ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಭಾರತೀಯ ಹಾಕಿ ತಂಡಗಳಿಗೆ ಇನ್ನೂ 10 ವರ್ಷ ಒಡಿಶಾ ಪ್ರಾಯೋಜಕತ್ವ

Odisha to continue to sponsor Indian hockey teams for 10 more years: CM Naveen Patnaik

ಭುವನೇಶ್ವರ್: ಭಾರತೀಯ ಪುರುಷರ ಹಾಕಿ ತಂಡ ಮತ್ತು ಮಹಿಳಾ ಹಾಕಿ ತಂಡಗಳಿಗೆ ಒಡಿಶಾ ಸರ್ಕಾರ ಇನ್ನೂ 10 ವರ್ಷಗಳ ಕಾಲ ಪ್ರಾಯೋಜಕತ್ವ ಮುಂದುವರೆಸಲಿದೆ. ಒಡಿಶಾ ಮುಖ್ಯ ಮಂತ್ರಿ ನವೀನ್ ಪಟ್ನಾಯಕ್ ಮಂಗಳವಾರ (ಆಗಸ್ಟ್ 17) ಈ ವಿಚಾರ ಘೋಷಿಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಪುರುಷರ ಮತ್ತು ಮಹಿಳಾ ತಂಡಗಳು ಅದ್ಭುತ ಪ್ರದರ್ಶನ ನೀಡಿದ ಬೆನ್ನಲ್ಲೇ ಒಡಿಶಾ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

ಟೋಕಿಯೋ ಒಲಿಂಪಿಕ್ ಪದಕ ವಿಜೇತೆ ಮೀರಾಬಾಯಿಗೆ ಹೊಸ ಕಾರು ಗಿಫ್ಟ್!ಟೋಕಿಯೋ ಒಲಿಂಪಿಕ್ ಪದಕ ವಿಜೇತೆ ಮೀರಾಬಾಯಿಗೆ ಹೊಸ ಕಾರು ಗಿಫ್ಟ್!

ಒಡಿಶಾದಲ್ಲಿ ನಡೆದ ಕಾರ್ಯಕ್ರಮವೊಂದರ ವೇಳೆ ಪುರುಷರ ಹಾಕಿ ತಂಡದ ನಾಯಕ ಮನ್‌ಪ್ರೀತ್‌ ಸಿಂಗ್‌ ಮತ್ತು ಹಾಕಿ ಮಹಿಳಾ ತಂಡದ ನಾಯಕಿ ರಾಣಿ ರಾಂಪಾಲ್, ಹಾಕಿ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ನರೇಂದ್ರ ಬಾತ್ರಾ ಮತ್ತು ಹಾಕಿ ಇಂಡಿಯಾ ಅಧ್ಯಕ್ಷ ಗ್ಯಾನೇಂದ್ರ ನಿಂಗೋಂಬನ್ ಮೊದಲಾದವರು ಒಂದೇ ಸಭೆಯಲ್ಲಿ ಕುಳಿತಿದ್ದಾಗ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಈ ಘೋಷಣೆ ಮಾಡಿದ್ದಾರೆ.

U-20 World Athletics Championships: 4x400 ಮೀ. ಮಿಕ್ಸ್ಡ್ ರಿಲೇಯಲ್ಲಿ ಭಾರತಕ್ಕೆ ಕಂಚುU-20 World Athletics Championships: 4x400 ಮೀ. ಮಿಕ್ಸ್ಡ್ ರಿಲೇಯಲ್ಲಿ ಭಾರತಕ್ಕೆ ಕಂಚು

ಪಟ್ನಾಯಕ್ ಈ ಸಂಗತಿ ಘೋಷಿಸುತ್ತಿದ್ದಂತೆ ಸಭಿಕರಿಂದ, ಕ್ರೀಡಾಪಟುಗಳಿಂದ ಡೊಡ್ಡ ಮಟ್ಟದದಲ್ಲಿ ಚಪ್ಪಾಳೆ, ಸಂಭ್ರಮ ಕೇಳಿ ಬಂತು.

