾಕಿ: ಭಾರತದ ಮುಂದೆ ಕಠಿಣ ಸವಾಲು: ಒಲಿಂಪಿಕ್ಸ್ ನಂತರ ಏಷ್ಯನ್ ಗೇಮ್ಸ್, ವಿಶ್ವಕಪ್‌ ಮೇಲೆ ಕಣ್ಣು!

Indian mens hockey team is preparing for bigger battles

ಕಳೆದ ವರ್ಷ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಹಾಕಿ ತಂಡ ಅದ್ಭುತ ಪ್ರದರ್ಶನ ನೀಡಿ ಭಾರತೀಯ ಕ್ರೀಡಾಭಿಮಾನಿಗಳ ಗಮನಸೆಳೆದಿತ್ತು. ಕಂಚಿನ ಪದಕ ಗೆಲ್ಲುವ ಮೂಲಕ ಭಾರತ ಹಾಕಿ ತಂಡ 41 ವರ್ಷಗಳ ನಂತರ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಭಾರತೀಯ ಹಾಕಿ ತಂಡದ ಮೇಲೆ ಈಗ ನಿರೀಕ್ಷೆ ಹೆಚ್ಚಿದ್ದು ತಂಡ ಮುಂದಿನ ಎರಡು ದೊಡ್ಡ ಟೂರ್ನಿಗಳಿಗೆ ಭಾರೀ ಸಿದ್ಧತೆಯನ್ನು ನಡೆಸುತ್ತಿದೆ. ಈ ವಿಚಾರವಾಗಿ ಭಾರತೀಯ ಹಾಕಿ ತಂಡದ ಕೋಚ್ ಗ್ರಹಾಮ್ ರೈಡ್ ಪ್ರತಿಕ್ರಿಯೆ ನೀಡಿದ್ದಾರೆ.

ನಮ್ಮ ಸಂಪೂರ್ಣ ಸಾಮರ್ಥ್ಯ ಹೊರಬಂದಿಲ್ಲ: ಆಸ್ಟ್ರೇಲಿಯಾ ಮೂಲದ ಕೋಚ್ ಗ್ರಹಾಮ್ ರೈಡ್ ಭಾರತೀಯ ಹಾಕಿ ತಂಡದ ಪ್ರದರ್ಶನದ ಬಗ್ಗೆ ವಿಶೇಷ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರೂ ತಂಡದ ಪೂರ್ಣ ಪ್ರಮಾಣದ ಸಾಮರ್ಥ್ಯ ಇನ್ನೂ ಕೂಡ ಹೊರ ಬಂದಿಲ್ಲ ಎಂದಿದ್ದಾರೆ ಕೋಚ್ ಗ್ರಹಾಮ್ ರೈಡ್. ಈ ಸಂದರ್ಭದಲ್ಲಿ ಅವರು ಟೋಕಿಯೋದಲ್ಲಿ ಸಾಧಿಸಿರುವ ಯಶಸ್ಸನ್ನು ಮುಂದುವರಿಸಲು ಪೂರಕ ಸಿದ್ಧತೆಗಳನ್ನು ಮಾಡಿಕೊಂಡಿರುವುದಾಗಿಯೂ ತಿಳಿಸಿದ್ದಾರೆ.

IPL 2022: ಗಾರ್ವೇರ್ ಕ್ಲಬ್ ಹೌಸ್‌ಗೆ ಆರ್ಥಿಕ ನಷ್ಟ; ವಾಂಖೆಡೆಯ ಪಂದ್ಯಗಳನ್ನು ಕಡಿತಗೊಳಿಸಲು ಪತ್ರIPL 2022: ಗಾರ್ವೇರ್ ಕ್ಲಬ್ ಹೌಸ್‌ಗೆ ಆರ್ಥಿಕ ನಷ್ಟ; ವಾಂಖೆಡೆಯ ಪಂದ್ಯಗಳನ್ನು ಕಡಿತಗೊಳಿಸಲು ಪತ್ರ

