ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

2 ಕೋಟಿ ಬಹುಮಾನ ನೀಡಿದ ಕೇರಳ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ ಗೋಲ್‌ಕೀಪರ್ ಶ್ರೀಜೇಶ್

PR Sreejesh expresses gratitude to the Kerala government for the Rs 2 crore cash reward

ಭಾರತದ ಹಾಕಿ ತಂಡದ ಸ್ಟಾರ್ ಗೋಲ್‌ಕೀಪರ್ ಪಿಆರ್ ಶ್ರೀಜೇಶ್ ಒಲಿಂಪಿಕ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಭಾರತದ ಸಾಧನೆಗೆ ವಿಶೇಷ ಕೊಡುಗೆ ನೀಡಿದ್ದಾರೆ. ಗೋಲ್ ಪೆಟ್ಟಿಗೆಯ ಮುಂದೆ ನಿಂತು ಎದುರಾಳಿಗಳ ದಾಳಿಯನ್ನು ದಿಟ್ಟವಾಗಿ ಎದುರಿಸಿದ್ದರು ಶ್ರೀಜೇಶ್. ಅವರ ಈ ಪ್ರದರ್ಶನದಿಂದಾಗಿ ಸಾಕಷ್ಟು ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಶ್ರೀಜೇಶ್ ಅವರ ಈ ಪ್ರದರ್ಶನವನ್ನು ಮೆಚ್ಚಿ ಕೇರಳ ಸರ್ಕಾರ ಕಳೆದ ಮಂಗಳವಾರ ಅವರಿಗೆ 2 ಕೋಟಿ ರೂಪಾಯಿಗಳ ವಿಶೇಷ ಬಹುಮಾನವನ್ನು ಘೋಷಿಸಿತು. ಈ ಬಹುಮಾನಕ್ಕೆ ಶ್ರೀಜೇಶ್ ಪ್ರತಿಕ್ರಿಯೆ ನೀಡಿದ್ದು ಕೇರಳ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಕಳೆದ 41 ವರ್ಷಗಳಿಂದ ಪದಕದ ಬರವನ್ನು ಅನುಭವಿಸುತ್ತಿದ್ದ ಭಾರತ ಈ ಬಾರಿ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈ ಐತಿಹಾಸಿಕ ಸಾಧನೆ ಮಾಡಿದ ಭಾರತೀಯ ಹಾಕಿ ತಂಡದ ಭಾಗವಾಗಿದ್ದರು ಶ್ರೀಜೇಶ್. ಕೇರಳ ಮೂಲದ ಈ ಆಟಗಾರನಾಗಿರುವ ಶ್ರೀಜೇಶ್‌ಗೆ ಪ್ರೋತ್ಸಾಹವನ್ನು ನೀಡುವ ನಿಟ್ಟಿನಲ್ಲಿ ಭಾರೀ ಮೊತ್ತದ ನಗದು ಬಹುಮಾನವನ್ನು ಘೋಷಿಸಿತ್ತು. ಇನ್ನು ಶ್ರೀಜೇಶ್ ಮಾತ್ರವಲ್ಲ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಭಾರತೀಯ ಹಾಕಿ ತಂಡದ ಎಲ್ಲಾ ಸದಸ್ಯರಿಗೂ ಕೂಡ ತಲಾ ಐದು ಕೋಟಿ ರೂಪಾಯಿಯನ್ನು ಬಹುಮಾನವಾಗಿ ನೀಡಲಾಗುತ್ತದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಘೋಷಿದಿದ್ದಾರೆ.

ಲಾರ್ಡ್ಸ್ ಟೆಸ್ಟ್‌ನಲ್ಲಿ ಭಾರತದ ವಿರುದ್ಧ ಮುನ್ನಡೆ ಸಾಧಿಸಲು 4 ಅಂಶಗಳ ಮೇಲೆ ಇಂಗ್ಲೆಂಡ್ ಚಿತ್ತಲಾರ್ಡ್ಸ್ ಟೆಸ್ಟ್‌ನಲ್ಲಿ ಭಾರತದ ವಿರುದ್ಧ ಮುನ್ನಡೆ ಸಾಧಿಸಲು 4 ಅಂಶಗಳ ಮೇಲೆ ಇಂಗ್ಲೆಂಡ್ ಚಿತ್ತ

ಇಷ್ಟು ಮಾತ್ರವಲ್ಲದೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ರೀಡಾ ವಿಭಾಗದ ಉಪ ನಿರ್ದೇಶಕನ ಹುದ್ದೆಯನ್ನು ಹೊಂದಿದ್ದ ಶ್ರೀಜೇಶ್ ಅವರಿಗೆ ಭಡ್ತಿಯನ್ನು ಕೂಡ ನೀಡಲಾಗಿದೆ. ಶ್ರೀಜೇಶ್ ಅವರಿಗೆ ಸಹ ನಿರ್ದೇಶಕನ ಸ್ಥಾನಕ್ಕೆ ಭಡ್ತಿ ನೀಡಲಾಗಿದೆ.

ಕೇರಳ ಸರ್ಕಾರ ನಿಡಿದ ಈ ಬಹುಮಾನಕ್ಕೆ ಶ್ರೀಜೇಶ್ ಧನ್ಯವಾದವನ್ನು ಸಲ್ಲಿಸಿದ್ದಾರೆ. "ನನ್ನನ್ನು ಗುರುತಿಸಿರುವುದಕ್ಕೆ ಧನ್ಯವಾದಗಳು. ಇದು ಕ್ರೀಡೆಯತ್ತ ಲಕ್ಷಾಂತರ ಮಕ್ಕಳು ತಿರುಗಿ ನೋಡುವಂತೆ ಮಾಡಲು ಸ್ಪೂರ್ತಿ ನೀಡಲಿದೆ. ವಿಶೇಷವಾಗಿ ಹಾಕಿಯನ್ನು ಮತ್ತಷ್ಟು ಗಂಭೀರವಾಗಿ ಪರಿಗಣಿಸಲು ಸಹಾಯವಾಗಲಿದೆ" ಶ್ರೀಜೇಶ್ ಟ್ವೀಟ್ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ.