ಹಾಕಿ ಇಂಡಿಯಾದೊಂದಿಗೆ ನಮ್ಮ ಪಾಲುದಾರಿಕೆ ಮುಂದುವರೆಸುತ್ತೇವೆ

ಹಾಕಿ ಇಂಡಿಯಾದೊಂದಿಗೆ ನಮ್ಮ ಪಾಲುದಾರಿಕೆ ಮುಂದುವರೆಸುತ್ತೇವೆ

"ಒಡಿಶಾ ಮತ್ತು ಹಾಕಿ ಸಮಾನಾರ್ಥಕವಾಗಲು ಉದ್ದೇಶಿಸಲಾಗಿದೆ ಎಂದು ನಾನು ನಂಬುತ್ತೇನೆ. ಹಾಕಿ ಇಂಡಿಯಾದೊಂದಿಗೆ ನಾವು ನಮ್ಮ ಪಾಲುದಾರಿಕೆಯನ್ನು ಮುಂದುವರಿಸುತ್ತೇವೆ. ಒಡಿಶಾ ಸರ್ಕಾರ ಭಾರತೀಯ ಹಾಕಿ ತಂಡಗಳನ್ನು ಇನ್ನೂ 10 ವರ್ಷಗಳ ಕಾಲ ಬೆಂಬಲಿಸುತ್ತದೆ," ಎಂದು ಪಟ್ನಾಯಕ್ ಹೇಳಿದ್ದಾರೆ. ಮಹಿಳಾ ತಂಡದ ನಾಯಕಿ ರಾಣಿ ರಾಂಪಾಲ್ ಮತ್ತು ಚಿನ್ನಕ್ಕಿಂತ ಕಡಿಮೆ ಮೌಲ್ಯವಿಲ್ಲದ ಕಂಚಿನ ಪದಕ ಗೆದ್ದ ಪುರುಷರ ಹಾಕಿ ತಂಡದ ನಾಯಕ ಮನ್‌ಪ್ರೀತ್‌ ಸಿಂಗ್ ಮತ್ತು ಹಾಕಿ ತಂಡವನ್ನು ಪಟ್ನಾಯಕ್ ಅಭಿನಂದಿಸಿದರು. ಈ ವೇಳೆ ಪದಕ ಗೆದ್ದ ಪುರುಷರ ಹಾಕಿ ತಂಡದ ಪ್ರತೀ ಆಟಗಾರರಿಗೆ ತಲಾ 10 ಲಕ್ಷ ಮತ್ತು ಬೆಂಬಲ ಸಿಬ್ಬಂದಿಗೆ ತಲಾ 5 ಲಕ್ಷ ರೂ. ನಗದು ಪುರಸ್ಕಾರ ಪಟ್ನಾಯಕ್ ವಿತರಿಸಿದರು. ಅಭಿನಂದನೆಗೆ ಕೃತಜ್ಞತೆಯಾಗಿ ಎಲ್ಲಾ ಆಟಗಾರರ ಸಹಿಯಿರುವ ವಿಶೇಷ ಜೆರ್ಸಿಯನ್ನು ಮುಖ್ಯಮಂತ್ರಿಗೆ ನೀಡಲಾಯ್ತು.

