ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಹಾಕಿ: ಏಷ್ಯಾ ಕಪ್‌ನಿಂದ ಹೊರಗುಳಿದ ನಾಯಕ ರೂಪಿಂದರ್ ಸಿಂಗ್; ಕನ್ನಡಿಗ ಎಸ್‌ವಿ ಸುನೀಲ್ ಉಪನಾಯಕ

Injured Rupinder Pal Singh Ruled Out From Asia Cup Hockey

ಇದೇ ತಿಂಗಳಿನಲ್ಲಿ ಜಕಾರ್ತ್‌ನಲ್ಲಿ ನಡೆಯಲಿರುವ ಏಷ್ಯಾ ಕಪ್ ಹಾಕಿ ಅಭಿಯಾನವನ್ನು ಆರಂಭಿಸಲಿರುವ ಭಾರತ ತಂಡ, ನಾಯಕ ರೂಪಿಂದರ್ ಪಾಲ್ ಸಿಂಗ್ ಅವರನ್ನು ಮಿಸ್ ಮಾಡಿಕೊಳ್ಳಲಿದೆ.

ಸ್ಟಾರ್ ಡ್ರ್ಯಾಗ್-ಫ್ಲಿಕ್ಕರ್ ರೂಪಿಂದರ್ ಪಾಲ್ ಸಿಂಗ್ ಗಾಯದ ಕಾರಣದಿಂದ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಹಾಲಿ ಚಾಂಪಿಯನ್ ಭಾರತ ಹಾಕಿ ತಂಡ ಮೇ 23ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 11ನೇ ಆವೃತ್ತಿಯ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.

ರೂಪಿಂದರ್ ಪಾಲ್ ಸಿಂಗ್ ಅನುಪಸ್ಥಿತಿಯಲ್ಲಿ ಪುರುಷರ ಹಾಕಿ ತಂಡದ ನಾಯಕರಾಗಿ ಬೀರೇಂದ್ರ ಲಾಕ್ರಾ ಅವರನ್ನು ನೇಮಿಸಲಾಗಿದ್ದು, ಅನುಭವಿ ಫಾರ್ವರ್ಡ್ ಆಟಗಾರ ಎಸ್‌ವಿ ಸುನೀಲ್ 20 ಆಟಗಾರರ ತಂಡದ ಉಪನಾಯಕನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ಆರಂಭದಲ್ಲಿ 10 ಹೊಸ ಮುಖಗಳೊಂದಿಗೆ ಯುವ ಮತ್ತು ಅನುಭವದ ಉತ್ತಮ ಮಿಶ್ರಣವನ್ನು ಹೊಂದಿರುವ ತಂಡದ ನಾಯಕನಾಗಿ ರೂಪಿಂದರ್ ಅವರನ್ನು ಹೆಸರಿಸಲಾಗಿತ್ತು. 20 ಮಂದಿಯ ತಂಡದಲ್ಲಿ ರೂಪಿಂದರ್ ಪಾಲ್ ಸಿಂಗ್ ಬದಲಿಗೆ ನಿಲಮ್ ಸಂಜೀಪ್ ಕ್ಸೆಸ್ ಆಯ್ಕೆಯಾಗಿದ್ದರೆ, ಮಾಜಿ ನಾಯಕ ಸರ್ದಾರ್ ಸಿಂಗ್ ಸಹ ಕೋಚ್ ಪಾತ್ರದಲ್ಲಿ ತಂಡದೊಂದಿಗೆ ಇರಲಿದ್ದಾರೆ.

Injured Rupinder Pal Singh Ruled Out From Asia Cup Hockey

ಏಷ್ಯಾ ಕಪ್‌ನ ಪೂಲ್ "ಎ' ನಲ್ಲಿ ಪಾಕಿಸ್ತಾನ, ಜಪಾನ್ ಮತ್ತು ಇಂಡೋನೇಷ್ಯಾದೊಂದಿಗೆ ಭಾರತ ತಂಡ ಇದ್ದು, ಮಲೇಷ್ಯಾ, ದಕ್ಷಿಣ ಆಫ್ರಿಕಾ, ಓಮನ್ ಮತ್ತು ಬಾಂಗ್ಲಾದೇಶ ತಂಡಗಳು ಇನ್ನೊಂದು ಗುಂಪಿನಲ್ಲಿ ಸ್ಥಾನ ಪಡೆದಿವೆ.