ಭಾರತೀಯ ಹಾಕಿ ತಂಡ ಮುಂದಿನ 12 ತಿಂಗಳಲ್ಲಿ ಎರಡು ದೊಡ್ಡ ವೇದಿಕೆಯಲ್ಲಿ ಸ್ಪರ್ಧಿಸಲಿದೆ. ಮೊದಲಿಗೆ ಏಷ್ಯನ್ ಗೇಮ್ಸ್‌ನಲ್ಲಿ ಸ್ಪರ್ಧಿಸಲಿದ್ದು ಈ ಸಂದರ್ಭದಲ್ಲಿ ತನ್ನ ಸಾಮರ್ಥ್ಯವನ್ನು ಭಾರತೀಯ ಹಾಕಿ ತಂಡ ಪ್ರದರ್ಶಿಸಲಿದೆ. ಅದಾದ ಬಳಿಕ ಮುಂದಿನ ಜನವರಿ ತಿಂಗಳಿನಲ್ಲಿ ಹಾಕಿ ವಿಶ್ವಕಪ್ ಭಾರತದಲ್ಲಿ ನಡೆಯಲಿದ್ದು ಈ ಸ್ಪರ್ಧೆ ತೀವ್ರ ಕುತೂಹಲ ಮೂಡಿಸಿದೆ.

ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವ ಭಾರತ ಹಾಕಿ ತಂಡ ಪ್ರಮುಖ ಸದಸ್ಯರಾಗಿದ್ದ ಮೂವರು ಆಟಗಾರರು ಒಲಿಂಪಿಕ್ಸ್ ಬಳಿಕ ನಿವೃತ್ತರಾಗಿದ್ದಾರೆ. ರೂಪಿಂದರ್ ಪಾಲ್ ಸಿಂಗ್, ಬಿರೇಂದ್ರ ಲಾಕ್ರಾ ಹಾಗೂ ಎಸ್‌ವಿ ಸುನಿಲ್ ಈಗಾಗಲೇ ನಿವೃತ್ತರಾಗಿದ್ದಾರೆ. ಹೀಗಾಗಿ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಹಾಕಿ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಪ್ರಯತ್ನಗಳು ನಡೆಯುತ್ತಿದೆ.

Indian mens hockey team is preparing for bigger battles

ಹಾಕಿ ತಂಡದ ಮಿಡ್‌ಫೀಲ್ಡ್ ವಿಭಾಗ ಕೆಲ ಹೊಸ ಸೇರ್ಪಡೆಯನ್ನು ಹೊಂದಿದ್ದರೂ ಬಹುತೇಕ ಈ ಹಿಂದಿನ ಪಡೆಯನ್ನೇ ಹೊಂದಿದೆ. ಹರ್ಮನ್‌ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ವರುಣ್ ಕುಮಾರ್ ಮತ್ತು ಸುರೇಂದರ್ ಕುಮಾರ್ ರಕ್ಷಣಾ ವಿಭಾಗಕ್ಕೆ ಮೊದಲ ಆದ್ಯತೆಯ ಆಟಗಾರರಾಗಿದ್ದಾರೆ. ಇವರಿಗೆ ಜುಗ್ರಾಜ್ ಸಿಂಗ್, ಜರ್ಮನ್‌ಪ್ರೀತ್ ಸಿಂಗ್, ಮನ್‌ದೀಪ್ ಮೋರ್, ದಿಪ್ಸನ್ ಟಿರ್ಕಿ ಮತ್ತು ನಿಲಮ್ ಸಂಜೀಪ್ ಬೆಂಬಲವಾಗಿದ್ದಾರೆ. ಅಭಿಷೇಕ್, ಶಿಲಾನಂದ್ ಲಾಕ್ರಾ ಮತ್ತು ಸುಖಜೀತ್ ಸಿಂಗ್ ಈ ವಿಭಾಗದ ಹೊಸ ಮುಖಗಳಾಗಿದೆ.