ತಂಡದ ಎಲ್ಲಾ ಆಟಗಾರರಿಗೂ ಪ್ರಶಸ್ತಿ, ಅಭಿನಂದನೆ

ತಂಡದ ಎಲ್ಲಾ ಆಟಗಾರರಿಗೂ ಪ್ರಶಸ್ತಿ, ಅಭಿನಂದನೆ

ಪಟ್ನಾಯಕ್ ಕೂಡ ಕಂಚಿನ ಪದಕ ಗೆದ್ದ ಭಾರತೀಯ ತಂಡದ 13 ಆಟಗಾರರಿಗೆ 13 ಪ್ರಶಸ್ತಿಗಳನ್ನು ನೀಡಿದರು. ಪುರುಷರ ತಂಡದಲ್ಲಿ, ಹರ್ಮನ್‌ಪ್ರೀತ್ ಸಿಂಗ್ ಗರಿಷ್ಠ ಸಂಖ್ಯೆಯ ಗೋಲುಗಳನ್ನು ಗಳಿಸಿದ ಆಟಗಾರ ಪ್ರಶಸ್ತಿ ಗೆದ್ದರು, ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಗರಿಷ್ಠ ಸಂಖ್ಯೆಯ ಗೋಲುಗಳನ್ನು ಉಳಿಸಿದ ಆಟಗಾರನಾಗಿ ಪ್ರಶಸ್ತಿ ಜಯಿಸಿದರು, ನೀಲಕಂಠ ಶರ್ಮಾ ಗರಿಷ್ಠ ಸಂಖ್ಯೆಯ ಗೋಲುಗಳಿಗೆ ನೆರವಿತ್ತ ಆಟಗಾರನಾಗಿ ಗುರುತಿಸಿಕೊಂಡರು, ರೂಪಿಂದರ್ ಪಾಲ್ ಸಿಂಗ್ ಅವರು ಗರಿಷ್ಠ ಸಂಖ್ಯೆಯಲ್ಲಿ ರಕ್ಷಣಾತ್ಮಕ ಆಟವಾಡಿದ್ದಕ್ಕಾಗಿ ಪ್ರಶಸ್ತಿ ಗೆದ್ದರು ಮತ್ತು ಹರ್ಮನ್‌ಪ್ರೀತ್ ಸಿಂಗ್ ಮತ್ತು ಅಮಿತ್ ರೋಹಿದಾಸ್ ಗರಿಷ್ಠ ಸಂಖ್ಯೆಯಲ್ಲಿ ಎದುರಾಳಿಗೆ ಪ್ರತಿರೋಧ ತೋರಿದ್ದಕ್ಕಾಗಿ ಪ್ರಶಸ್ತಿ ತನ್ನದಾಗಿಸಿಕೊಂಡರು. ಪುರುಷರ ಹಾಕಿ ತಂಡ ಈ ಒಲಿಂಪಿಕ್ಸ್‌ನಲ್ಲಿ ಕಂಚು ಗೆಲ್ಲುವ ಮೂಲಕ ಬರೋಬ್ಬರಿ 41 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪುರುಷರ ಹಾಕಿಯಲ್ಲಿ ಕಂಚುಗೆದ್ದ ಅಪರೂಪದ ದಾಖಲೆ ನಿರ್ಮಿಸಿತ್ತು. ಮಹಿಳಾ ತಂಡ ಒಲಿಂಪಿಕ್ಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸೆಮಿಫೈನಲ್‌ಗೆ ಪ್ರವೇಶಿಸಿ ಇತಿಹಾಸ ನಿರ್ಮಿಸಿತ್ತು.

ನಾವೆಲ್ಲರೂ ಹೆಮ್ಮೆ ಪಡುವಂತೆ ನೀವೆಲ್ಲರೂ ಮಾಡಿದ್ದೀರಿ

ನಾವೆಲ್ಲರೂ ಹೆಮ್ಮೆ ಪಡುವಂತೆ ನೀವೆಲ್ಲರೂ ಮಾಡಿದ್ದೀರಿ

ಸಭೆಯನ್ನುದ್ದೇಶಿಸಿ ಮಾತನಾಡಿದ ನವೀನ್ ಪಟ್ನಾಯಕ್, "ನಿಮ್ಮ ಸ್ಫೂರ್ತಿದಾಯಕ ಹೋರಾಟದಿಂದ ನಾವೆಲ್ಲರೂ ಹೆಮ್ಮೆ ಪಡುವಂತೆ ನೀವೆಲ್ಲರೂ ಮಾಡಿದ್ದೀರಿ. ಭಾರತೀಯ ಹಾಕಿ ಪುನರುಜ್ಜೀವನಕ್ಕೆ ಭಾರತ ಸಾಕ್ಷಿಯಾಗಲು ಇದು ದೊಡ್ಡ ಭಾವನಾತ್ಮಕ ಕ್ಷಣವಾಗಿತ್ತು. ಇಂಥ ಸಂಕಷ್ಟದ ಸಮಯದಲ್ಲೂ ನಮ್ಮ ಪುರುಷರ ಮತ್ತು ಮಹಿಳಾ ತಂಡಗಳು ಕೋಟ್ಯಾಂತರ ಭಾರತೀಯರಲ್ಲಿ ನಗು ಮೂಡಿದೆ. ನಾವು ನಮ್ಮ ಹುಡುಗರು ಮತ್ತು ಹುಡುಗಿಯರಿಗೆ ಇದಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಬೇಕು," ಎಂದಿದ್ದಾರೆ. ಮಹಿಳಾ ತಂಡದಲ್ಲಿ, ಗುರ್ಜಿತ್ ಕೌರ್ ಮತ್ತು ವಂದನಾ ಕಟಾರಿಯಾ ಗರಿಷ್ಠ ಸಂಖ್ಯೆಯ ಗೋಲುಗಳನ್ನು ಬಾರಿಸಿದ ಆಟಗಾರ್ತಿಯರೆಂಬ ಪ್ರಶಸ್ತಿ ಗೆದ್ದರು. ಸವಿತಾ ಪೂನಿಯಾ ಗರಿಷ್ಠ ಸಂಖ್ಯೆಯ ಗೋಲುಗಳನ್ನು ಗಳಿಸಿದ ಆಟಗಾರ್ತಿ ಪ್ರಶಸ್ತಿ ಗೆದ್ದರು. ರಾಣಿ ರಾಂಪಾಲ್ ಮತ್ತು ನವನೀತ್ ಕೌರ್ ಜಂಟಿಯಾಗಿ ಗರಿಷ್ಠ ಸಂಖ್ಯೆಯ ಗೋಲುಗಳಿಗೆ ನೆರವಾದ ಆಟಗಾರ್ತಿಯರೆಂಬ ಪ್ರಶಸ್ತಿಗೆ ಪಾತ್ರರಾದರು. ಗ್ರೇಸ್ ಎಕ್ಕಾ ಗರಿಷ್ಠ ಸಂಖ್ಯೆಯ ರಕ್ಷಣಾತ್ಮಕ ಟ್ಯಾಕಲ್‌ಗಳಿಗಾಗಿ ಪ್ರಶಸ್ತಿ ಗೆದ್ದರು. ಮಿಡ್‌ಫೀಲ್ಡ್‌ನಲ್ಲಿ ಗರಿಷ್ಠ ಪ್ರತಿರೋದ ತೋರಿದ ಪ್ಲೇಯರ್‌ ಆಗಿ ಪಿ ಸುಶೀಲಾ ಚಾನು ಗುರುತಿಸಿಕೊಂಡರು. ಪ್ರತಿಯೊಬ್ಬರಿಗೂ 5 ಲಕ್ಷ ರೂ. ನಗದು ಲಭಿಸಿತು.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ದಾಖಲೆಯ ಪದಕಗಳು

