ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಮಹಿಳಾ ಹಾಕಿ ಎಫ್‌ಐಎಚ್‌ ಸೀರೀಸ್‌ ಟೂರ್ನಿ: ಭಾರತ ತಂಡ ಚಾಂಪಿಯನ್ಸ್‌

Indian womens hockey team clinches FIH Series Finals, beats Japan 3-1

ಹಿರೋಶಿಮಾ, ಜೂನ್‌ 23: ಭರ್ಜರಿ ಲಯದಲ್ಲಿರುವ ಭಾರತ ಮಹಿಳಾ ಹಾಕಿ ತಂಡ ತನ್ನ ಮಿಂಚಿನ ಆಟ ಮುಂದುವರಿಸಿದ್ದು, ಇಲ್ಲಿ ಮುಕ್ತಾಯಗೊಂಡ ಎಫ್‌ಐಎಚ್‌ ಸೀರೀಸ್‌ ಫೈನಲ್ಸ್‌ ಹಾಕಿ ಟೂರ್ನಿಯ ಪ್ರಶಸ್ತಿ ಸುತ್ತಿನ ಪಂದ್ಯಲ್ಲಿ ಆತಿಥೇಯ ಜಪಾನ್‌ ತಂಡವನ್ನು 3-1 ಗೋಲ್‌ಗಳಿಂದ ಬಗ್ಗುಬಡಿದು ಟ್ರೋಫಿ ಎತ್ತಿ ಹಿಡಿದಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಇಲ್ಲಿಮ ಹಿರೋಶಿಮಾ ಹಾಕಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಹೈವೋಲ್ಟೇಜ್‌ ಪಂದ್ಯದಲ್ಲಿ ಒತ್ತಡ ನಿಭಾಯಿಸಿ ಅನುಭವದ ಆಟವಾಡಿದ ರಾಣಿ ರಾಮ್‌ಪಾಲ್‌ ಸಾರಥ್ಯದ ಭಾರತ ಮಹಿಳಾ ಪಡೆ, ಏಷ್ಯನ್‌ ಚಾಂಪಿಯನ್ಸ್‌ ಜಪಾನ್‌ ತಂಡದ ಸವಾಲನ್ನು ಮೆಟ್ಟಿನಿಂತಿತು.

ನಾಯಕಿ ರಾಣಿ ರಾಮ್‌ಪಾಲ್‌ ಪಂದ್ಯ ಶುರುವಾರ ಮೂರೇ ನಿಮಿಷಕ್ಕೆ ಮೊದಲ ಗೋಲ್‌ ತಂದುಕೊಟ್ಟು ಆರಂಭಿಕ ಮುನ್ನಡೆ ಒದಗಿಸಿಕೊಟ್ಟರು. ಆದರೆ, 11ನೇ ನಿಮಿಷದಲ್ಲಿ ಜಪಾನ್‌ ಪರ ಕನೋನ್‌ ಮೋರಿ ಫೀಲ್ಡ್‌ ಗೋಲ್‌ ಮೂಲಕ 1-1ರ ಸಮಬಲ ತಂದರು. ಆದರೆ, ಭಾರತದ ಪರ ಮಿಂಚಿದ ಡ್ರ್ಯಾಗ್‌ ಫ್ಲಿಕರ್‌ ಗುರುಜಿತ್‌ ಕೌರ್‌ 45ನೇ ಮತ್ತು 60ನೇ ನಿಮಷದಲ್ಲಿ ಚೆಂಡನ್ನು ಗುರಿ ಮುಟ್ಟಿಸುವ ಮೂಲಕ ಜಯದ ರೂವಾರಿ ಎನಿಸಿದರು.

ಸ್ವಿಸ್‌ ಮಾಸ್ಟರ್‌ ರೋಜರ್‌ ಫೆಡರರ್‌ ಮುಡಿಗೆ 10ನೇ ಹ್ಯಾಲೆ ಓಪನ್‌ ಗರಿ!

ಪ್ರಸಕ್ತ ಟೂರ್ನಿಯಲ್ಲಿ ಫೈನಲ್‌ ತಲುಪುವ ಮೂಲಕ 2020ರ ಒಲಿಂಪಿಕ್ಸ್‌ನ ಅರ್ಹತಾ ಸುತ್ತಿನ ಟೂರ್ನಿಯ ಅಂತಿಮ ಸುತ್ತೊಗೆ ಭಾರತ ಮಹಿಳಾ ತಂಡ ಈಗಾಗಲೇ ಅರ್ಹತೆ ಪಡೆದುಕೊಂಡಿದೆ. ಜಪಾನ್‌ ಕೂಡ ಒಲಿಂಪಿಕ್ಸ್‌ ಅರ್ಹತಾ ಸುತ್ತಿನ ಟೂರ್ನಿಗೆ ಅರ್ಹತೆ ಗಿಟ್ಟಿಸಿದೆ.

Story first published: Sunday, June 23, 2019, 20:51 [IST]
Other articles published on Jun 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X