ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಒಲಿಂಪಿಕ್ಸ್: ಹಾಕಿಯಲ್ಲಿ ಭಾರತದ ಸಾಧನೆಯಿಂದ ಪಾಕಿಸ್ತಾನದಲ್ಲೂ ಹೆಚ್ಚಿದ ಭರವಸೆ!

Olympics: Pakistan hockey greats praises Indias success in Hockey

ಟೋಕಿಯೋ, ಆಗಸ್ಟ್ 3: ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತ ಹಿಂದೆಂದೂ ಮಾಡಲಾಗದ ಸಾಧನೆಯನ್ನು ಮಾಡಿದೆ. ಭಾರತದ ಮಹಿಳಾ ಹಾಗೂ ಪುರುಷ ತಂಡಗಳು ಇದೇ ಮೊದಲ ಬಾರಿಗೆ ಲಗ್ಗೆಯಿಟ್ಟಿದೆ. ಪುರುಷರ ತಂಡ ಸೆಮಿಫೈನಲ್‌ ಹಂತದಲ್ಲಿ ಸೋತರೂ ಈ ಹಂತಕ್ಕೇರಿದ ಸಾಧನೆ ನಾಲ್ಕು ದಶಕಗಳಲ್ಲಿ ಅತ್ಯುನ್ನತ ಸಾಧನೆಯಾಗಿದೆ. ಸೋತರು ಭಾರತ ತಂಡಕ್ಕೆ ಕಂಚು ಗೆಲ್ಲುವ ಅವಕಾಶ ಇನ್ನೂ ಇದೆ. ಮಹಿಳಾ ತಂಡ ಸೆಮಿಫೈನಲ್ ಪಂದ್ಯವನ್ನು ಬುಧವಾರ ಎದುರಿಸಲಿದೆ.

ಹಾಕಿ ಕ್ರೀಡೆಯಲ್ಲಿ ಭಾರತ ತಂಡ ನೀಡಿದ ಈ ಪ್ರದರ್ಶನ ಭಾರತದಲ್ಲಿ ಮಾತ್ರವಲ್ಲ ಬದ್ಧ ಎದುರಾಳಿಯಾಗಿರುವ ಪಾಕಿಸ್ತಾನದಲ್ಲಿಯೂ ಭರವಸೆ ಮೂಡುವಂತೆ ಮಾಡಿದೆ. 20ನೇ ಶತಮಾನದಲ್ಲಿ ಹಾಕಿಯ ಶಕ್ತಿಕೇಂದ್ರಗಳಲ್ಲಿ ಒಂದಾಗಿದ್ದ ಪಾಕಿಸ್ತಾನ ತಂಡ ಇತ್ತೀಚೆಗೆ ಅತ್ಯಂತ ಹೀನಾಯ ಮಟ್ಟವನ್ನು ತಲುಪಿದೆ. ಒಲಿಂಪಿಕ್ಸ್‌ನಲ್ಲಿ ಭಾರತ ತಂಡ ನೀಡಿದ ಪ್ರದರ್ಶನದಿಂದಾಗಿ ಪಾಕಿಸ್ತಾನದಲ್ಲಿಯೂ ನಿರೀಕ್ಷೆ ಮೂಡಿಸಿದೆ. ಈ ಮಾತನ್ನು ಪಾಕಿಸ್ತಾನ ಹಾಕಿ ತಂಡದ ಕೆಲ ಮಾಜಿ ಆಟಗಾರರೇ ವ್ಯಕ್ತಪಡಿಸುತ್ತಿದ್ದಾರೆ.

ಪಾಕಿಸ್ತಾನ ಹಾಕಿ ತಂಡದ ಮಾಜಿ ಆಟಗಾರ ಹಸನ್ ಸರ್ದಾರ್ ಈ ಬಾರಿ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಆರಂಭಿಸಿದ ಬಳಿಕ ಹೆಚ್ಚು ಕುತೂಹಲದಿಂದ ಹಾಕಿ ಪಂದ್ಯಗಳನ್ನು ವೀಕ್ಷಿಸಲು ಆರಂಭಿಸಿದೆ ಎಂದಿದ್ದಾರೆ.