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ದಾಖಲೆಯ ಪದಕಗಳು

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಈ ಬಾರಿ ಭಾರತಕ್ಕೆ ದಾಖಲೆ ಸಂಖ್ಯೆಯ ಪದಕಗಳು ಲಭಿಸಿದ್ದವು. ಈ ಬಾರಿ ಭಾರತ ನಾಲ್ಕು ಕಂಚು, 2 ಬೆಳ್ಳಿ ಮತ್ತು 1 ಬಂಗಾರ ಸೇರಿ ಒಟ್ಟು ಏಳು ಪದಕಗಳನ್ನು ಗೆದ್ದಿತ್ತು. ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನುಗೆ ಬೆಳ್ಳಿ, ಮಹಿಳಾ ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧುಗೆ ಕಂಚು, ಮಹಿಳಾ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್‌ಗೆ ಕಂಚಿನ ಪದಕ, ಪುರುಷರ ರಸ್ಲಿಂಗ್‌ನಲ್ಲಿ ರವಿ ಕುಮಾರ್ ದಹಿಯಾಗೆ ಬೆಳ್ಳಿ ಪದಕ, ಪುರುಷರ ರಸ್ಲಿಂಗ್‌ನಲ್ಲಿ ಭಜರಂಗ್ ಪೂನಿಯಾಗೆ ಕಂಚಿನ ಪದಕ, ಪುರುಷರ ಹಾಕಿ ತಂಡಕ್ಕೆ ಕಂಚಿನ ಗೌರವ, ಪುರುಷರ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾಗೆ ಬಂಗಾರದ ಪದಕ ಸಿಕ್ಕಿತ್ತು. ಇದಕ್ಕೂ ಹಿಂದೆ ಒಲಿಂಪಿಕ್ಸ್‌ನಲ್ಲಿ 6 ಪದಕಗಳನ್ನು ಗೆದ್ದಿದ್ದೆ ದೊಡ್ಡ ದಾಖಲೆಯಾಗಿತ್ತು. ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಆರು ಪದಕಗಳು ಬಂದಿದ್ದವು. ಟೋಕಿಯೋದಲ್ಲಿ ಶೂಟಿಂಗ್, ಆರ್ಚರಿ, ಟೆನಿಸ್, ಜಿಮ್ನ್ಯಾಸ್ಟಿಕ್, ಸ್ವಿಮ್ಮಿಂಗ್, ಫೆನ್ಸಿಂಗ್, ಟೇಬಲ್ ಟೆನಿಸ್ ಇತ್ಯಾದಿ ಸ್ಪರ್ಧೆಗಳಲ್ಲಿ ಭಾರತಕ್ಕೆ ತೀವ್ರ ನಿರಾಸೆಯಾಗಿತ್ತು.

Story first published: Thursday, August 19, 2021, 13:14 [IST]
Other articles published on Aug 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X