ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕರ್ನಾಟಕದ ಪಂಜಾಬಿನಲ್ಲಿ ಶುರುವಾಗಿದೆ ಹಾಕಿನಮ್ಮೆ

By ಬಿ.ಎಂ. ಲವಕುಮಾರ್, ಮಡಿಕೇರಿ
<ul id="pagination-digg"><li class="next"><a href="/sports/kuppanda-cup-hockey-namme-2015-part2-093154.html">Next »</a></li></ul>

ವೈವಿಧ್ಯಮಯ ಕ್ರೀಡಾಕೂಟಗಳಿಂದಾಗಿ ಕರ್ನಾಟಕದ ಪಂಜಾಬ್ ಎಂದು ಹೆಸರುವಾಸಿಯಾಗಿರುವ ಕೊಡಗಿನಲ್ಲಿ ವಾರ್ಷಿಕ ಹಾಕಿ ಹಬ್ಬ 'ಹಾಕಿನಮ್ಮೆ' ಏ.15ರಿಂದ ವಿಧ್ಯುಕ್ತವಾಗಿ ಶುರುವಾಗಿದೆ. ಅಂದು ಕೋವಿ ಹಿಡಿಯದ ಕೈಗಳಿಲ್ಲ ಎನ್ನುತ್ತಿದ್ದವರು, ಇಂದು ಹಾಕಿ ಸ್ಟಿಕ್ ಹಿಡಿಯದ ಕೈಗಳು ಕೊಡಗಿನಲ್ಲಿಲ್ಲ ಎನ್ನುವಷ್ಟರ ಮಟ್ಟಿಗೆ ಕೊಡಗಿನಲ್ಲಿ ಹಾಕಿ ಜನಪ್ರಿಯತೆ ಗಳಿಸಿದೆ. ಈ ಕುರಿತು ಒಂದು ವಿಶೇಷ ಲೇಖನ ಇಲ್ಲಿದೆ.

***

ಕೊಡಗು ವೀರರ, ಶೂರರ ನಾಡು ಮಾತ್ರವಲ್ಲ, ಕ್ರೀಡಾಪ್ರೇಮಿಗಳ ನೆಲೆವೀಡು ಎನ್ನುವುದಕ್ಕೆ ಇಲ್ಲಿ ವರ್ಷಪೂರ್ತಿ ನಡೆಯುವ ವಿವಿಧ ಕ್ರೀಡಾಕೂಟಗಳೇ ಸಾಕ್ಷಿಯಾಗಿವೆ. ಹಾಗಾಗಿ ಕೊಡಗನ್ನು ಕರ್ನಾಟಕದ ಪಂಜಾಬ್ ಎಂಬ ಅನ್ವರ್ಥನಾಮದಿಂದ ಕೂಡ ಕರೆಯಲಾಗುತ್ತಿದೆ. ಇಲ್ಲಿ ನಡೆಯುವ ಹಲವಾರು ಕ್ರೀಡಾ ಕೂಟಗಳ ಪೈಕಿ ಕೊಡವ ಕುಟುಂಬಗಳು ನಡೆಸುವ ಹಾಕಿನಮ್ಮೆ (ಹಾಕಿ ಉತ್ಸವ) ಪ್ರಮುಖವಾಗಿದೆಯಲ್ಲದೆ, ದೇಶ ವಿದೇಶಗಳ ಗಮನಸೆಳೆಯುವುದರೊಂದಿಗೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ನಲ್ಲಿ ಸ್ಥಾನಗಿಟ್ಟಿಸಿಕೊಂಡಿದೆ ಎಂದರೆ ಈ ಹಾಕಿ ಉತ್ಸವದ ಮಹತ್ವ ಎಂತಹದ್ದು ಎಂಬುವುದು ಅರಿವಾಗದಿರದು.

Kuppanda cup hockey namme - 2015 in Kodagu

ಜಿಲ್ಲೆಯ ವಿವಿಧ ಊರುಗಳಲ್ಲಿ ಕಳೆದ ಹದಿನೇಳು ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿರುವ ಹಾಕಿ ಉತ್ಸವದ ಹಿಂದೆ ಕೊಡವ ಕುಟುಂಬಗಳ ಪ್ರತಿಯೊಬ್ಬ ಸದಸ್ಯರ ಶ್ರಮವಿದೆ ಎಂದರೆ ತಪ್ಪಾಗಲಾರದು.

