ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ನವೆಂಬರ್-ಡಿಸೆಂಬರ್‌ನಲ್ಲಿ ಹಾಕಿ ಜೂನಿಯರ್ ವಿಶ್ವಕಪ್‌ಗೆ ಒಡಿಶಾ ಆತಿಥ್ಯ

Odisha to host Hockey Junior World Cup in November-December

ನವದೆಹಲಿ: ಪುರುಷರ ಜೂನಿಯರ್ ವಿಭಾಗದ ಹಾಕಿ ವಿಶ್ವಕಪ್‌ ಟೂರ್ನಿಗೆ ಒಡಿಶಾ ಆತಿಥ್ಯ ವಹಿಸಿಕೊಳ್ಳಲಿದೆ. ಈ ವಿಶ್ವಕಪ್‌ ಟೂರ್ನಿ ಭುವನೇಶ್ವರ್‌ನ ಕಾಳಿಂಗ ಸ್ಟೇಡಿಯಂನಲ್ಲಿ ನವೆಂಬರ್ 24ರಿಂದ ಡಿಸೆಂಬರ್ 5ರ ವರೆಗೆ ನಡೆಯಲಿದೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಈ ವಿಚಾರವನ್ನು ಗುರುವಾರ (ಸೆಪ್ಟೆಂಬರ್ 23) ಘೋಷಿಸಿದ್ದಾರೆ.

ಐಪಿಎಲ್‌ನಲ್ಲಿ ಆಡಿದ 8 ಪಂದ್ಯಗಳಲ್ಲಿ 7 ಪಂದ್ಯ ಸೋತ ತಂಡಗಳ ಪಟ್ಟಿಐಪಿಎಲ್‌ನಲ್ಲಿ ಆಡಿದ 8 ಪಂದ್ಯಗಳಲ್ಲಿ 7 ಪಂದ್ಯ ಸೋತ ತಂಡಗಳ ಪಟ್ಟಿ

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನವೀನ್ ಪಟ್ನಾಯಕ್, ಎರಡು ತಿಂಗಳ ಬಳಿಕ ನಡೆಯಲಿರುವ ಪುರುಷರ ಜೂನಿಯರ್ ಹಾಕಿ ವಿಶ್ವಕಪ್‌ಗೆ ಸರ್ಕಾರದ ಮೂಲಕ ಬೆಂಬಲ ನೀಡುವಂತೆ ಹಾಕಿ ಇಂಡಿಯಾ ಒಡಿಶಾ ಸರ್ಕಾರವನ್ನು ಕೇಳಿಕೊಂಡಿದ್ದಾಗಿ ಹೇಳಿದ್ದಾರೆ.

"ಇಂಥ ದೊಡ್ಡ ಮಟ್ಟದ ಟೂರ್ನಿ ಆಯೋಜಿಸಲು ಸಣ್ಣ ಸೂಚನೆ ನೀಡಲಾಗಿದೆ. ಅದರಲ್ಲೂ ಮುಖ್ಯವಾಗಿ ಇಂಥ ಕೋವಿಡ್ ಪಿಡುಗಿನ ಸಂದರ್ಭದಲ್ಲಿ ಟೂರ್ನಿ ನಡೆಸೋದು ಸವಾಲಿನ ಸಂಗತಿ. ಆದರೆ ದೇಶದ ಪ್ರತಿಷ್ಠೆಯನ್ನು ಕಾಯುವುದಕ್ಕೋಸ್ಕರ ನಾವು ಟೂರ್ನಿ ಆಯೋಜಿಸುವುದಾಗಿ ಸುಲಭವಾಗಿ ಒಪ್ಪಿಕೊಂಡೆವು," ಎಂದು ಪಟ್ನಾಯಕ್ ತಿಳಿಸಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ ರೋಮಾಂಚನಕಾರಿ ಅಧಿಕೃತ ಗೀತೆ ಬಿಡುಗಡೆಐಸಿಸಿ ಟಿ20 ವಿಶ್ವಕಪ್ ರೋಮಾಂಚನಕಾರಿ ಅಧಿಕೃತ ಗೀತೆ ಬಿಡುಗಡೆ

"ಹಾಲಿ ಚಾಂಪಿಯನ್ಸ್ ಆಗಿರುವ ಭಾರತದ ಹಾಕಿ ತಂಡ ಇದರ ಸದುಪಯೋಗವನ್ನು ಪಡೆದುಕೊಳ್ಳಲಿದೆ. ತವರು ನೆಲದ ಪರಿಸ್ಥಿತಿಯ ಅನುಕೂಲವನ್ನು ಬಳಸಿಕೊಂಡು ಮತ್ತೆ ಭಾರತ ಗೆಲ್ಲುವಂತಾಗಬೇಕು," ಎಂದು ಪಟ್ನಾಯಕ್ ಹಾರೈಸಿದ್ದಾರೆ.

Story first published: Thursday, September 23, 2021, 20:16 [IST]
Other articles published on Sep 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X