ಕೇರಳ ಸರ್ಕಾರ ಆರಂಭದಲ್ಲಿ ಈ ಬಹುಮಾನದ ಘೋಷಣೆಯನ್ನು ಮಾಡಿರಲಿಲ್ಲ. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕದ ಸಾಧನೆ ಮಾಡಿದ ಹಾಕಿ ತಂಡದಲ್ಲಿ ಕೇರಳದ ಆಟಗಾರ ಶ್ರೀಜೇಶ್ ಇದ್ದರೂ ಆತನಿಗೆ ಬಹುಮಾನವನ್ನು ಘೋಷಿಸಿಲ್ಲ ಎಂದು ಕೇರಳ ಸರ್ಕಾರದ ವಿರುದ್ಧ ಮಾಜಿ ಕ್ರೀಡಾಪಟು ಅಂಜು ಬಾಬಿ ಜಾರ್ಜ್ ಟೀಕೆಯನ್ನು ಮಾಡಿದ್ದರು. ಒಲಿಂಪಿಕ್ಸ್ ಪದಕಕ್ಕಿರುವ ಮೌಲ್ಯವನ್ನು ನಾವು ಗೌರವಿಸಬೇಕು ಎಂದು ಅಂಜು ಬಾಬ್ ಜಾರ್ಜ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದರು. ಈ ಬೆಳವಣಿಗೆಯ ಬಳಿಕ ಕೇರಳ ಸರ್ಕಾರ ಈ ಬಹುಮಾನದ ಘೋಷಣೆ ಮಾಡಿದೆ. ಇನ್ನು ಇದಕ್ಕೂ ಮುನ್ನ ದುಬೈ ಮೂಲದ ಉದ್ಯಮಿ ಡಾ. ಶಂಶೀರ್ ವಯಲಿಲ್ ಈ ವಾರದ ಆರಂಭದಲ್ಲಿಯೇ ಶ್ರೀಜೇಶ್ ಅವರಿಗೆ 1 ಕೋಟಿ ಮೌಲ್ಯದ ಬಹುಮಾನವನ್ನು ಘೋಷಣೆ ಮಾಡಿದ್ದರು.

ಶಕೀಬ್ ಅಲ್ ಹಸನ್, ಸ್ಟಫಾನಿ ಟೇಲರ್‌ಗೆ ಜುಲೈ ತಿಂಗಳ ಐಸಿಸಿ ಪ್ಲೇಯರ್ ಆಫ್‌ ದ ಮಂಥ್ ಪ್ರಶಸ್ತಿಶಕೀಬ್ ಅಲ್ ಹಸನ್, ಸ್ಟಫಾನಿ ಟೇಲರ್‌ಗೆ ಜುಲೈ ತಿಂಗಳ ಐಸಿಸಿ ಪ್ಲೇಯರ್ ಆಫ್‌ ದ ಮಂಥ್ ಪ್ರಶಸ್ತಿ

ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಪರವಾಗಿ ಮಿಂಚಿದ ಆಟಗಾರರಲ್ಲಿ ಶ್ರೀಜೇಶ್ ಕೂಡ ಒಬ್ಬರು. ತನ್ನ ಅದ್ಭುತ ಪ್ರದರ್ಶನದ ಮೂಲಕ ಭಾರತ ಸೆಮಿಫೈನಲ್ ಹಂತದವರೆಗೆ ತಲುಪುವಲ್ಲಿ ಶ್ರೀಜೇಶ್ ಪಾತ್ರ ಬಹಳ ದೊಡ್ಡದಿತ್ತು. ಕಂಚಿನ ಪದಕಕ್ಕಾಗಿ ಜರ್ಮನಿ ವಿರುದ್ಧ ನಡೆದ ಕದನದಲ್ಲಿಯೂ ಶ್ರೀಜೇಶ್ ನಿರ್ವಹಿಸಿದ ಪಾತ್ರ ನಿರ್ಣಾಯಕವಾಗಿತ್ತು. ಈ ಪಂದ್ಯದಲ್ಲಿ ಜರ್ಮನಿ ತಂಡ ಬರಿಬ್ಬರಿ 13 ಪೆನಾಲ್ಟಿ ಕಾರ್ನರ್‌ಗಳನ್ನು ಪಡೆದುಕೊಂಡಿತ್ತು. ಆದರೆ ಇದರಲ್ಲಿ ಗೋಲುಗಳಿಸಲು ಸಾಧ್ಯವಾಗಿದ್ದು ಒಂದು ಮಾತ್ರ. ಕೊನೆಯ ಕ್ಷಣದಲ್ಲಿಯೂ ಗೋಲು ಗಳಿಸುವ ಅವಕಾಶವನ್ನು ಜರ್ಮನಿ ಹೊಂದಿದ್ದಾಗಲೂ ಶರೀಜೇಶ್ ಅದಕ್ಕೆ ಅಡ್ಡಿಯಾಗುವ ಮೂಲಕ ಭಾರತ 5-4 ಅಂತರದಿಂದ ಗೆಲುವು ಸಾಧಿಸಲು ಸಾಧ್ಯವಾಗಿಸಿದ್ದರು.

Story first published: Thursday, August 12, 2021, 16:24 [IST]
Other articles published on Aug 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X