ಪ್ರೋ ಲೀಗ್‌ನಲ್ಲಿ ಉತ್ತಮ ಪ್ರದರ್ಶನ: ಈ ಮದ್ಯೆ ಭಾರತೀಯ ಹಾಕಿ ತಂಡ ಪ್ರಸ್ತುತ ನಡೆಯುತ್ತಿರುವ ಪ್ರೋ ಲೀಗ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡುತ್ತಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಭಾರತೀಯ ಪುರುಷರ ಹಾಕಿ ತಂಡ ಮೂರು ಗೆಲುವು ಹಾಗೂ ಒಂದು ಡ್ರಾ ಸಾಧಿಸಿದೆ. ಹೀಗಾಗಿ 2503.349 ಅಂಕಗಳನ್ನು ಗಳಿಸಿಕೊಂಡಿದ್ದು ನೆದರ್ಲ್ಯಾಂಡ್ಸ್‌ಗಿಂತ ಮೇಲಕ್ಕೇರುವಲ್ಲಿ ಯಶಸ್ವಿಯಾಗಿದೆ. ಶವ್ರೇಯಾಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಭಾರತ ಅಗ್ರ ಶ್ರೇಯಾಂಕದಲ್ಲಿರುವ ಆಸ್ಟ್ರೇಲಿಯಾ ಹಾಗೂ ಬೆಲ್ಜಿಯಂಗಿಂತ ಮಾತ್ರವೇ ಹಿಂದಿದೆ.

ಕೊಹ್ಲಿ ಇರುವುದರಿಂದ ಈ ಪ್ರತಿಭಾವಂತ ಆಟಗಾರನಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗುತ್ತಿಲ್ಲ ಎಂದ ಸ್ಟೇನ್!ಕೊಹ್ಲಿ ಇರುವುದರಿಂದ ಈ ಪ್ರತಿಭಾವಂತ ಆಟಗಾರನಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗುತ್ತಿಲ್ಲ ಎಂದ ಸ್ಟೇನ್!

ಏಷ್ಯನ್ ಗೇಮ್ಸ್‌ನಲ್ಲಿದೆ ಸವಾಲು: ಮುಂದಿನ ಸೆಪ್ಟೆಂಬರ್ ತಿಂಗಳಿನಲ್ಲಿ ಏಷ್ಯನ್ ಗೇಮ್ಸ್ ನಡೆಯಲಿದ್ದು ಈ ಟೂರ್ನಿ ಭಾರತೀಯ ಹಾಕಿ ತಂಡಕ್ಕೆ ಕಠಿಣ ಸವಾಲೊಡ್ಡುವದರಲ್ಲಿ ಅನುಮಾನವಿಲ್ಲ. ಪದಕ ಗೆಲ್ಲುವ ನೆಚ್ಚಿನ ತಂಡವಾಗಿ ಭಾರತ ಗುರುತಿಸಿಕೊಂಡಿದ್ದರೂ ಜಪಾನ್, ದಕ್ಷಿಣ ಕೊರಿಯಾ, ಮಲೇಶಿಯಾ ಮತ್ತು ಪಾಕಿಸ್ತಾನದಂತಾ ತಂಡಗಳ ಸವಾಲು ಮೀರಿ ನಿಲ್ಲಬೇಕಿದೆ. ಭಾರತ ಏಷ್ಯನ್ ಗೇಮ್ಸ್‌ನಲ್ಲಿ ಕೊನೆಯ ಬಾರಿ 2014ರಲ್ಲಿ ಚಿನ್ನ ಗೆದ್ದುಕೊಂಡಿದ್ದು ಇದೀಗ ಮತ್ತೊಮ್ಮೆ ಆ ಸಾಧನೆ ಮಾಡುವ ಗುರಿಯಿಟ್ಟುಕೊಂಡಿದೆ. ಈ ಮಹತ್ವದ ಕ್ರೀಡಾಕೂಟದಲ್ಲಿ ಭಾರತ ಗೆಲ್ಲಬೇಕಾದರೆ ಪೂರಕ ಸಿದ್ಧತೆಗಳನ್ನು ಮಾಡಿಕೊಳ್ಳಲೇ ಬೇಕಿದೆ.

Story first published: Tuesday, May 3, 2022, 18:48 [IST]
Other articles published on May 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X