"ತರಬೇತಿ ಅವಧಿಯಲ್ಲಿ ರೂಪಿಂದರ್ ಗಾಯಗೊಂಡಿರುವುದು ದುರದೃಷ್ಟಕರ ಮತ್ತು ಅವರು ಏಷ್ಯಾ ಕಪ್‌ನ ಭಾಗವಾಗುವುದಿಲ್ಲ" ಎಂದು ಕೋಚ್ ಬಿಜೆ ಕಾರಿಯಪ್ಪ ಹೇಳಿದ್ದಾರೆ ಎಂದು ಸ್ಪೋರ್ಟ್‌ಸ್ಟಾರ್ ವರದಿ ಮಾಡಿದೆ.

"ಬೀರೇಂದ್ರ ಮತ್ತು ಸುನೀಲ್ ಇಬ್ಬರೂ ಅಪಾರ ಅನುಭವಿಗಳಾಗಿದ್ದು, ಹಲವು ವರ್ಷಗಳಿಂದ ನಾಯಕತ್ವದ ಗುಂಪಿನ ಭಾಗವಾಗಿದ್ದಾರೆ. ನಾವು ರೂಪಿಂದರ್ ಅವರ ಸೇವೆಯನ್ನು ಕಳೆದುಕೊಳ್ಳುತ್ತೇವೆ, ತಂಡದಲ್ಲಿ ನಮಗೆ ಸಾಕಷ್ಟು ಆಯ್ಕೆಗಳಿವೆ. ನಾವು ಅತ್ಯಂತ ಪ್ರತಿಭಾವಂತ ಆಟಗಾರರ ತಂಡವನ್ನು ಹೊಂದಿದ್ದೇವೆ ಮತ್ತು ಅವರು ಈ ಅವಕಾಶವನ್ನು ಬಳಸಿಕೊಳ್ಳಲು ಎದುರು ನೋಡುತ್ತಿದ್ದಾರೆ," ಎಂದರು.

ಏಷ್ಯಾ ಕಪ್ ಹಾಕಿ ಭಾರತ ತಂಡ ಹೀಗಿದೆ
ಗೋಲ್‌ಕೀಪರ್‌ಗಳು: ಪಂಕಜ್ ಕುಮಾರ್ ರಜಾಕ್, ಸೂರಜ್ ಕರ್ಕೇರಾ

ಡಿಫೆಂಡರ್ಸ್: ನಿಲಮ್ ಸಂಜೀಪ್ ಕ್ಸೆಸ್, ಯಶದೀಪ್ ಸಿವಾಚ್, ಅಭಿಷೇಕ್ ಲಾಕ್ರಾ, ಬೀರೇಂದ್ರ ಲಾಕ್ರಾ (ನಾಯಕ), ಮಂಜೀತ್, ದಿಪ್ಸನ್ ಟಿರ್ಕಿ

ಮಿಡ್‌ಫೀಲ್ಡರ್‌ಗಳು: ವಿಷ್ಣುಕಾಂತ್ ಸಿಂಗ್, ರಾಜ್ ಕುಮಾರ್ ಪಾಲ್, ಮರೀಶ್ವರನ್ ಶಕ್ತಿವೇಲ್, ಶೇಷೇಗೌಡ ಬಿಎಂ, ಸಿಮ್ರಂಜೀತ್ ಸಿಂಗ್

ಫಾರ್ವರ್ಡ್‌ಗಳು: ಪವನ್ ರಾಜ್‌ಭರ್, ಅಭರಣ ಸುದೇವ್, ಎಸ್‌ವಿ ಸುನಿಲ್ (ಉಪನಾಯಕ), ಉತ್ತಮ್ ಸಿಂಗ್, ಎಸ್.ಕಾರ್ತಿ

ಬದಲಿ ಆಟಗಾರರು: ಮಣಿಂದರ್ ಸಿಂಗ್.

Story first published: Saturday, May 14, 2022, 9:29 [IST]
Other articles published on May 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X