ಕೊಡಗಿನಲ್ಲಿ ನಡೆಯುವ ಹಾಕಿ ಉತ್ಸವ ಕೇವಲ ಸೋಲು-ಗೆಲುವಿನ ಲೆಕ್ಕಚಾರದ ಪಂದ್ಯವಲ್ಲ. ಅದು ಕೊಡವ ಸಮುದಾಯದ ಒಗ್ಗಟ್ಟು, ಪ್ರೀತಿ-ವಿಶ್ವಾಸವನ್ನು ಬಲಪಡಿಸುವ, ಯುವ ಸಮೂಹದಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುವ, ರಾಷ್ಟ್ರೀಯ-ಅಂತರಾಷ್ಟ್ರೀಯ ಕ್ರೀಡಾ ಕಲಿಗಳ ಮೂಲಕ ಯುವ ಪ್ರತಿಭೆಗಳಿಗೆ ತರಬೇತಿ ನೀಡುವ, ಆಟದ ನಿಯಮ, ಶಿಸ್ತು, ಚಾಕಚಕ್ಯತೆಗಳನ್ನು ಪರಿಚಯಿಸುವ, ವಿವಾಹ ಸಂಬಂಧ ಬೆಳೆಸುವ, ಸಂಸ್ಕೃತಿ, ಸಂಪ್ರದಾಯವನ್ನು ಉಳಿಸಿ ಮುಂದುವರೆಸುವ ಹಬ್ಬವಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.

ಇವತ್ತು ಭಾರತದ ಹಾಕಿ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡ ಆಟಗಾರರಲ್ಲದೆ, ಇತರೆ ಕ್ರೀಡೆಯಲ್ಲಿ ತಮ್ಮ ಸಾಮರ್ಥ್ಯ ಮೆರೆದ, ಸೇನೆ, ಪೊಲೀಸ್, ಇನ್ನಿತರ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರಿಂದ ಕಾಫಿ ಬೆಳೆಗಾರರ ತನಕ ಎಲ್ಲರೂ ತಮ್ಮ ಕುಟುಂಬಗಳ ಪರ ಆಟವಾಡುವುದು ಹಾಕಿ ನಮ್ಮೆಯ ಮತ್ತೊಂದು ವಿಶೇಷತೆಯಾಗಿದೆ. ಕಳೆದ ಹದಿನೇಳು ವರ್ಷಗಳಿಂದ ವರ್ಷಕ್ಕೊಂದು ಕುಟುಂಬ ಪಂದ್ಯದ ಸಾರಥ್ಯವನ್ನು ವಹಿಸಿಕೊಂಡು ಯಶಸ್ವಿಯಾಗಿ ನಡೆಸಿಕೊಂಡು ಬಂದಿವೆ.

1997ರಲ್ಲಿ ವೀರಾಜಪೇಟೆ ತಾಲೂಕಿನ ಕುಗ್ರಾಮ ಕರಡದಲ್ಲಿ ಆರಂಭಗೊಂಡ ಹಾಕಿನಮ್ಮೆ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಾ ಮುಂದೊಂದು ದಿನ ಲಿಮ್ಕಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಾಗುವಷ್ಟರ ಮಟ್ಟಿಗೆ ಗಮನಸೆಳೆಯುತ್ತದೆ ಎಂದು ಯಾರೂ ಯೋಚಿಸಿರಲಿಲ್ಲ.

ಹಾಗೆನೋಡಿದರೆ ಕೊಡಗಿನಲ್ಲಿ ನಡೆಯುವ ಕೊಡವ ಕುಟುಂಬಗಳ ನಡುವಿನ ಹಾಕಿನಮ್ಮೆಯ ಹುಟ್ಟು, ಬೆಳವಣಿಗೆ ಎಲ್ಲವೂ ರೋಚಕವೇ... ಇಂತಹವೊಂದು ಕ್ರೀಡಾ ಉತ್ಸವವನ್ನು ಹುಟ್ಟು ಹಾಕಿದ ಗೌರವ ಕೊಡವ ಹಾಕಿ ಆಕಾಡೆಮಿಯ ಸ್ಥಾಪಕ ಅಧ್ಯಕ್ಷ ಪಾಂಡಂಡ ಕುಟ್ಟಪ್ಪ ಅವರಿಗೆ ಸಲ್ಲುತ್ತದೆ.

<ul id="pagination-digg"><li class="next"><a href="/sports/kuppanda-cup-hockey-namme-2015-part2-093154.html">Next »</a></li></ul>

Story first published: Wednesday, January 3, 2018, 10:15 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X