ಟೋಕಿಯೋ ಒಲಿಂಪಿಕ್ಸ್: ಪುರುಷರ ಹಾಕಿ ಸೆಮಿಫೈನಲ್‌ನಲ್ಲಿ ಭಾರತಕ್ಕೆ ನಿರಾಸೆಟೋಕಿಯೋ ಒಲಿಂಪಿಕ್ಸ್: ಪುರುಷರ ಹಾಕಿ ಸೆಮಿಫೈನಲ್‌ನಲ್ಲಿ ಭಾರತಕ್ಕೆ ನಿರಾಸೆ

"ಇದು ಭಾರತೀಯ ಹಾಕಿ ವ್ಯವಸ್ಥೆಗೆ ದೊರೆತ ಅತ್ಯಂತ ದೊಡ್ಡ ಯಶಸ್ಸಾಗಿದೆ. ಇದರಲ್ಲಿ ಹಣಕಾಸಿವ ವಿಚಾರಗಳು ಸಾಕಷ್ಟಿದೆ. ನಾವು ಹಾಕಿಯ ಮೇಲೆ ಬಂಡವಾಳ ಹಾಕದಿದ್ದರೆ ಆಟಗಾರರನ್ನು ಚೆನ್ನಾಗಿ ನೋಡಿಕೊಳ್ಳದಿದ್ದರೆ ಪ್ರತಿಭೆಯನ್ನು ಎಲ್ಲಿಂದ ಪಡೆಯಲು ಸಾಧ್ಯವಿದೆ. ಪಾಕಿಸ್ತಾನದಲ್ಲಿ ಹಾಕಿಯ ಬದಲಿಗೆ ಕ್ರಿಕೆಟ್‌ನತ್ತ ಯುವಕರು ಹೆಚ್ಚಿನ ಚಿತ್ತಹರಿಸುತ್ತಿದ್ದಾರೆ. ಯಾಕೆಂದರೆ ಅವರಿಗೆ ಹಾಕಿಯಲ್ಲಿ ಅಸುರಕ್ಷತೆ ಇದೆ ಎಂಬುದು ತಿಳಿದಿದೆ" ಎಂದು ಹಸನ್ ಸರ್ದಾರ್ ಅಭಿಪ್ರಾಯಟ್ಟಿದ್ದಾರೆ.

ಭಾರತದ ಯಶಸ್ಸಿಗೆ ಫಿಟ್‌ನೆಸ್ ಕಾರಣ: ಪ್ರಸಕ್ತ ಕಾಲದಲ್ಲಿ ಹಾಕಿಯ ಯಶಸ್ಸು ಫಿಟ್‌ನೆಸ್ ಮೇಲೆ ನೆಟ್ಟಿದೆ. ಭಾರತದ ಹಾಕಿ ಆಟಗಾರರನ್ನು ನೋಡಿದರೆ ಅವರೆಲ್ಲಾ ಅತ್ಯಂತ ಫಿಟ್ ಆಗಿದ್ದಾರೆ. ಭಾರತದ ಆಟಗಾರರು ಆಧುನಿಕ ಕಾಲದ ತಾಂತ್ರಿಕ ಕೌಶಲ್ಯ ಮತ್ತು ಏಷ್ಯಾದ ಸಾಂಪ್ರದಾಯಿಕ ಕೌಶಲ್ಯವನ್ನು ಒಗ್ಗೂಡಿಸಿ ಪ್ರದರ್ಶನ ನೀಡುವುದನ್ನು ನೋಡಲು ಸಂತಸವಾಗುತ್ತದೆ" ಎಂದು ಪಾಕಿಸ್ತಾನದ ಮಾಜಿ ಹಾಕಿ ಆಟಗಾರ ಹೇಳಿದ್ದಾರೆ.

