ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ವೈವಾಹಿಕ ಜೀವನಕ್ಕೆ ಕಾಲಿರಿಸಿದ ಹಾಕಿ ಆಟಗಾರ ಎಸ್. ಕೆ ಉತ್ತಪ್ಪ

By ಕೋವರ್ ಕೊಲ್ಲಿ ಇಂದ್ರೇಶ್
International hockey player SK Uthappa marries P Sanjana at Gonikoppa

ಮಡಿಕೇರಿ, ಸೆ.28: ಅಂತಾರಾಷ್ಟ್ರೀಯ ಹಾಕಿ ಆಟಗಾರ ಸಣ್ಣುವಂಡ ಕೆ. ಉತ್ತಪ್ಪ ಅವರು ಪುಟ್ಟಿಚಂಡ ಸಂಜನಾ ಅವರೊಂದಿಗೆ ಭಾನುವಾರ ಗೋಣಿಕೊಪ್ಪದಲ್ಲಿ ಕೊಡವ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದರು. ಕೊರೊನಾ ಸಾಂಕ್ರಮಿಕ ಹಿನ್ನೆಲೆಯಲ್ಲಿ ಮದುವೆಗೆ ಎರಡೂ ಕುಟುಂಬಸ್ಥರಿಗೆ ಮಾತ್ರ ಆಹ್ವಾನ ನೀಡಲಾಗಿದ್ದು ಸರಳವಾಗಿ ನಡೆಯಿತು ಎಂದು ಕುಶಾಲಪ್ಪ ತಿತಿಳಿಸಿದರು.

ಬಾಳಾಜಿ ಗ್ರಾಮದಲ್ಲಿರುವ ಯೆಲ್ಲೋ ಬ್ಯಾಂಬೂ ರೆಸಾರ್ಟ್‌ನಲ್ಲಿ ಆಯೋಜಿಸಿದ್ದ ಸರಳ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸೀಮಿತ ಅತಿಥಿಗಳ ಸಂಖ್ಯೆ 80 ರಷ್ಟಿತ್ತು. ಜಿಲ್ಲೆಯ ರಾಜಕಾರಣಿಗಳ್ಯಾರೂ ಪಾಲ್ಗೊಂಡಿರಲಿಲ್ಲ. ಮೂಲತಃ ಬೊಳ್ಳರಿಮಾಡ್ ಗ್ರಾಮದ ಪುಟ್ಟಿಚಂಡ ಉತ್ತಪ್ಪ- ಲೀಲಾ ದಂಪತಿಯ ಪುತ್ರಿ, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿರುವ ಸಂಜನಾ ಅವರೊಂದಿಗೆ ಶನಿವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಭಾನುವಾರ ಮಧ್ಯಾಹ್ನ ಕೊಡವ ಸಂಪ್ರದಾಯದಂತೆ ಊರ್ ಕೂಡುವೋ ಶಾಸ್ತ್ರ ನಡೆಸಿ, ಮೆಹಂದಿ ಇಟ್ಟು ಸಂಭ್ರಮಿಸಿದರು. ನಂತರ ಸಂಜೆ ಹಸೆಮಣೆ ಏರಿದರು. ಉತ್ತಪ್ಪ ಅವರ ತಂದೆ ಸಣ್ಣುವಂಡ ಕುಶಾಲಪ್ಪ, ತಾಯಿ ನೀರಜ್ ಕುಶಾಲಪ್ಪ, ಸಹೋದರ ಚಿಣ್ಣಪ್ಪ ದಂಪತಿ ಸೇರಿ ಕುಟುಂಬಸ್ಥರು ಹಾಜರಿದ್ದರು.

ಏಕಲವ್ಯ ಪ್ರಶಸ್ತಿ ಪುರಸ್ಕೃತ ಉತ್ತಪ್ಪ, 2012ರಲ್ಲಿ ದಕ್ಷಿಣ ಆಫ್ರಿಕಾ ಸರಣಿಯೊಂದಿಗೆ ಅಂತಾರಾಷ್ಟ್ರೀಯ ಹಾಕಿ ಆಟಗಾರರಾಗಿ ಪದಾರ್ಪಣೆ ಮಾಡಿದ್ದರು. 5 ಪಂದ್ಯಗಳ ಸರಣಿಯಲ್ಲಿ 3 ಗೋಲು ಹೊಡೆದು ಗಮನ ಸೆಳೆದಿದ್ದ ಇವರು, 2012ರ ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು. 2016ರಲ್ಲಿ ನಡೆದ ರಿಯೋ ಒಲಿಂಪಿಕ್‌ನಲ್ಲಿ ಆಡಿದ್ದರು. ಇಲ್ಲಿಯವರೆಗೂ 164 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ.

Story first published: Monday, September 28, 2020, 15:17 [IST]
Other articles published on Sep 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X