ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ದಕ್ಷಿಣ ಆಫ್ರಿಕಾಕ್ಕೆ ಭಾರತೀಯ ಹಾಕಿ ಪುರುಷರ ಪ್ರವಾಸ ರದ್ದು

Indian mens hockey tour cancelled after Covid surge in South Africa

ನವದೆಹಲಿ: ಕೊರೊನಾ ವೈರಸ್ ಕಾಟದಿಂದಾಗಿ 2020ರಲ್ಲಿ ಹಾಕಿಗೆ ಸಂಬಂಧಿಸಿ ಪ್ರಮುಖ ಟೂರ್ನಿಗಳು ನಡೆಯಲಿಲ್ಲ. 2021ಕ್ಕಾದರೂ ಹಾಕಿ ಟೂರ್ನಿಗಳಲ್ಲಿ ಪಾಲ್ಗೊಳ್ಳುವ ಆಸೆಯಲ್ಲಿ ಭಾರತೀಯ ಪುರುಷರ ಹಾಕಿ ತಂಡವಿತ್ತು. ಆದರೆ ತಂಡದ ಆಸೆಗೆ ಹಿನ್ನಡೆಯಾಗಿದೆ. ದಕ್ಷಿಣ ಆಫ್ರಿಕಾಕ್ಕೆ ಭಾರತದ ಹಾಕಿ ತಂಡದ ಪ್ರವಾಸ ರದ್ದಾಗಿದೆ.

3ನೇ ಟೆಸ್ಟ್‌ಗೆ ಮಯಾಂಕ್ ಬದಲು ರೋಹಿತ್, ಬ್ರಿಸ್ಬೇನ್‌ನಲ್ಲೇ 4ನೇ ಟೆಸ್ಟ್3ನೇ ಟೆಸ್ಟ್‌ಗೆ ಮಯಾಂಕ್ ಬದಲು ರೋಹಿತ್, ಬ್ರಿಸ್ಬೇನ್‌ನಲ್ಲೇ 4ನೇ ಟೆಸ್ಟ್

ಕೊರೊನಾವೈರಸ್ ಕಾರಣದಿಂದಲೇ 2021ರ ಹೊಸ ವರ್ಷದಿಂದ ಆರಂಭವಾಗಬೇಕಿದ್ದ ಹಾಕಿ ಟೂರ್ನಿಗಳಿಗೆ ಹಿನ್ನಡೆಯಾಗಿದೆ. ರಸ್ತೆಗಳ ತಡೆಯಾಗಿದ್ದರಿಂದ ಭಾರತ ತಂಡದ ದಕ್ಷಿಣ ಆಫ್ರಿಕಾ ಪ್ರವಾಸ ರದ್ದಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚುತ್ತಿರುವ ವೈರಸ್ ಪ್ರಕರಣಗಳ ಕಾರಣದಿಂದಲೂ ಹಲವು ರಾಷ್ಟ್ರಗಳು ಪಾಲ್ಗೊಳ್ಳಲಿದ್ದ 'ಸಮ್ಮರ್ ಸೀರೀಸ್' ಅನ್ನು ದಕ್ಷಿಣ ಆಫ್ರಿಕಾ ರದ್ದು ಮಾಡಿದೆ.

ದಕ್ಷಿಣ ಆಫ್ರಿಕಾದ ಕೇಪ್‌ ಟೌನ್‌ನಲ್ಲಿ ಜನವರಿ 10ರಿಂದ 27ರ ವರೆಗೆ 'ಸಮ್ಮರ್ ಸೀರೀಸ್' ಹಾಕಿ ಟೂರ್ನಿ ನಡೆಯುವುದರಲ್ಲಿತ್ತು. ಈ ಟೂರ್ನಿಯಲ್ಲಿ ಬೆಲ್ಜಿಯಂ, ಗ್ರೇಟ್ ಬ್ರಿಟನ್, ಫ್ರಾನ್ಸ್ ಮತ್ತು ಭಾರತ, ದಕ್ಷಿಣ ಆಫ್ರಿಕಾ ತಂಡಗಳು ಪಾಲ್ಗೊಳ್ಳುವುದರಲ್ಲಿದ್ದವು.

ಗಂಗೂಲಿಯನ್ನು ಪರೀಕ್ಷಿಸಿದ ಡಾ.ದೇವಿ ಶೆಟ್ಟಿ, ಬುಧವಾರ ದಾದಾ ಆಸ್ಪತ್ರೆಯಿಂದ ಡಿಶ್ಚಾರ್ಜ್ಗಂಗೂಲಿಯನ್ನು ಪರೀಕ್ಷಿಸಿದ ಡಾ.ದೇವಿ ಶೆಟ್ಟಿ, ಬುಧವಾರ ದಾದಾ ಆಸ್ಪತ್ರೆಯಿಂದ ಡಿಶ್ಚಾರ್ಜ್

'ವೆಸ್ಟರ್ನ್ ಕೇಪ್ ಪ್ರದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಸೋಂಕಿನ ಸಂಖ್ಯೆಗಳ ಬಗ್ಗೆ ಅಪಾಯದ ಮೌಲ್ಯಮಾಪನ ಮಾಡಿದ ನಂತರ ಟೂರ್ನಿ ರದ್ದು ಮಾಡುವ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ,' ಎಂದು ದಕ್ಷಿಣ ಆಫ್ರಿಕಾ ಹಾಕಿ ಅಸೋಸಿಯೇಶನ್‌ನ ಸಿಇಒ ಮರಿಸ್ಸ ಲಂಗೇನಿ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.

Story first published: Wednesday, January 6, 2021, 10:03 [IST]
Other articles published on Jan 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X