"ಭಾರತದ ತಂಡದ ಸಾಧನೆ ಸಣ್ಣದಲ್ಲ: ಭಾರತೀಯ ಹಾಕಿ ತಂಡದ ಸಾಧನೆಗೆ ಪಾಕಿಸ್ತಾನ ಹಾಕಿ ಫೆಡರೇಶನ್‌ನ ಕಾರ್ಯದರ್ಶಿ ಆಸಿಫ್ ಬಿಜ್ವಾ ಪಿಟಿಐಗೆ ಪ್ರತಿಕ್ರಿಯಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಭಾರತ ತಮಡದ ಈ ಯಶಸ್ಸು ಪಾಕಿಸ್ತಾನದಲ್ಲಿಯೂ ಹಾಕಿ ಕ್ರೀಡೆಯ ಪುನರುಜ್ಜೀವನಕ್ಕೆ ಕಾರಣವಾಗಬಹುದು ಎಂದಿದ್ದಾರೆ. "ಭಾರತ ತಂಡ ಸೆಮಿಫೈನಲ್‌ಗೆ ಪ್ರವೇಶ ಪಡೆದಿರುವುದು ಸಣ್ಣ ಸಾಧನೆಯಲ್ಲ. ಇದು ಪಾಕಿಸ್ತಾನದಲ್ಲಿ ಹಾಕಿಯ ಪುನರುಜ್ಜೀವನಕ್ಕೆ ಕಾರಣವಾಗುತ್ತದೆ ಎಂದು ನಾನು ಹೇಳುತ್ತೇನೆ. ಏಕೆಂದರೆ ನಾವು ಯಾವಾಗಲೂ ಕಠಿಣ ಪ್ರತಿಸ್ಪರ್ಧಿಗಳಾಗಿದ್ದೇವೆ ಮತ್ತು ಪಾಕಿಸ್ತಾನದಲ್ಲಿರುವ ಜನರು ಈಗ ನಮ್ಮ ತಂಡ ಉತ್ತಮ ಸ್ಥಾನಕ್ಕೆ ಮರಳಬೇಕೆಂದಯ ಬಯಸುತ್ತಾರೆ" ಎಂದು ಆಸಿಫ್ ಬಿಜ್ವಾ ಹೇಳಿದ್ದಾರೆ.

ಸೆಮಿಫೈನಲ್‌ನಲ್ಲಿ ಎಡವಿದ ಭಾರತ: ಇನ್ನು ಈ ಬಾರಿಯ ಹಾಕಿಯಲ್ಲಿ ಭಾರತ ತಂಡ ಆರಂಭದಿಂದಲೂ ಅತ್ಯುತ್ತಮ ಪ್ರದರ್ಶನ ನೀಡಿಕೊಂಡು ಬಂದಿದೆ. ಪೂಲ್ ಹಂತದಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೊರತು ಪಡಿಸಿ ಉಳಿದ ಎಲ್ಲಾ ತಂಡಗಳ ವಿರುದ್ಧವೂ ಅದ್ಭುತ ಆಟವನ್ನು ಪ್ರದರ್ಶಿಸಿತು. ಕ್ವಾರ್ಟರ್‌ಫೈನಲ್‌ನಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ ಸೆಣೆಸಾಡಿದ ಭಾರತೀಯ ತಂಡ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತು. ಆದರೆ ಸೆಮಿಫೈನಲ್‌ನಲ್ಲಿ ದ್ವಿತೀಯ ಶ್ರೇಯಾಂಕಿತ ಬೆಲ್ಜಿಯಂ ತಂಡದ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಅಂತಿಮ ಹಂತದಲ್ಲಿ ಸೋಲು ಕಾಣಬೇಕಾಯಿತು. ಈ ಮೂಲಕ ಭಾರತ ಚಿನ್ನದ ಪದಕದ ಕನಸು ಭಗ್ನವಾಗಿದೆ. ಆದರೆ ಕಂಚಿನ ಪದಕ ಗೆಲ್ಲುವ ಅವಕಾಶ ಇನ್ನು ಕೂಡ ಭಾರತಕ್ಕಿದೆ.

Story first published: Tuesday, August 3, 2021, 16:25 [IST]
Other articles published on Aug 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X